ಲೈವ್ ರೇಡಿಯೊ





Instructions.

ಕೆಂಪು ಬಟನನ್ನು ಸ್ಪರ್ಶಿಸಿದೊಡನೆ ಅದು ನೀಲಿ ಬಣ್ಣಕ್ಕೆ ತಿರುಗಿ ಕೆಳಗೆ ನಿಲಯಗಳ ಪಟ್ಟಿ ಕಾಣಿಸುತ್ತದೆ. ಆವುಗಳ ಪೈಕಿ ಬೇಕೆನಿಸಿದ ನಿಲಯವನ್ನು ಸ್ಪರ್ಶಿಸಿದರೆ ಸ್ಕ್ರೀನಿನ ಮೇಲ್ಭಾಗದಲ್ಲಿ ಪ್ಲೇಯರ್ ಕಾಣಿಸಿಕೊಂಡು ನಿಲಯದ ಪ್ರಸಾರ ಕೇಳಿಸತೊಡಗುತ್ತದೆ. ಪಟ್ಟಿಯನ್ನು ಮುಟ್ಟಿ ನಿಲಯ ಬದಲಾಯಿಸಿದರೆ ಹೊಸ ನಿಲಯ ಅದೇ ಪ್ಲೇಯರಲ್ಲಿ ಕೇಳಿಸುತ್ತದೆ. ಪಟ್ಟಿಯ ಹೊರಭಾಗದಲ್ಲಿ ಸ್ಕ್ರೀನನ್ನು ಸ್ಪರ್ಶಿಸಿದರೆ ನಿಲಯಗಳ ಪಟ್ಟಿ ಅದೃಶ್ಯವಾಗಿ ಬಟನ್ ಮತ್ತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ಪುನ: ಮುಟ್ಟಿ ನಿಲಯಗಳ ಪಟ್ಟಿ ತೆರೆಯಬಹುದು. ಸ್ಕ್ರೀನನ್ನು ಪಿಂಚ್ ಮಾಡಿ ಗಾತ್ರ ಹಿಗ್ಗಿಸಬಹುದು. ಜಾಹೀರಾತುಗಳ ಕಿರಿಕಿರಿ ಇಲ್ಲ, ಬೇರೆ ಬೇರೆ ಸ್ಕ್ರೀನ್ ತೆರೆಯುವ ಅಗತ್ಯ ಇಲ್ಲ. App install ಮಾಡಬೇಕಾಗಿಲ್ಲ. ಮೊಬೈಲ್ ಸ್ಕ್ರೀನಿನ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳನ್ನು ಮುಟ್ಟಿದಾಗ ತೆರೆದುಕೊಳ್ಳುವ ಅಪ್ಷನ್‌ಗಳಲ್ಲಿ ಇರುವ Add to Home Screen ಬಳಸಿ Short Cut ಮಾಡಿಟ್ಟುಕೊಂಡರೆ ಮುಂದಿನ ಸಲ ತೆರೆಯಲು ಸುಲಭವಾಗುತ್ತದೆ. ವಿಂಡೋಸ್ ಆದರೆ bookmark ಮಾಡಬಹುದು. ಎಷ್ಟೇ ಬೆಲೆ ತೆತ್ತು ಕೊಂಡರೂ ಮೊಬೈಲಲ್ಲಿ ಶುಷ್ಕ ಧ್ವನಿಯೇ ಕೇಳಿಸುವುದು. ಆದ್ದರಿಂದ ಒಳ್ಳೆಯ ಹೆಡ್ ಫೋನ್ ಅಥವಾ ಮ್ಯೂಸಿಕ್ ಸಿಸ್ಟಮ್ ಬಳಸಿ ಶ್ರವಣಾನಂದ ಹೆಚ್ಚಿಸಿಕೊಳ್ಳಬಹುದು. ಆದರೆ ಹೆಡ್ ಫೋನ್ ಬಳಸುವಾಗ ವಾಲ್ಯೂಮ್ ಕಮ್ಮಿ ಇರಬೇಕು. ನಿಲಯ ಬದಲಾಯಿಸುವಾಗ ಒಮ್ಮೆಲೇ ವಾಲ್ಯೂಮ್ ಹೆಚ್ಚು ಕಮ್ಮಿ ಆಗುವುದೂ ಇದೆ. ನಿಮ್ಮಲ್ಲಿ bluetooth ಇರುವ ರೇಡಿಯೋ ಇದ್ದರೆ ಅದಕ್ಕೆ ಮೊಬೈಲನ್ನು ಲಿಂಕ್ ಮಾಡಿದರೆ ಹಳೆ ಕಾಲದ ರೇಡಿಯೋ ಆಲಿಸುವಿಕೆಯ ಆನಂದ ಅನುಭವಿಸಬಹುದು.

No comments: