ಅನಿಸಿಕೆಗಳು



"ವಿರಾಮದ ವೇಳೆಗಾಗಿ" ತಾಣದ್ದು ಸೀಮಿತ ಓದುಗ ವರ್ಗವಾದರೂ   ನಿಯಮಿತವಾಗಿ ಭೇಟಿ ನೀಡುವವರು ಅನೇಕರಿದ್ದಾರೆ. ಬರಹಗಳನ್ನು, ಚಿತ್ರಗಳನ್ನು, ಆಡಿಯೊ - ವೀಡಿಯೊಗಳನ್ನು ಮೆಚ್ಚಿಕೊಳ್ಳುವವರೂ ಸಾಕಷ್ಟಿದ್ದಾರೆ.   ಆದರೆ ಪ್ರತಿಕ್ರಿಯೆಗಳನ್ನು ಅಕ್ಷರ ರೂಪಕ್ಕೆ ಇಳಿಸುವವರು ಕೆಲವರು ಮಾತ್ರ.   ಆದರೂ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ಸಾಕಷ್ಟು  ಪ್ರತಿಕ್ರಿಯೆಗಳು ಬರುತ್ತಿರುತ್ತವೆ.  ಒಂದೇ ಕಡೆ  ನೋಡಲಾಗುವಂತೆ ಅವುಗಳನ್ನೆಲ್ಲ ಇಲ್ಲಿ ಒಟ್ಟು ಸೇರಿಸಿದ್ದೇನೆ.  ಯಾರು ಹೇಳಿದ್ದಾರೆ ಅನ್ನುವುದಕ್ಕಿಂತ ಏನು ಹೇಳಿದ್ದಾರೆ ಎನ್ನುವುದು ಮುಖ್ಯವಾದ್ದರಿಂದ ಇಲ್ಲಿ ಹೆಸರು ಉಲ್ಲೇಖಿಸಿಲ್ಲ.  ಸಂಬಂಧಿತ ಪುಟ ತೆರೆದರೆ ಎಲ್ಲ  ವಿವರ ತಿಳಿದುಕೊಳ್ಳಬಹುದು.  ಹಳೆ ಪತ್ರಗಳಂತೆ  ಇವುಗಳನ್ನೂ ಆಗಾಗ   ಓದಿ ಖುಶಿ ಪಡಬಹುದು!

ನಿಮ್ಮ ಸಲಹೆ ಸೂಚನೆ/ಅಭಿಪ್ರಾಯಗಳನ್ನೂ ಪ್ರತಿ ವಿಭಾಗದ ಕೊನೆಯಲ್ಲಿ ಇರುವ "Post a Comment" ಬಾಕ್ಸಲ್ಲಿ ನಿಸ್ಸಂಕೋಚವಾಗಿ ಬರೆಯಿರಿ.



ಚಿತ್ರಗೀತೆ ವಿಭಾಗದಲ್ಲಿ ನಿಮಗೆ ಡಾಕ್ಟರೇಟ್ ಕೊಡಬೇಕು. ಅದಕ್ಕಿಂತ ದೊಡ್ಡದು ಇದ್ದರೂ ಅದಕ್ಕೂ ನೀವು ಅರ್ಹರು. - Lakshmi GN


********************************************************************

You deserve a Doctorate for the kind of work you are doing (in the real sense). - Jayadev Prasad
 
********************************************************************

Wish I could have written this. Feel jealous article. So lucid , full of detail, nostalgic etc etc. Congratulations sir , please do keep up the good work and please do keep writing in. It is a real pleasure. Many Thanks.
********************************************************************
Following my years of search for Kannada Chandamama, I happened to visit your blog and went through your work. It's very commendable and the immediate thing that I could relate to was a prolific and authentic use of Kannada language all through your site. While I don't write much Kannada, but I always look for quality Kannada material for reading, which seems to be fading away. So, in that context your site felt so refreshing and came as a nice surprise. ಹಳೆ ಚಂದಮಾಮ.

- ಅಜ್ಞಾತ ಓದುಗ.

 ********************************************************************************
ಹಳೆಯ ಹಾಡು, ಸಿನೆಮಾಗಳ ಬಗೆಗಿನ ನಿಮ್ಮ ಅಧ್ಯಯನ , ಹುಡುಕಾಟ ತುಂಬ ಉನ್ನತ ಮಟ್ಟದ್ದು 🙏🙏ಯಾವ ಶ್ರೇಷ್ಠ ಸಂಶೋಧನೆಗೂ ಕಡಿಮೆ ಇಲ್ಲ ಅನಿಸ್ತು. 
ಈ ಬರಹಗಳು ವಿಸ್ತಾರವಾಗಿ ಪುಸ್ತಕ ರೂಪದಲ್ಲಿ ಬಂದಿದೆಯೇ? ಬಂದಿದ್ದರೆ ಸಿನೆಮಾ ಸಾಹಿತ್ಯದ ಉನ್ನತ ಬಹುಮಾನಗಳು ಸಿಕ್ಕಾವು.
ವಿಸಿಟರ್ಸ್ ಸಂಖ್ಯೆ ಕನ್ನಡಿಗರ ಒಟ್ಟು ಕೋಟಿಗಳಿಗೆ ಹೋಲಿಸಿದರೆ ಸಾಲದು ಅನಿಸಿ ಬೇಸರ ಆಯ್ತು. ನಮ್ಮ ಗುಣಗ್ರಾಹಿತ್ವವೆ ಕಡಿಮೆಯೋ?
ತಮಿಳಲ್ಲೋ ಮಲೆಯಾಳದಲ್ಲೋ ಇಂಗ್ಲಿಷಲ್ಲೋ ಬರೆದಿದ್ದರೆ ಆಯಾ ಜನ  ಬ್ಲಾಗಿನ ವಿಸಿಟರ್ಸ್ ಸಂಖ್ಯೆಯನ್ನು ಇನ್ನೆಷ್ಟೊ ಎತ್ತರದಲ್ಲಿಡುತ್ತಿದ್ದರು.

ಡಾ|| ಕೆ. ಮಹಾಲಿಂಗ ಭಟ್.


**********************************

ನಾನು ಬಾಲ್ಯದ ದಿನಗಳಲ್ಲಿ ಚಂದಮಾಮ ಪತ್ರಿಕೆ ಓದುತ್ತಿದ್ದೆ ಮುಂದೆ ಆ ಪತ್ರಿಕೆ ನಿಂತು ಹೋಯಿತು ಅಂತ ರ್ಜಾಲದ ಪರಿಚಯ ಆದ ಬಳಿಕ ಅದರಲ್ಲಿ ಸಿಗಬಹುದೇನೋ ಎಂದು ಶೋಧಿಸಿದಾಗ ಅಕಸ್ಮಾತ್ ಆಗಿ ವಿರಾಮದ ವೇಳೆಗಾಗಿ ಎಂಬ ಬ್ಲಾಗ್ ಸಿಕ್ಕಿತು ಅದರಲ್ಲಿ ನನ್ನ ಅಚ್ಚುಮೆಚ್ಚಿನ ಚಂದಮಾಮ ಸಿಕ್ಕಿತು. ಒಳಗೆ ಹೋದಂತೆ ನನ್ನ ಇಷ್ಟದ ವಿಷಯಗಳೆಲ್ಲಾ ಅದರಲ್ಲಿ ಇದ್ದವು ನನಗೋ ನಿಧಿಯೇ ಸಿಕ್ಕಿದಷ್ಟು ಸಂತೋಷವಾಯಿತು ನಾನು ಸಣ್ಣವನಿದ್ದಾಗ ತಾಯಿ ಹಾಡುತ್ತಿದ್ದ ಅವರ ನೆಚ್ಚಿನ ಗುರುಗಳಾದ ಮುಂಡಾಜೆಯ ರಾಮಚಂದ್ರ ಮಾಸ್ವರ್ ರವರ ಹಾಡುಗಳು ಲೇಖನ ಸಹ ಇದರಲ್ಲೇ ಇದೆ. ನನಗೆ ಕುತೂಹಲವಾಗಿ. ಇದನ್ನೆಲ್ಲಾ ಬರೆದವರು ಯಾರು ಎಂದು ನೋಡಿದರೆ ಚಿದಂಬರ ಕಾಕತ್ಕರ್ ಎಂಬ ಬಹಳ ವಿಶೇಷ ವ್ಯಕ್ತಿ ಎಂಬವರ ಪರಿಚಯವಾಯಿತು ನನಗೆ ಕುತೂಹಲ ತಾಳದೆ ಅವರಿಗೆ ದೂರವಾಣಿ ಮಾಡೇಬಿಟ್ಟೆ ಅಂತಹ ದೊಡ್ಡ ವ್ಯಕ್ತಿ. ನನ್ನಂಥವನ ಜೊತೆಗೆ ಸರಳವಾಗಿ ಮಾತನಾಡುವರೆಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಸಮಾಧಾನದಿಂದ ವಿಚಾರಿಸಿದರು. ಅವರು ನಿಜಕ್ಕೂ ಸಕಲ ಕಲಾ ವಲ್ಲಭ ಎಂದರೆ ತಪ್ಪಾಗಲಾರದು ಅವರು ಪ್ರತಿಯೊಂದು ವಿಷಯ ಗಳಬಗ್ಗೆ ಆಳವಾದ ಅಧ್ಯಯನ ನಡೆಸಿ ಬರೆಯಲು ಎಷ್ಟು ಶ್ರಮವಾಗಿರಬಹುದು. ಸಣ್ಣಪುಟ್ಟ ಸಂಗತಿಗಳಲ್ಲಿ ಸಿಗುವ ಖುಷಿ ಅನುಭವಿಸಿ ಬರೆದಿದ್ದಾರೆ ಈ ಬ್ಲಾಗ್‌ನಲ್ಲಿ ಮುಂದಿನ ಪೀಳಿಗೆಯವರಿಗೂ ಸಹ ಅದ್ಭುತ ಮಾಹಿತಿ ಮನೋರಂಜನೆಯ ಕಣಜವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ ಅವರ ಬಗ್ಗೆ ಹೆಚ್ಚು ಹೇಳಲು ನನಗೆ ಯೋಗ್ಯತೆ ಇಲ್ಲ ಇನ್ನೇಕೆ ತಡ ಈಗಲೇ viramatime.blogspot.com ನ ಒಳಗೆ ಹೋಗಿ ನಾನು ಹೇಳಿದ್ದು ನಿಜವೋ ಸುಳ್ಳೋ ನೀವೇ ನೋಡಿ  - ಓರ್ವ FB ಮಿತ್ರರು.



ಗಣಪನನ್ನು ಆ ರೀತಿ ಕೂರಿಸಿ ಬೀಳ್ಕೊಟ್ಟದ್ದು ನೋಡಿ ತುಂಬಾ ಇಷ್ಟವಾಯಿತು. ಈ ವಿಡಿಯೋವನ್ನು ನಾನು ಅದೆಷ್ಟು ಬಾರಿ ನೋಡಿದೆನೋ, ಅದೆಷ್ಟು ಜನರಿಗೆ ಕರೆದು ತೋರಿಸಿದೆನೋ ನನಗೆ ಗೊತ್ತಿಲ್ಲ. ನೋಡಿದಷ್ಟೂ ಸಾಲದು. ನಿಮಗೂ ನಿಮ್ಮ ಕುಟುಂಬಕ್ಕೂ ಧನ್ಯವಾದಗಳು.  ವಿಡಿಯೊ ವಿಭಾಗ

ಒಳ್ಳೆಯ ಹಾಡುಗಳ ಮೂಲಕ ಡಾ.ಪಿ.ಬಿ.ಎಸ್‌ಗೆ ಹುಟ್ಟುಹಬ್ಬದ ಉಡುಗೊರೆ ಕೊಟ್ಟಿದ್ದೀರಿ! ನೀವು ಈಗಾಗಲೇ ನಿಮ್ಮ ಬೇರೊಂದು ಪ್ರಸ್ತುತಿಯಲ್ಲಿ "ಚಂದ್ರಮಂಚಕೆ ಬಾ ಚಕೋರಿ..." [ಕುವೆಂಪು ರಚನೆ] ಬಳಸಿಕೊಂಡಿದ್ದಿರಾದರೂ ಇಲ್ಲಿಯೂ ಅದು ವಿರಾಜಿಸಬೇಕಿತ್ತು ಎಂದು ನನಗೆ ಅನಿಸಿತು.  ಮಂದ್ರದಲ್ಲಿ PBS ಮಾಂತ್ರಿಕತೆ

ಕನ್ನಡ ಹಿಂದಿ ಗೀತೆಗಳ ಬಗ್ಗೆ ಪಾಂಡಿತ್ಯ. ಆಳವಾದ ಜ್ಞಾನ. ಓದುಗರಿಗೆ ಪಂಡಿತರಿಗೆ ಪಾಮರರಿಗೆ ಮನದಟ್ಟುವಂತ ತಿಳಿ ಭಾಷೆ. ಓದಿ ಸವಿಯಿರಿ. ಕೊಳಲು ವಿಭಾಗಕ್ಕೆ ಹೋಗಲು ಮರೆಯದಿರಿ. ಕೃಷ್ಣನಾ ಕೊಳಲಿನ ಕರೆ ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.  ನನ್ನ ಬಗ್ಗೆ

To day again I listened to your flute recitals, I feel like I have taken bath, I wept unconsciously totally shaken. I know sound visuals & other senses do effect 1st mind then body, every thing is there but I desire transcendent. I thank you.  ಕೊಳಲಿನ ದನಿ

Thank you for posting this song I enjoyed singing this after so many yrs.  ರೈಲು ಪ್ರವಾಸ

ಎಸ್ .ಜಾನಕಿಯವರು ಪ್ರಶಸ್ತಿಗೆ ಪ್ರಾಪ್ತರಾದ ಸುದ್ದಿ ಕೇಳಿ ಸಂತೋಷಪಡುತ್ತಿದ್ದಾಗಲೇ ಇಲ್ಲಿ ಅವರ ಬಗ್ಗೆ ಓದಿ ಇನ್ನಷ್ಟು ಸಂತೋಷವಾಯಿತು.ಭಾವಪೂರ್ಣ ಗಾಯನ ಅವರದು.'ಮಗುವೇ......' ಹಾಡಿನ ಪ್ರಬುದ್ಧ ಗಾಯನದಂತೆಯೇ 'ಎಲ್ಲೂ ಹೋಗಲ್ಲ ಮಾಮಾ ....' ಹಾಡಿನ ಬಾಲಕಿಯ ಕಂಠವೂ ಮನ ಮುಟ್ಟುತ್ತದೆ.ಕೆಲವು ಹಾಡುಗಳನ್ನಂತೂ, 'ಅವರಲ್ಲದೆ ಇನ್ಯಾರೇ ಆಗಿದ್ದರೂ ಇಷ್ಟು ಚೆನ್ನಾಗಿ ಹಾಡುತ್ತಿರಲಿಲ್ಲ', ಎನ್ನುವಷ್ಟು ಅದ್ಭುತವಾಗಿ ಹಾಡಿದ್ದಾರೆ. ಒಳ್ಳೊಳ್ಳೆಯ ಹಾಡುಗಳನ್ನು ಆರಿಸಿದ್ದೀರಿ.ನಿಜ,ಇದು ಕಷ್ಟದ ಕೆಲಸವೇ.ನನಗೆ 'ಗೆಜ್ಜೆಪೂಜೆ'ಯ ಎಲ್ಲ ಹಾಡುಗಳು ಮತ್ತು 'ಕರೆಯೇ ಕೋಗಿಲೆ ಮಾಧವನ ......' ತುಂಬಾ ಇಷ್ಟ.  ಅನುಪಮ ಗಾಯಕಿ ಜಾನಕಿ

ನಾನು ಎಷ್ಟು ಸರಾಗವಾಗಿ ನೀರು ಕುಡಿತೀನೋ ಅಷ್ಟೇ ಸರಾಗವಾಗಿ ಕೊಳಲು ನುಡಿಸುತ್ತೀರಿ. ಕೊಳಲಿನ ದನಿ

This is a very beautiful song bringing down our memory lane to 1960s  ನಮೋ ನಮೋ ನಟರಾಜ

Few of these songs were remixed n very familiar...but listening to the original version is marvelous...thank u sir  ಕಂಚಿನ ಕಂಠದ ಶಂಶಾದ್ ಬೇಗಂ

May god bless you for distributing such a gift to you, it is far batter 'time pass' and get connected to divine. on ಕೊಳಲಿನ ದನಿ

ನಿಮ್ಮ ಬ್ಲಾಗ್ ಓದುವುದು, ಹಾಡುಗಳನ್ನು ಕೇಳುವುದು ಬಹಳ ಮಧುರ ನೆನಪುಗಳನ್ನು ನನ್ನ ಬಳಿಗೆ ತರುತ್ತವೆ. And, great work... Thank you!!  ಜಿಗಿ ಜಿಗಿಯುವ ಹಾಡು

Each post is a gem!   ಬರೆ ಕ್ಯಾಬರೆ ಅಲ್ಲ

Very very sweet...  ಇಲ್ಲಿದೆ ಎಲ್ಲೂ ಇಲ್ಲದ ಆ ಹಾಡು 

ಅತ್ಯುತ್ತಮ ಕೆಲಸ ಮಾಡಿದ್ದೀರಿ. ತುಳುವಿನಲ್ಲಿ ಇಷ್ಟೊಂದು ಸುಂದರ ಹಾಡುಗಳಿವೆ ಎಂದು ಗೊತ್ತೇ ಇರಲಿಲ್ಲ. ಸದ್ಯದ ಮಾರುಕಟ್ಟೆಯಲ್ಲಿ ಇದೇ ಹಾಡುಗಳ ರಿಮಿಕ್ಸ್‌, ರಿಸಿಂಗಿಂಗ್‌ ಕೇಳಿ ಬೇಜಾರಾಗಿತ್ತು. ಹಾಡು ಕೇಳಿ ಖುಷಿ ಆಯಿತು. ತುಳು ಚಿತ್ರಗೀತೆಗಳ ಸಾರ ಸಂಗ್ರಹ

You are right about Manna da not getting a star to go with. Also great analysis about his voice !!  ಕಳಚಿದ ಕೊನೆಯ ಕೊಂಡಿ ಮನ್ನಾಡೆ

ಗುಂಡಿ ದೀಪ ಎಂದೊಡನೆ ನನಗೆ ನನ್ನ ಹಳೆ ಅಂದರೆ 1960 ರ ನೆನಪಾಗುತ್ತದೆ. ಆಗ ಕೂಡ ಒಳ್ಳೊಳ್ಳೆಯ ಸಂಗೀತ ಕಾರ್ಯಕ್ರಮಗಳು ಇರುತ್ತಿದ್ದುವು. ಆದರೆ ಬಹುಶಃ ಆಗ audio/ video ರೆಕಾರ್ಡ್ ಅಂದರೇನು ಎಂದು ಯಾರಿಗೂ ಗೊತ್ತಿರಲಿಕ್ಕಿಲ್ಲ. ಈಗ ಈ ದಾಖಲೀಕರಣದಿಂದ ಗುಂಡಿ ದೀಪ ಎಂದರೆ ಹೇಗಿತ್ತು ಎಂದು ಮುಂದಿನವರಿಗೂ ತಿಳಿಯುವಂತಾಗಿದೆ.  ನಮಗೆ ದೀಪಾವಳಿಯಾಗಿದ್ದ ಗುಂಡಿ ದೀಪ

Analysis and observations are superb. ಒಂದೆರಡು ಕಡೆ ಘಂಟಸಾಲರ ದ್ವನಿ ತರಹ ಅನಿಸುತ್ತದೆ. (ನನ್ನ ಅಮೆಚೂರ್ ಕಿವಿಗಳಿಗೆ). ಇದು ಸ್ವಾಭಾವಿಕವೋ ಅಥವಾ ಪ್ರಯತ್ನಪುರ್ವಕವೋ ಗೊತ್ತಿಲ್ಲ. I may be wrong.... But that doesn't take anything away from PBS ದೈತ್ಯ ಪ್ರತಿಭೆ !!!  ಮುಗಿಯುವವರೆಗೆ ಮಾತ್ರ : ಬೊಂಬೆಯಾಟವಯ್ಯ

ನಮ್ಮ ಬೇ ಏರಿಯಾ ಗೆ ಅನೇಕ ಕನ್ನಡ ಕಲಾವಿದರನ್ನು ಕರೆಸಲು ಇಷ್ಟ. ನನ್ನ ಕಣ್ಣು ಇರುವುದು ಈ ಕೊಳಲು ಮಾಯಾವಿಯ ಮೇಲೆ . Chidambar Kakathkar ಯಾವಾಗ ಇಲ್ಲಿಗೆ ಬರುತ್ತಾರೋ ಕಾದು ನೋಡಬೇಕು. ಕೊಳಲಿನ ದನಿ

ನೀವು silent ಆಗಿ ಕುಳಿತು ನಮಗೆಲ್ಲಾ ಇಷ್ಟವಿರುವ ಹಾಡುಗಳು, tunes, lyrics ಇತ್ಯಾದಿಗಳನ್ನು ನಿಮ್ಮ blogನಲ್ಲಿ ಹಾಕಿ ಒಂದು ರೀತಿಯ ಸಮಾಜ ಸೇವೆ ಮಾಡುತ್ತಿದ್ದೀರಿ. ತುಂಬಾ ಧನ್ಯವಾದಗಳು. ಕೊಳಲಿನ ದನಿಗಾಗಿ ತುಂಬಾ ಹುಡುಕಿದ್ದೆ. ಈಗ ಎಲ್ಲಾ download ಮಾಡಿಕೊಂಡೆ. ಕೊಳಲಿನ ದನಿ

Very melodiuos. Your flute sounds like a Cukoo singing. ಕೊಳಲಿನ ದನಿ

Melodious ! Your flute really competes with Latha Mangeshkar's voice ! ಕೊಳಲಿನ ದನಿ

ಹಳೆಯ ಹಾಡುಗಳಲ್ಲಿ ಉತ್ಸಾಹ, ಲವಲವಿಕೆ, ಓಟ ಇಲ್ಲ ಅನ್ನುವವರಿಗೆ ಉತ್ತರದಂತಿದೆ ಈ ಹಾಡು. ಸುಪರ್ !! ಮೋಜಿನ ಮೋಟರು ಗಾಡಿ

ನಾನು ಈ ಹಾಡನ್ನು ಇವತ್ತೇ ಮೊದಲಬಾರಿಗೆ ಕೇಳಿದೆ ಎಂದೆನಿಸುತ್ತಿದೆ. ಚೆನ್ನಾಗಿದೆ. Super impose ಪ್ರಯೋಗ ಸಹ super ಆಗಿ ಇದೆ! -  ಮೋಜಿನ ಮೋಟರು ಗಾಡಿ

ಮುಂಚೆ ಕೇಳಿದ್ದು, ಮರೆತೇ ಹೋಗಿತ್ತು. ಆಳಕ್ಕೆ ಇಳಿಯದ ಇಂದಿನ ಪೀಳಿಗಗಳು ಆಕಾಶವಾಣಿಯಲ್ಲಿ ಸೇರಿದರೆ ಇಂತಹ ಹಾಡುಗಳಿಗೆ ಅಜ್ಞಾತವೇ. -  ಮೋಜಿನ ಮೋಟರು ಗಾಡಿ

This is an excellent recording of a very well conducted interview. Thoroughly enjoyed listening to it. I must admit, not using Tulu language on a regular basis and living away from Tulu-naadu makes one forget some original Tulu words and expressions, you have used excellent vocabulary very proficiently. Also liked the re-designed blog, there is so much material which brings back my childhood memories. ಸಾರಂಗ ಸಂವಾದ

ಬೆಳ್ತಂಗಡಿ ಬಸ್ಸ್ಟ್ಯಾಂಡ್ ನಲ್ಲೊಮ್ಮೆ ಬೀಡಾ ಬೀಡಿ ಮಾರುವ ಹುಡುಗನೊಬ್ಬ ಬಸ್ಸೊಳಗೆ ಬಂದು ಮಾರುತ್ತಿದ್ದ. ಆಗ ಬಸ್ಸು ಬಿಡುವ ಹೊತ್ತಾಗಿತ್ತು. ಕಂಡಕ್ಟರ್ ಪೋಯಿ ಪೋಯಿ ರೈಟ್ ಎಂದಾಗ ಶೆಟ್ಟಿ ಬಸ್ಸಿನ ಡ್ರೈವರ್ ಬಸ್ಸನ್ನೇರಿದ. ಮತ್ತು ಆ ಹುಡುಗನ ತಲೆಯನ್ನು ಹಿಡಿದು ಅವನಿಗೆ ಬೈದು ಮುಂದೆ ದೂಡಿದ. ಪಾಪ ! ಅವನ ಐಟಂ ಗಳೆಲ್ಲ ಕೆಳಗೆ ಬಿದ್ದುವು. ತಕ್ಷಣ ಬಸ್ ಸ್ಟಾರ್ಟ್ ಮಾಡಿ ಹೊರಟ. ಆ ಹುಡುಗನನ್ನು ಒಂದು ಕಿಲೋ ಮೀಟರ್ ಮುಂದೆ ಇಳಿಸಿದ!  ಮನದಾಳದಲ್ಲುಳಿದಿರುವ ಶೆಟ್ಟಿ ಬಸ್

ನಾದ ಲೋಕದಲ್ಲಿ ಸದ್ದಿಲ್ಲದೇ ...ನನಗೇ ತಿಳಿಯದಂತೆ ಮಿಂದು ಬಂದ ಅನುಭವವಾಯಿತು..ಕೊಳಲಿನ ದನಿ

ಬಿ.ಎಸ್.ಏನ್.ಎಲ್ ನಲ್ಲಿ ನಾ ನಿಮ್ಮನ್ನು ಒಬ್ಬ ತಾಂತ್ರಿಕ ಚತುರನಾಗಿ,ಕಂಪ್ಯೂಟರ್ ಪ್ರೋಗ್ರಮೆರ ಆಗಿ ,ಉತ್ತಮ ಮಾರ್ಗದರ್ಶಿಯಾಗಿ,ಪ್ರಾಮಾಣಿಕ ಆದಿಕಾರಿಯಾಗಿ ನೋಡಿದ್ದ.ಈಗ ಸಂಗೀತ ಪ್ರೇಮಿಯಾಗಿ ನೀಮ್ಮ ಕೊಳಲು ವಾದನವನ್ನು ಆನಂದಿಸುತಿದೇನೆ.  .ಕೊಳಲಿನ ದನಿ

ನಿಮ್ಮ ಬ್ಲಾಗನ್ನು ಸರಳ ಮತ್ತು ಸುಂದರವಾಗಿ ನಿರೂಪಿಸಿದ್ದೀರಿ..   ವಿಡಿಯೊ ವಿಭಾಗ

ಬಹಳ ವಿಷಯಗಳು ನಿಮ್ಮಲ್ಲಿ ಬಚ್ಚಿಟ್ಟುಕೊಂಡಿದೆ . ಅದನ್ನು ಬಿಚ್ಚಿಟ್ಟು , ನಮಗೆಲ್ಲಾ ಬಿಡುವಿನ ಸಮಯದಲ್ಲಿ , ಅವನ್ನು ಆಲಿಸುವ ಸುಯೋಗವನ್ನು ದಯಪಾಲಿಸಿದುದಕೆ , Thanks  ನನ್ನ ಬಗ್ಗೆ

 ನಿಮ್ಮನ್ನು ಒಬ್ಬ  ಕಲಾವಿದನಾಗಿ, ಉತ್ತಮ ಸ್ನೇಹಿತನಾಗಿ,ಉತ್ತಮ ಮಾರ್ಗದರ್ಶಿಯಾಗಿ ನೋಡಿದ್ದೇನೆ.ಸಂಗೀತ -  ಪ್ರೇಮಿಯಾಗಿ ನೀಮ್ಮ ಕೊಳಲು ವಾದನವನ್ನು ಆನಂದಿಸಿದ್ದೇನೆ . ನಿಮ್ಮ ಈ ಬ್ಲಾಗ್ ಮೂಲಕ ಇನ್ನೂ ಹತ್ತಿರವಾಗಿದ್ದಿರಿ. -  ನನ್ನ ಬಗ್ಗೆ

ನಾನು ಈ ತನಕ ನೌಕರಿ ಯಲ್ಲಿದ್ದುದರಿ೦ದ ಸಾಹಿತ್ಯದ ಕಡೆಗೆ ಒಲವು ಇದ್ದರೂ ಗಮನಹರಿಸಲು ಸಾಧ್ಯವಾಗಲಿಲ್ಲ.ಇನ್ನು ಮೇಲೆ ಸಾವಕಾಶವಾಗಿ ಸಾಹಿತ್ಯದಕಡೆಗೆ ಗಮನಕೊಡಲು ಯೋಚಿಸಿದ್ದೇನೆ. ನಿಮ್ಮ ಈ ಬ್ಲಾಗ್ ಬಹಳ ಖುಶಿ ತ೦ದಿದೆ.ಸ೦ಗೀತ,ಸಾಹಿತ್ಯ ಫಿಲ೦ ಇತ್ಯಾದಿಗಳ ಬಗ್ಗೆ ಬಹಳ ವಿಶಯಗಳನ್ನು ಕ್ರೋಡೀಕರಿಸಿದ್ದೀರಿ. ಇರಲಿ
ಇದೇ ರೀತಿ ಮು೦ದುವರಿಯಲಿ ಎ೦ದು ಹಾರೈಕೆ.  ನನ್ನ ಬಗ್ಗೆ

Your memory is superb. I really go back to my higher primary school days (6th &, 7th standard) at kanyadi. I have seen and travelled in all these private buses and enjoyed myself. ಮನದಾಳದಲ್ಲುಳಿದಿರುವ ಶೆಟ್ಟಿ ಬಸ್



ಆಹಾ ....ಶೆಟ್ಟಿ ಮೋಟಾರ್ ಬಸ್ಸು. .... !!! ಒಂದು ಬಸ್ಸು ...ಪುತ್ತೂರಿನಿಂದ ನಮ್ಮ ಬೆಳ್ಳಾರೆಗಾಗಿ ....ಸುಬ್ರಹ್ಮಣ್ಯ ಕ್ಕೆ ಹೋಗುತ್ತಿತ್ತು . ...... ಹಿಂದೊಮ್ಮೆ ನಿಮ್ಮ ಸೋದರಳಿಯ ...ಶ್ರೀವತ್ಸ ಜೋಶಿ ...ಡ್ರೈವರೋಪಖ್ಯಾನ ....ಬರೆದಾಗ .... ನನ್ನ ಪ್ರತಿಕ್ರಿಯೆಯಲ್ಲಿ ....ಶೆಟ್ಟಿ ಬಸ್ಸಿನ ಉಲ್ಲೇಖ ಮಾಡಿದ್ದೆ ..... ಆ ಪ್ರತಿಕ್ರಿಯೆ ...ಸಾಧಾರಣ ...ಹೀಗೆ ಇತ್ತು ಎಂದು ನೆನಪು ........................................".ಶೆಟ್ಟಿ ಮೋಟಾರ್ಸ್ ನ ಕಾಶ್ಮೀರ !! (ಹೆಸರು ಸರೀ ನೆನಪಾಗುತ್ತಿಲ್ಲ) ನಮ್ಮ ಮಟ್ಟಿಗೆ ಒಬ್ಬ ದೊಡ್ದ ಹೀರೋ. ಅವರ ಕಣ್ಣು ಒಂದು ಸ್ವಲ್ಪ ಮೆಳ್ಳೆಗಣ್ಣು ಆಗಿದ್ದರೂ ನಮಗೆಲ್ಲಾ ಅದು ಕೊರತೆ ಎಂದು ಅನಿಸುತ್ತಿರಲೇ ಇಲ್ಲ. ಅವರು ಒಂದೊಂದು ಸಾರಿ ಬೆಳ್ಳಾರೆಯ ಸೋಡಾ ಸುಬ್ರಾಯರ ಅಂಗಡಿಯಲ್ಲಿ ... "ವಿಮ್ಟೋ" ಕುಡಿಯುತ್ತಿದ್ದರು ....... ನೋಡಲು ಈಗಿನ ಪೆಪ್ಸಿಯ ಹಾಗೆ ಇರ್ತಿತ್ತು ( 1960 ನೇ ಇಸವಿ ಅಂದಾಜು) .... ಮತ್ತೆ ಅವರು ಇಷ್ಟ ಯಾಕೆ ಅಂದರೆ, ಬಸ್ಸು ಬರುತ್ತಿದ್ದಾಗ ದಾರಿಯಲ್ಲಿ ನಡೆಯುತ್ತಿದ್ದ ನಾವು ಕೈ ಎತ್ತಿ ವಿಷ್ ಮಾಡಿದರೆ ತಪ್ಪದೇ ವಿಷ್ ಮಾಡುತ್ತಿದ್ದರು. ನನ್ನನ್ನು ನೋಡಿಯೇ ವಿಷ್ ಮಾಡಿದ್ದು ಎಂದು ನಮಗೆ ಪ್ರತಿಯೊಬ್ಬರಿಗೂ ಕಾಣುತ್ತಿತ್ತು. .......... ನಂದಗೋಕುಲದಲ್ಲಿ ಕೃಷ್ಣ ನನ್ನು ನೋಡಿ ಪ್ರತಿಯೊಬ್ಬ ಗೊಪಿಕೆಯೂ ಹೀಗೇ ಭಾವಿಸುತ್ತಿದ್ದಳಂತೆ ಅಲ್ಲವೇ.....!! ....... ................  ಮನದಾಳದಲ್ಲುಳಿದಿರುವ ಶೆಟ್ಟಿ ಬಸ್

ನೀವು ಕೊನೆಗೆ ಇದು ಶೆಟ್ಟಿ ಬಸ್ ಅಲ್ಲ ಅಂದಿದ್ದು ಬೇಜಾರಾಯಿತು.  ಮನದಾಳದಲ್ಲುಳಿದಿರುವ ಶೆಟ್ಟಿ ಬಸ್


ನಿಮ್ಮ ಕಿಶೋರ್ ಗೀತೆಗಳ ಗುಚ್ಛದ ಬರಹವನ್ನು ಓದಿದ ಮೇಲೆ ಮತ್ತೊಮ್ಮೆ ನನ್ನ ಮನಸು ರಾಜೇಶ್ ಖನ್ನಾ ಮತ್ತು ಆರಾಧನ ಚಿತ್ರದ ಕಡೆಗೆ ತಿರುಗಿತ್ತು. ಅಷ್ಟರಲ್ಲಿ ಮತ್ತೆ ಈ ಬರಹ ನೋಡಿದಾಗ ಸಂತೋಷವಾಯಿತು. ದೊಡ್ಡ ಬಜೆಟ್ ಚಿತ್ರ ನಿರ್ಮಿಸುವ ತಯ್ಯಾರಿ ನಡೆಸುತಿದ್ದಾಗ ನಡುವೆ ಗ್ಯಾಪ್ ಬಂತೆಂದು ಹೊಸ ನಟನ ಜೊತೆ ಒಂದು stopgap ಚಿತ್ರ ಮಾಡಲು ಹೊರಟು ಅದೊಂದು ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಬಗೆ ಮನಸ್ಸಿಗೆ ಮುದವನ್ನು ಉಂಟುಮಾಡುತ್ತದೆ. ಕಿಶೋರ್ ಮತ್ತು ರಫಿ ಇಬ್ಬರೂ ನನ್ನ ಮೆಚ್ಚಿನ ಗಾಯಕರು. ಆದರೆ ಆರಾಧನಾದಲ್ಲಿ ಕಿಶೋರ್ ಮತ್ತು ರಾಜೇಶ್ ಖನ್ನಾ ಜೋಡಿ ಒಂದು ಮ್ಯಾಜಿಕ್ ಉಂಟು ಮಾಡಿದ್ದರಲ್ಲಿ ಎರಡು ಮಾತಿಲ್ಲ.ರಾಜೇಶ್ ತನ್ನ ಚಿತ್ರದ ಸಂಗೀತದ ಬಗ್ಗೆ ಎಷ್ಟು ಕಾಳಜಿ ವಹಿಸುತಿದ್ದರೆಂದು ಕೇಳಿದ್ದೇನೆ. ಪ್ರತಿ ಸಿಟ್ಟಿಂಗ್ ನಲ್ಲೂ ಹಾಜರಿದ್ದು ನಂತರ ಮನೆಗೂ ಟೇಪ್ ತೆಗೆದುಕೊಂಡು ಹೋಗುತಿದ್ದರಂತೆ. ಹಾಡಿನ ಅಭಿನಯದಲ್ಲಿ ಅವರ ಹಾವಭಾವಗಳೂ ನಮ್ಮನ್ನು ಅವರಿಸುತ್ತಿದ್ದವು. ಇತರ ಕೆಲವು ನಟರಂತೆ ನಾಮ್ಕಾವಾಸ್ತೆಗೆ ಹೆಜ್ಜೆ ಹಾಕುತ್ತಿರಲಿಲ್ಲ. ನೃತ್ಯದಲ್ಲಿ ಅಂತಹ ಪರಿಣಿತಿ ಇಲ್ಲದಿದ್ದರೂ ಕೇವಲ ಮುಖಭಾವ ಅದನ್ನು ಮರೆಮಾಡುತಿತ್ತು. ಸಾಧಾರಣವಾಗಿ ಈಗಲೂ ಸಹ ಹಳೆಯ ಮಧುರ ಗೀತೆಗಳನ್ನು ಯುಟ್ಯೂಬ್ ನಲ್ಲಿ ನೋಡುವಾಗ ಹಾಡಿನ ಚಿತ್ರೀಕರಣವನ್ನು ನೋಡದಿದ್ದರೂ ಏನೂ ನಷ್ಟ ವಾಗುವುದಿಲ್ಲ. ಆದರೆ ರಾಜೇಶ್ ಖನ್ನಾ ಗೀತೆಗಳು ಇದಕ್ಕೆ ಅಪವಾದ.  ಗಾನ ದಾರಿಯಲ್ಲಿ ಸೂರ್ಯ ಜಾರಿ ಹೋದ  

ಇಂತಹ ಸ೦ಶೋಧನೆ ಸ್ವತಹ ಚ೦ದಮಾಮ ಸ೦ಸ್ಥೆಯವರೇ ಮಾಡಿರಲಿಕ್ಕಿಲ್ಲ !! ಅದೆಷ್ಟು ಸೂಕ್ಷ್ಮವಾಗಿ ಗಮನಿಸಿ‌ದ್ದಿರಾ!! ಪಾತ್ರಗಳ ಉಡುಗೆ-ತೊಡುಗೆ, ಉಪಯೋಗಿಸುತ್ತಿದ್ದ ಬಣ್ಣಗಳು, ಕಪ್ಪು ಬಿಳುಪುನಿ೦ದ ವರ್ಣಕ್ಕೆ ಬದಲಾದ ಪುಟಗಳು... ಹೀಗೆ ಒಂದೇ ಎರಡೇ.. ಮತ್ತು ,ನಿಮ್ಮಿ೦ದ,ಮರೆಯಾಗುತ್ತಿರುವ ಕನ್ನಡ ಪದಗಳ ಬಳಕೆ..ಉದಾ: ಚಕ್ಕಡಿ ಮತ್ತು ಇನ್ನು ಕೆಲವು... ನಿಜ ಹೇಳಬೇಕೆಂದರೆ , ಚಿಕ್ಕವರಿದ್ದಾಗ, ಚ೦ದಮಾಮ ಒಂದೇ ಗುಕ್ಕಿನಲ್ಲಿ ಓದಿ, ಎಲ್ಲೋತೆಗೆದಿಡುತ್ತಿದ್ದೆ. ವಿಕ್ರಮ-ಬೇತಾಳದ ಕಥೆಯ ರಾಜನ ಸೌ೦ದರ್ಯ, ಅವನ ಚಿಗುರು ಮೀಸೆ, ಪೋಷಾಕು ನೋಡಿ ಬಹಳ ಮೆಚ್ಚಿದ್ದೆ. ಚ೦ದಮಾಮ ಅವಸಾನದ ಅ೦ಚನ್ನು ತಲುಪಬಹುದು ಎಂಬ ಕಲ್ಪನೆಯೂ ಬ೦ದಿರಲಿಲ್ಲ. ಈಗ ಒಂದು ರೀತಿ ಬಾಲ್ಯವನ್ನೇ ಕಳೆದುಕೊಂಡ ಅನುಭವ. ಒಂದೇ ಒಂದು ಸಮಾಧಾನದ ಸ೦ಗತಿಯೆ೦ದರೆ, ಸುಮಾರು ಏಳು ವರ್ಷಗಳ ಸ೦ಸ್ಕ್ರತದ ಆವೃತ್ತಿಗಳನ್ನು ಬಹಳ ಜೋಪಾನವಾಗಿ ಕಾಪಾಡಿಕೊಂಡು ಬ೦ದಿದ್ದೇನೆ. ಬೆ೦ಗಳೂರಿನ ಮನೆಯ ಅಟ್ಟದ ಮೇಲೆ ಬಹಳ ಭದ್ರವಾಗಿ ಕಾಪಾಡಿದ್ದೆನೆ. ಮುಂದಿನ ದಿನಗಳಲ್ಲಿ ತರಬೇಕು. ಎಷ್ಟೆ internet edition ಬ೦ದರೂ, ಕೈಯಲ್ಲಿ ಪುಸ್ತಕ ಹಿಡಿದುಕೊ೦ಡು ಓದುವ ಮಜಾನೆ ಬೇರೆ. ಅತ್ಯುತ್ತಮ ಲೇಖನ. ಬಹಳ ಇಷ್ಟವಾಯಿತು.  ಚಂದಮಾಮದ ಚಿತ್ರಗಳು   

ಕಾಕತ್ಕರ್ ಗುರುಗಳಿಗೆ ವಂದನೆಗಳು, ಹಾಗೂ ನೆನಪಿನ ನದಿಯಲ್ಲಿ ಈಜಾಡಿಸುವ ನಿಮ್ಮ ಪರಮಾದ್ಭುತ ಬರಹರತ್ನಗಳಿಗೆ ಅನಂತ ಕೋಟಿ ನಮನಗಳು.ನಾನು ೪೦ ರ ಆಸುಪಾಸಿನವನು. ಸುಮಾರು ೧೯೮೦ ರ ದಶಕ ಅಥವಾ ಅದಕ್ಕಿಂತ ಪೂರ್ವದಲ್ಲಿ ಜನಿಸಿ , ೧೯೯೦ ರ ದಶಕ ಅಥವಾ ಅದಕ್ಕಿಂತ ಪೂರ್ವದಲ್ಲಿ ಬಾಲ್ಯವನ್ನು ಸವಿದವರು ಮಹಾ ಸುದೈವಿಗಳು. ಏಕೆಂದರೆ ನಾವು ಯಾವುದೇ ಆಧುನಿಕ ಪರಿಕರಗಳಿಲ್ಲದ ಜಂಜಾಟರಹಿತ , ಒತ್ತಡವಿಲ್ಲದ ನಿರಾಳ ಜೀವನವನ್ನೂ ಕಂಡಿದ್ದೇವೆ, ಅದರೊಂದಿಗೆ ಈಗಿನೆ ಅತ್ಯಾಧುನಿಕ ಯಾಂತ್ರಿಕ ಬಾಳನ್ನೂ ಕಾಣುತ್ತಿದ್ದೇವೆ. ನಮ್ಮ ಜೀವಿತಾವಧಿಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಜೀವನ ಇವೆರಡಕ್ಕೂ ಸಾಕ್ಷಿಯಾದವರು ನಾವು. ೧೯೯೦ ರ ದಶಕದ ನಂತರ ಜನಿಸಿದವರು ಈ ಸುಖದಿಂದ ವಂಚಿತರು . ಆಗ ಹಳ್ಳಿ ಮತ್ತು ಪಟ್ಟಣಗಳಿಗೆ ಬಹಳ ವ್ಯತ್ಯಾಸವೇನೂ ಇರಲಿಲ್ಲ. ರಜೆಯಲ್ಲಿ ಹಳ್ಳಿಗೆ ಹೋದಾಗ ಸಂಜೆ ಸಮಯದಲ್ಲಿ ಚಿಮಣಿ ದೀಪ , ಕಂದೀಲು ದೀಪದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಮಾಲಿಕೆಯ ಅಂಗೈ ಅಗಲದ ಮಹಾವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕಗಳು , ಚಂದಮಾಮಾ, ಬಾಲಮಿತ್ರ, ಬೊಂಬೆಮನೆ ಓದುತ್ತಿದ್ದ ನಾವು, ಪಟ್ಟಣಕ್ಕೆ ಮರಳಿದಾಗ ವಿದ್ಯುತ್ ದೀಪದಲ್ಲಿ ಅಭ್ಯಾಸ ಮಾಡುತ್ತಿದ್ದೆವು. ಆಗ ಕಾಗೆ ಮುಖದ ರೀತಿಯ ಸ್ವಿಚ್ ಇರುತ್ತಿದ್ದವು. ವಿದ್ಯುತ್ ಕೈ ಕೊಟ್ಟರೆ ಮತ್ತೆ ಚಿಮಣಿ, ಕಂದೀಲು ಇದ್ದದ್ದೇ. ಅದೊಂದು ರಮ್ಯ ಕಾಲ. ಕೆರೆ-ಹಳ್ಳಗಳಲ್ಲಿ ಈಜಾಟ, ಕಾಡಿನಲ್ಲಿ ತಿರುಗಾಟ  ಗಣಪನ ನೆನಪು  

ಘಂಟಸಾಲಾರ ಕುರಿತು ಮಾಹಿತಿ ಹುಡುಕುವವರಿಗೆ ಅವರ ಹೆಸರು ಒತ್ತಿದರೆ ಸಾಕು ನೂರು ಲಿಂಕುಗಳು ಸಿಗುತ್ತವೆ... ಎಲ್ಲದರಲ್ಲೂ ಒಂದೇ ಮಾಹಿತಿ..ಅವರ ಬಾಲ್ಯಕಾಲದ ಕಷ್ಟಗಳು...ಸಮುದ್ರಾಲ ದೆಸೆಯಿಂದ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದು...ನಿಧಾನವಾಗಿಯಾದರೂ ಬೆಳೆದು ಕೀರ್ತಿಯ ಶಿಖರ ಏರಿದ್ದು...ನಂತರ ಅವರ ಮುಗ್ಧತೆಯ ಕಾರಣದಿಂದ ಹೇಳಿದವರ ಮಾತೆಲ್ಲಾ ಕೇಳಿ ಆರೋಗ್ಯ ಕೆಡಿಸಿಕೊಂಡಿದ್ದು...ಇಷ್ಟೇ... ಅವರು ಕನ್ನಡದಲ್ಲೂ ಕೆಲಸಮಾಡಿದವರಾದ್ದರಿಂದ ಕನ್ನಡಿಗರ ದೃಷ್ಟಿಕೋನದಿಂದ ಅವರನ್ನು ಪರಿಚಯಿಸಿದ್ದು ಬಹುಶಃ ನೀವೇ ಮೊದಲಿಗರು... ಎಲ್ಲೂ ಕೇಳಿರದ ಅಪರೂಪದ ಸಂಗತಿಗಳನ್ನೂ ಸೇರಿಸಿ ಘಂಟಸಾಲರ ಋಣ ಕನ್ನಡಿಗರ ಪರವಾಗಿ ಸ್ವಲ್ಪ ತೀರಿಸಿದ್ದೀರಿ..�� ಅವರು ಅನಾರೋಗ್ಯದ ಕಾರಣ ತಮ್ಮ ಸಂಗೀತ ಪಯಣ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದರಂತೆ ... ಕಡೆಯದಾಗಿ ಭಗವದ್ಗೀತೆಯ ಪ್ರಾಜೆಕ್ಟ್ ಮುಗಿಸಿ ನಂತರ ವಿಶ್ರಮಿಸುವ ಉದ್ದೇಶ ಇತ್ತಂತೆ...ಆದರೆ ಅದರ ನಂತರವೂ ಕೆಲವು ಅದ್ಭುತ ಹಾಡುಗಳು ಬಂದವು... ಸಂತ ತುಕಾರಾಂ ಸಿನಿಮಾದಲ್ಲಿ ಆದಿನಾರಾಯಣ ರಾವ್ ಸಂಗೀತ ಕೊಟ್ಟಿದ್ದ 'ಘನಾ ಘನ ಸುಂದರ..' ಅವರ ಕಡೆಯ ಹಿಟ್...  ಗಂಧರ್ವಲೋಕದ ಘಂಟಸಾಲ  

ನಿಮ್ಮ ಬರವಣಿಗೆಯ ಚಂದವನ್ನು ಮೆಚ್ಚಬೇಕೋ, ನಿಮ್ಮ ನೆನಪಿನ ಶಕ್ತಿಯನ್ನೂ, ಚಿತ್ರಗೀತೆಗಳ ಬಗೆಗಿನ ನಿಮ್ಮ ಅಗಾಧ ಜ್ಞಾನವನ್ನೋ, ಇದನ್ನೆಲ್ಲಾ ನಮ್ಮಂತಹ ಪಾಮರರಿಗೆ ತಿಳಿಸಲು ನೀವು ವಹಿಸಿರುವ ತಾಳ್ಮೆಯನ್ನೋ - ಯಾವುದನ್ನು ಮೊದಲು ಮೆಚ್ಚಿ ಅಭಿನಂದಿಸಬೇಕೆಂದು ತಿಳಿಯದಾಗಿದೆ! ನೀವೇ ಸಹಾಯ ಮಾಡಬೇಕು! ದಿನಪತ್ರಿಕೆಯಲ್ಲಿ ಈ ವಿಷಯಗಳನ್ನು ಅಂಕಣವಾಗಿ ನೀವು ಬರೆಯಬೇಕು.  ರತ್ನಮಂಜರಿಯ ರತ್ನಗಳು 

ಓ ...!! ಫಸ್ಟಾಗಿದೆ ... ಇದ್ರಲ್ಲಿ ಸುಮಾರು ವಿಷಯ ... ನನ್ನದೇ. ...ಹೆಸರುಗಳನ್ನು ಬದಲಾಯಿಸಿದರೆ ಸಾಕು....ಆದರೆ ಒಂದು ವಿಷಯದಲ್ಲಿ ನಾನೇ ಗ್ರೇಟು.ಏನಂದ್ರೆ .... ನನ್ನನ್ನು ಶಾಲೆಗೆ ಕರಕೊಂಡು ಹೋಗಲು ಸಂಬಧಿಯಾದ ಅಕ್ಕ ಒಬ್ಬಳಿದ್ದಳು.ನನ್ನಿಂದ 2-3 ಕ್ಲಾಸು ಮೇಲೆ....ಶಾಲೆಗೆಂದು ಹೊರಟು ...ಎಷ್ಟೋ ಸಾರಿ ಶಾಲೆಗೆ ಹೋಗದೇ ಮನೆಯ ಪಕ್ಕದ ಗುಡ್ಡದಲ್ಲಿ ಮದ್ಯಾಹ್ನದ ಊಟವೂ ಇಲ್ಲದೇ ಕಾಲ ಕಳೆದು ...ಆ ಅಕ್ಕನನ್ನೂ ಹೋಗಲು ಬಿಡದೆ ಸಂಜೆ ಮನೆಗೆ ಬಂದದ್ದಿದೆ. ಒಂದು ಸಾರಿ ಸೊಪ್ಪಿಗೆಂದು ಬಂದ ಕೆಲಸದವಳು ಇದನ್ನು ನೋಡಿದ ಕಾರಣ ಪ್ರಾಜೆಕ್ಟ್ ಹಾಳಾಗಿ ಹೋಯ್ತು..... ಇದು ನಿಮಗೆ ಸಾದ್ಯ ಆಗಿತ್ತೋ ..?? ಮತ್ತೆ ಈ ಶಾಲೆಗಳು ಹೇಗೆ ಅಂದ್ರೆ... ಧರ್ಮದಂಡಕ್ಕೆ.. ಅಂತ ಒಂದು ಮಾತು ಉಂಟಲ್ಲ ಹಾಗೆ.... ನಾನು ...ಬ್ರಿಟಿಷರು ನಮ್ಮ ದೇಶ ಬಿಟ್ಟ ಐದು ವರ್ಷಗಳ ನಂತರ ಹುಟ್ಟಿದವ ... ಆದರೂ ಯಾರೋ ಹೇಳಿದ ಮಾತು ನೂರಕ್ಕೆ ನೂರು ನಿಜ ಅಂತ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಕಾಣಲು ಪ್ರಾರಂಭವಾಗಿತ್ತು ...ಏನೆಂದರೆ ...ಬೇರೆ ದಾರಿ ಇಲ್ಲದೇ ...ಮನಸ್ಸಿಲ್ಲದ ಮನಸ್ಸಿಂದ ಭಾರತವನ್ನು ಬಿಟ್ಟು ಹೋಗಬೇಕಾದ ಬ್ರಿಟಿಷರು ... ಶತಮಾನ ಶತಮಾನಗಳ ಕಾಲ ಈ ಭಾರತದವರು ಉದ್ದಾರ ಆಗಬಾರ್ದು ಅಂತ ...ಆಧುನಿಕ ಎನ್ನುವ ಹೆಸರಿನಲ್ಲಿ ಅವರ ಶಿಕ್ಷಣ ಕ್ರಮವನ್ನು ಸುರು ಮಾಡ್ಸಿ ನಮ್ಮನ್ನು ನಂಬಿಸಿದ್ರು.... ಅಂತ. ನನಿಗೆ ಕಾಣ್ತಾ ಇರುವುದು ... ಸುಖ್ ಭರೆ ದಿನ್ ಬೀತೆರೆ ಭೈಯಾ

9 comments:

  1. Chidambaranna namaste. Ella vishayagalu tumba chennagi moodi bandive. Dhanyavadaglau. Gajanana Vaze

    ReplyDelete
  2. ಕರ್ನಾಟಕಿ ಸಂಗೀತದ ರಾಗಗಳ ಬಗ್ಗೆ ಗೂಗಲ್ ನಲ್ಲಿ ಹುಡುಕುವಾಗ, ಈ ನಿಮ್ಮ ಬ್ಲಾಗ್ ಸಿಕ್ಕಿತು, ಸಂಗೀತದ ಕಣಜ ಸಿಕ್ಕಂತಾಯಿತು.....
    ನನಗೆ ಕೊಳಲು ಮತ್ತು ಗಿಟಾರ್ ಕಲಿಯುವ ಆಸೆ....ದಯವಿಟ್ಟು ಮಾರ್ಗದರ್ಶನ ಮಾಡಿ...

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು. ಯಾವುದಾದರೂ ಒಂದು ಸಾಕು. ಒಳ್ಳೆಯ ಗುರುವನ್ನು ಹುಡುಕಿ ಆರಂಭಿಸಿ. ಶುಭಸ್ಯ ಶೀಘ್ರಂ

      Delete
  3. ತಮ್ಮ ಬ್ಲಾಗ್ ತುಂಬಾ ಸಂಗೀತ ಪ್ರಿಯರಿಗೆ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು. ಹಾರ್ಮೋನಿಯಂನಲ್ಲಿ ಹಳೆಯ ಚಿತ್ರಗೀತೆಗಳು ನುಡಿಸುವುದು ನನಗೆ ತುಂಬಾ ಇಷ್ಟ, ಅದಕ್ಕೆ ತಾವು ಕೊಟ್ಟಿರುವ ಸ್ವರಪಾಠ ಸಾಹಾಯಕವಾಯಿತು. ಪುಸ್ತಕದಲ್ಲಿ ಬರೆದುಕೊಂಡು ಅಭಾಸ ಮಾಡುತ್ತಿದ್ದೇನೆ, ಕಾಫಿ ಮಾಡೋಗೆ ಆಗುವುದಿಲ್ಲವಲ್ಲ, ಅದಕ್ಕೆ :)

    ಈ ಲಾಕ್ ಡೌನ್ ಸಮಯದಲ್ಲಿ ಯೂಟ್ಯೂಬ್ ಪಾಠ ಅಭಾಸ ಮಾಡಿ 5 ತಿಂಗಳಲ್ಲಿ ಒಂದು ಹಂತಕ್ಕೆ ಬಂದಿದ್ದೇನೆ. ಪ್ರತಿದಿನ 2 ಘಂಟೆ ಅಭಾಸ ಮಾಡುತ್ತಿದ್ದೆ.

    ReplyDelete
  4. ನಿಮ್ಮ ಬರಹ, ಹಾಡುಗಳ ಅಪರೂಪದ ಸಂಗ್ರಹ, ಆರ್ಕೆಸ್ಟ್ರಾ, ವಾದ್ಯ ಗಳ ಪರಿಚಯ ಒಂದೇ ಎರಡೇ ಕೇವಲ ಅನುಭವ ವೇದ್ಯ. ತುಂಬಾ ಸಂತೋಷ ಪಟ್ಟಿರುವೆ. ಇತ್ತೀಚಿನ ಅಂದರೆ ೨೪.೬.೨೧ರ ತುಳು ಚಿತ್ರಗಳ ಲೇಖನ ಅದ್ಭುತವಾಗಿದೆ. ನಿಮ್ಮ ಹೊಸ ಪ್ರಯತ್ನಗಳು ಸಫಲತೆ ನೀಡಲಿ.

    ReplyDelete
    Replies
    1. ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು. ದಯವಿಟ್ಟು ತಮ್ಮ ಪರಿಚಯ ತಿಳಿಸಿ.

      Delete
  5. I want know that, are you having all the issues of kannada chandamama from 1948. Please give details. please allow to download Chandamama. I am a die hard fan of chandamama. Your details about Dr.rajakumar's first song sung by him is a great collection. Congatulations. Please let me know your address. I want to see your collection oforiginal issues of Kannada chandamama. I hope you will oblige.
    regards,


    Hirannaiah M.K.
    Thyagarajanagar,
    Bangalore.

    ReplyDelete
    Replies
    1. Which ever issues I am making available for reading can be downloaded from chandamama.in site. I don't have original Chandamamas.

      Delete
  6. Hindini Chalagaara cinemadha haadugalabagge bareddeera. bahusha 40-45 varshagala hinde e haadugalu akashavaniyalli rarajisuttiddavu. Haageye Gruhini mattu Seethayalla Saavaithri munthada chitragala haadugala baggeyu bareyabekundu nanna manavi. Tamma pandithya doddadu adakkinthalu tamma sahane doddadu. Tamage Abhinandanegalu.

    ReplyDelete

Your valuable comments/suggestions are welcome