ಹೇಳಬೇಕಾದ್ದನ್ನು ನಾಲ್ಕೇ ಸಾಲುಗಳಲ್ಲಿ ಮನಮುಟ್ಟುವಂತೆ ಅಡಕಗೊಳಿಸುವ ದಿನಕರ ದೇಸಾಯಿ ಚುಟುಕಗಳೆಂದರೆ ನನಗೆ ಅಚ್ಚು ಮೆಚ್ಚು. ಅವರದೇ ಶೈಲಿಯಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ವ್ಯಕ್ತಪಡಿಸುವ ಕಿರು ಪ್ರಯತ್ನವೊಂದು ಇಲ್ಲಿದೆ.
ಜೀವನೋತ್ಸಾಹ
ಕಲಿಯುತಿರು ದಿನಕೊಂದು ಹೊಸ ವಿಷಯವನ್ನ
ಮನದ ಹಸಿವೆಯ ನೀಗೆ ಇದುವೆ ಮೃಷ್ಟಾನ್ನ
ಪ್ರತಿ ಕ್ಷಣವು ಪ್ರತಿ ದಿನವು ಪ್ರತಿಯೊಂದು ವರುಷ
ಹೊಸದಾಗಿ ಕಾಣಿಸುತ ತುಂಬುವುದು ಹರುಷ
ನೆಮ್ಮದಿಯ ಗುಟ್ಟು
ಜಪ ತಪ
ಸೋಮವಾರದ ಜ್ವರ
ಎಲ್ಲದರ ಮೂಲ
ಬೆಂಬಿಡದ ಚಟ
ಕೆಲವರಿಗೆ ಎಲೆಯಡಿಕೆಯೊಡನೆ ತಂಬಾಕು
ಇಸ್ಪೀಟು ಸಿಗರೇಟು ಏನೇನೊ ಬೇಕು
ನನ್ನಲ್ಲು ಇಂಥದೇ ಚಟವೊಂದು ಉಂಟು
ಸವಿಯಾದ ಹಾಡುಗಳ ಬೆಂಬಿಡದ ನಂಟು
ಲವಲವಿಕೆ
ಪ್ರವೃತ್ತಿ
ಗಾಯನವೊ ವಾದನವೊ ಲಲಿತಕಲೆಯೊಂದು
ವೃತ್ತಿ ಜೊತೆ ಇರಬೇಕು ಪ್ರವೃತ್ತಿ ಎಂದು
ಏಕತಾನತೆ ತೊಲಗಿ ಕ್ಷಮತೆ ಬೆಳೆಯುವುದು
ಬಳಗದಲಿ ಗೌರವದ ಸ್ಥಾನ ದೊರಕುವುದು
ಹಳೆ ಹಾಡು
ಅಮೃತ ಗುಳಿಗೆ
ಕಷ್ಟ ಕೋಟಲೆ
ಜಾಣ ಗಣಪ
ಆದಿ ಪೂಜೆಯ ಕೊಂಬ ಗಣಪ ಬಲು ಜಾಣ
ಚೌತಿ ಸಂಭ್ರಮ ಮುಗಿಯೆ ಸೇರುವನು ತಾಣ
ಘನತೆ ಗೌರವ ಉಳಿಯೆ ಇರಬೇಕು ದೂರ
ಇದು ತಾನೆ ಅವನ ಈ ಬೋಧನೆಯ ಸಾರ
ನುಂಗಣ್ಣಗಳು
ದುಡಿದುದರ ಬಹುಪಾಲು ತುಂಬುವುದು ತೆರಿಗೆ
ದೇಶ ಕಟ್ಟಲು ಸಭ್ಯ ನಾಗರಿಕರ ಕೊಡುಗೆ
ನುಂಗಿರುವ ಸುದ್ದಿ ಬರೆ ಒಂದೊಂದೆ ಹೊರಗೆ
ಇರಿದಂತೆ ಅನಿಸುವುದು ಚೂರಿಯಲಿ ಎದೆಗೆ
ಬರೆದಿಟ್ಟ ಚೀಟಿ
ತೆರಳಿ ಪೇಟೆಗೆ ದಿನಸಿಯನು ತರುವುದಿತ್ತು
ಬರೆದಿಟ್ಟ ಚೀಟಿ ಮನೆಯಲ್ಲೆ ಉಳಿದಿತ್ತು
ನೆನಪ ಶಕ್ತಿಯ ಒರೆಗೆ ಹಚ್ಚಬೇಕಾಯ್ತು
ಅಂಕಗಳು ಸಿಕ್ಕಿತ್ತು ಹತ್ತಕ್ಕೆ ಹತ್ತು !
ಬಲ್ಲಿರೇನಯ್ಯಾ
ಗ್ಯಾಸ್ ಲೈಟು
ಸಂತಸವ ನೀಡುವುದು ನೆನಪುಗಳ ಮೆಲುಕು
ಅಡಗಿಹುದು ಮನದೊಳಗೆ ಏನೇನೊ ಸರಕು
ಆಟವನು ನೋಡಿದ್ದು ಕಂಬಳಿಯ ಹೊದ್ದು
ಗ್ಯಾಸ್ ಲೈಟು ಹೊರಡಿಸಿದ ಹಿಸ್ಸೆಂಬ ಸದ್ದು
ಬೇಡವೇ ಬೇಡ
ನಶ್ಯ ಬೀಡಿಯು ಬೇಡ ಸಿಗರೇಟು ಬೇಡ
ಎಲೆ ಅಡಿಕೆ ಜತೆಯಲ್ಲಿ ತಂಬಾಕು ಬೇಡ
ಬೇಕೆಂದು ಅನಿಸಿದರೆ ತಿನ್ನಿ ಸಿಹಿ ಬೀಡ
ಗುಟಕಾ ಜರ್ದಾ ಚಟವು ಬೇಡವೇ ಬೇಡ
ಗೋಲಿ ಸೋಡ
ಫೇಸು ಬುಕ್ಕಿನ ಪೋಸ್ಟು ನಿಜ ಗೋಲಿ ಸೋಡ
ಬುಸ್ಸೆಂದು ಉಕ್ಕುವವು ಲೈಕುಗಳು ನೋಡ
ಏನೆಂದು ಬಣ್ಣಿಸಲಿ ಮರುದಿನದ ಪಾಡ
ಕಾಲ ಕಸದಂತೆ ಅದು ಯಾರಿಗೂ ಬೇಡ
ಹತ್ತಕ್ಕೆ ಒಂದು
ನೆಟ್ಟ ಬೀಜದಿ ಎಷ್ಟು ಮೊಳಕೆಯೊಡೆದೀತು
ಬಿಟ್ಟ ಹೂವಲಿ ಎಷ್ಟು ಕಾಯಿ ಕಚ್ಚೀತು
ಇಷ್ಟಪಟ್ಟದ್ದೆಲ್ಲ ಹೇಗೆ ನಡೆದೀತು
ಹತ್ತು ಕಲ್ಲಿಗೆ ಒಂದು ಹಣ್ಣು ಉದುರೀತು
ಸ್ನೇಹ ಸಂಬಂಧ
ನೀರು ಸೇದದ ಬಾವಿ ಬೀಳುವುದು ಪಾಳು
ಚಲನೆ ಇಲ್ಲದ ಯಂತ್ರ ಆಗುವುದು ಹಾಳು
ಸ್ನೇಹ ಸಂಬಂಧಗಳು ಇದರಂತೆ ಕೇಳು
ಬಳಸದಿರೆ ಬೆಳೆಯುತ್ತ ಹೋಗುವುದು ಸೀಳು
ಅರ್ಥಗರ್ಭಿತ ಚಿತ್ರಪೂರಿತ ಚುಟುಗವನಗಳು ಓದಿಸುತ್ತಿವೆ.
ReplyDeleteಸೂಪರ್👏, ಅರ್ಥಪೂರ್ಣ ಮತ್ತು ಪ್ರಸ್ತುತ
ReplyDeletesundaravagide shabdagala jodane
ReplyDeleteಬೇವು ತಿಂದ ಬಾಯಿಗೆ ಬೆಲ್ಲವಿತ್ತಂತಿವೆ ನಿಮ್ಮ ಹನಿಗವನಗಳು
ReplyDelete