![]()
ವಿರಾಮದ ವೇಳೆಗಾಗಿ ಬ್ಲಾಗಲ್ಲಿ ನಾನು ಹೆಚ್ಚಾಗಿ ಹಾಡುಗಳ ಬಗ್ಗೆ, ಸಂಗೀತದ ಬಗ್ಗೆ ಬರೆಯುವುದಾದರೂ ಆಗಾಗ ಖಗೋಳ ವಿಸ್ಮಯಗಳ ಬಗ್ಗೆಯೂ ಬರೆದದ್ದುಂಟು. ನನಗೇನಾದರೂ ಅನುಮಾನ ಮೂಡಿದಾಗ ಅಲ್ಲಿ ಇಲ್ಲಿ ಹುಡುಕಿ ಮಾಡಿಟ್ಟುಕೊಂಡ ಟಿಪ್ಪಣಿಗಳನ್ನು ಜೋಡಿಸಿ ಬೇಕೆನಿಸಿದಾಗ ಸ್ವಾರ್ಥಕ್ಕೂ ಪರಾರ್ಥಕ್ಕೂ ಒದಗಿ ಬರಲಿ ಎಂಬ ಉದ್ದೇಶದಿಂದ ಬರೆದ ಲೇಖನಗಳವು. ಅವುಗಳ ಸಂಖ್ಯೆ ಈಗ 10 ಆಗಿದ್ದು ಕೆಲವು ಲೇಖನಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ.
ಬ್ಲಾಗಿನಲ್ಲಿರುವ ನೂರಾರು ಲೇಖನಗಳ ಮಧ್ಯೆ ಅವುಗಳನ್ನು ಹುಡುಕುವುದು ತ್ರಾಸದಾಯಕವಾದ್ದರಿಂದ ಅವುಗಳ ಲಿಂಕುಗಳೆಲ್ಲ ಇಲ್ಲಿ ಒಂದೇ ಕಡೆ ಸಿಗುವ ಹಾಗೆ ಮಾಡಿದ್ದೇನೆ. ಇಲ್ಲಿ ಕಾಣಿಸುವ ಲೇಖನಗಳ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ಆಯಾ ಲೇಖನ ತೆರೆದುಕೊಳ್ಳುತ್ತದೆ.
ಈ ಲೇಖನಗಳನ್ನು ನೋಡಿದ ಬಂಧುಮಿತ್ರರು ಎಂದಾದರೂ ಮುಖತಾ ಸಿಕ್ಕಿದಾಗ 'ನೀವು ಖಗೋಳ ಶಾಸ್ತ್ರಜ್ಞರೇ' ಎಂದು ನನ್ನಲ್ಲಿ ಕೇಳುವುದುಂಟು! ನಾನು ಖಗೋಳ ಶಾಸ್ತ್ರಜ್ಞ ಅಲ್ಲದಿದ್ದರೂ ಖಗೋಳ ಶಾಸ್ತ್ರಾಸಕ್ತ ಹೌದು.
- ಚಿದಂಬರ ಕಾಕತ್ಕರ್.










No comments:
Post a Comment