ಮಹಾಭಾರತ ಚಿತ್ರಸರಣಿ

1952ರಿಂದ 1961ರ ವರೆಗೆ ಚಂದಮಾಮದ ಮುಖಪುಟ , ಆ ಮೇಲೆ 1964ರ ವರೆಗೆ  ಹಿಂಬದಿಯ ರಕ್ಷಾಪುಟದಲ್ಲಿ ಪ್ರಕಟವಾದ ಎಂ.ಟಿ.ವಿ. ಆಚಾರ್ಯ, ಶಂಕರ್ ಮತ್ತು ವಪಾ ಚಿತ್ರಿಸಿದ, ಮಹಾಭಾರತದಿಂದ ಆಯ್ದ ಸನ್ನಿವೇಶಗಳ 130 ಚಿತ್ರಗಳನ್ನು ಪುಟಕ್ಕೊಂದರಂತೆ ಸಂಯೋಜಿಸಲಾಗಿದೆ. ಉಪಕಥೆಗಳ ಚಿತ್ರಗಳೂ ಅನೇಕ ಇವೆ. ಪ್ರತಿ ಚಿತ್ರದ ಕೆಳಗೆ ಸಂಚಿಕೆಯ ವಿವರ, ಕಲಾವಿದರ ಹೆಸರು ಮತ್ತು ಚಿತ್ರಿಸಲಾದ ಸನ್ನಿವೇಶದ ಸಂಕ್ಷಿಪ್ತ ಮಾಹಿತಿ ಇದೆ. ಕನ್ನಡ ಸಂಚಿಕೆ ಲಭ್ಯವಿಲ್ಲದಲ್ಲಿ ತೆಲುಗು ಸಂಚಿಕೆಯಿಂದ ಚಿತ್ರವನ್ನು ಮತ್ತು ಹಿಂದಿ ಸಂಚಿಕೆಯಿಂದ ವಿವರವನ್ನು ಪಡೆದುಕೊಳ್ಳಲಾಗಿದೆ. ಹಿಂದಿ ಸಂಚಿಕೆ ಸಿಗದಿದ್ದ ಕಡೆ ವಿವರಗಳನ್ನು ಸುದರ್ಶನ ರೆಡ್ಡಿಯವರು ತೆಲುಗಿನಿಂದ  ಭಾಷಾಂತರಿಸಿ ಕೊಟ್ಟಿದ್ದಾರೆ.


ಚಿತ್ರಗಳನ್ನು ಬೇಕಷ್ಟು ಹಿಗ್ಗಿಸಿಕೊಂಡು scroll ಮಾಡುತ್ತಾ 1952ರಿಂದ 1964ರ ವರೆಗಿನ ಆ ಕಾಲಕ್ಕೆ ಪಯಣಿಸಿ. ನನಗಂತೂ ಇದು ಎರಡರಿಂದ ಹದಿಮೂರು ವಯಸ್ಸಿನ ವರೆಗಿನ ಸುವರ್ಣ ಕಾಲ.

 

2 comments:

  1. ಕಾಕತ್ಕರ್,
    ನಿಮ್ಮ ಸಾಧನೆ ಅದ್ಬುತ. ನಿಮ್ಮ ತಾಳ್ಮೆ ಮತ್ತು ವಿಷಯ ಸಂಗ್ರಹಕ್ಕೆ ಅಭಿನಂದನೆಗಳು.

    ReplyDelete

Your valuable comments/suggestions are welcome