ಸಂಡೆ ಹಾಡು


ಎಂದೋ ಎಂದೋ ನಿನ್ನ ದರುಶನ

ಚಿತ್ರ : ಜಗನ್ಮೋಹಿನಿ 1951.



ಹಾಡು ಕೇಳಲು ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ.
ಮೊದಲ ಕೆಲವು ಸಾಲು ನಮ್ಮಕ್ಕನ ಧ್ವನಿಯಲ್ಲಿ.  ನಂತರ ಮಗಳು ಪಲ್ಲವಿ ಮುಂದುವರಿಸುತ್ತಾಳೆ.




ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ 
ಎಂದೋ

ನೀ ಎನ್ನ ಪ್ರಾಣ ಜ್ಯೋತಿ
ನಿನಗಾಗಿ ಎನ್ನ ಪ್ರೀತಿ
ನಾ ನಿನ್ನ ಕಾದು ಕುಳಿತೆ
ನೀ ಏಕೆ ಎನ್ನ ಮರೆತೆ

ಇರುಳೆಲ್ಲ ನಿನ್ನ ಸ್ವಪ್ನ
ಹಗಲೆಲ್ಲ ನಿನ್ನ ಧ್ಯಾನ
ಹೀಗಾಯ್ತು ಎನ್ನ ಬವಣೆ
ನಾ ಬೇರೆ ದಾರಿ ಕಾಣೆ 

ವಿರಹಾಗ್ನಿಯಿಂದ ಉರಿದು
ಕಣ್ಣೀರ ಕೋಡಿ ಹರಿದು
ನೀ ಎನ್ನ ಸೇರದಾದೆ
ಈ ರೂಪ ಕಳೆಯದಾದೆ
 





 










14 comments:

  1. ನಮಸ್ತೆ ಸರ್ ನಾನು ಪರಮ್ ಗುಬ್ಬಿ ಬಹಳ ಒಳ್ಳೆಯ ಮಾಹಿಗೆ ನಿಮಗೆ ವಂದಿಸುವೆ

    ReplyDelete
  2. ಪ್ಲಾಸ್ಟಿಕ್ ಸರ್ಜರಿ ಸೂಪರ್ ಆಗಿದೆ. ನಾನು ಜೇನುಗೂಡು ಸಿನೆಮಾವನ್ನು ಮಂಗಳೂರಿನ ಜ್ಯೋತಿ ಟಾಕೀಸ್ ನಲ್ಲಿ ಮ್ಯಾಟಿನಿ ಶೋ, ತುಂಬಾ ಉತ್ಸುಕತೆಯಿಂದ ನೋಡಿದ್ದೆ. ಕಾರಣ‌ ಇದು ಸಿಲ್ವರ್ ಜುಬ್ಲಿಯ ತ್ತ ಸಾಗಿತ್ತು.

    ReplyDelete
  3. Somehow this song has stayed in my mind since my childhood. Now and then, I keep humming first few lines. Listening to song with the lyrics in front make my listening more pleasing and pleasant, Thanks for rekindling !

    ReplyDelete
  4. ಸರ್, ಇಷ್ಟವಾದ ತಮಾಷೆ ಹಾಡು . ಎಷ್ಟು ಬಾರಿ ಕೇಳಿದ್ದೇನೋ ! ಈಗ ನಿಮ್ಮ ಮಾಹಿತಿಯ ನಂತರ ಗೀತೆ ಆಲಿಸಿದಾಗ ಮನೆಯ ಹೊರ ಆವರಣದಲ್ಲೇ ತೃಪ್ತನಾಗಿದ್ದವನಿಗೆ ಮನೆಯ ಒಳಾಂಗಣದ ಅಂದ ನೋಡಿದಂತಾಯ್ತು 😊 ರೇಡಿಯೋದಲ್ಲಿ ಬರುವ ಗೀತೆಗೂ ಇಲ್ಲಿಯ ಗೀತೆಗೂ ಲಯದ ವ್ಯತ್ಯಾಸವಿದೆ (ಚಿತ್ರೀಕರಣದ ಸಲುವಾಗಿ) ಹುಣಸೂರು ಕೃಷ್ಣಮೂರ್ತಿರವರ ಸಾಹಿತ್ಯದ ನಿಖರತೆ ಹಿನ್ನಲೆ ಸಂಗೀತದ ಮನದೂಗುವಿಕೆಯನ್ನು ಮೀರಿ ಆಪ್ತವೆನಿಸುತ್ತದೆ, ಸಾಹಿತ್ಯವನ್ನು ಓದಿದರೆ ರಾಗದ ಭಾವ ಪಕ್ಕಕ್ಕೆ ಸರಿದು ಗದ್ಯದ ಫೀಲ್ ಕೊಡುತ್ತದೆ ಆಗ ಗೀತೆಯ ಸಂಗೀತ ಸಂಯೋಜನೆಯ ವಿದ್ವತ್ ಎದ್ದು ಕಾಣುತ್ತದೆ . ಭಕ್ತಕುಂಬಾರ ಚಿತ್ರದ ಗೀತೆಗಳಲ್ಲಂತೂ ಸಾಹಿತ್ಯ ಹಾಲು ಸಂಗೀತ ಜೇನು 🥰 ನಗು ನಗುತಾ ನಲೀ ನಲೀಏನೇ ಆಗಲಿ 💕😊

    ReplyDelete
    Replies
    1. ಧನ್ಯವಾದಗಳು. ತಮ್ಮ ಹೆಸರು ತಿಳಿಸಿದರೆ ಸಂತೋಷವಾಗುತ್ತದೆ.

      Delete
    2. ಭಾವನೆಗಳಿಪ ನವನವೀನ ನಿಮ್ಮ ಬರಹ ಸದಾ ಹೃದಯ ಮೀಟುವ ಇಂತಹ ಗೀತೆಗಳನ್ನು ಮದದೊಮ್ಮೆ ಹೆಬಸಭಾವದೊಂದಿಗೆ ಆಲಿಸುವಂತ ತಾಜ ಅನುಭವವನ್ನು ಕೊಡುತ್ತೆ. ನಿಮ್ಮ ಸಂಪರ್ಕವಾದುದಕ್ಕೆ ನಾನು ಧನ್ಯ 🌸😊🎶 ಶರಪಂಜರ , ಎರಡು ಕನಸು ಚಿತ್ರದ ದೀತೆಗಳು ಸುಖವಾಗಿ ಸದಾ ಬಹಾರ್ ಅಂತೆ ಕಾಡುವವು ✨🥰

      Delete
  5. ಒಂದು ಗೀತೆಯನ್ನು ಇಂಚಿಂಚಾಗಿ ಸೀಳಿ...ಅದರ ಪದರ ಪದರವನ್ನೂ ನಮ್ಮ ಮುಂದೆ ತೆರೆದಿಡುವ ಶಕ್ತಿ ಕೇವಲ ನಿಮಗೆ ಮಾತ್ರ ಇದೆಯೆಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ ಸರ್..ನಮೋ ನಮಃ.

    Krishna Prasad (FB)

    ReplyDelete
  6. ಒಳ್ಳೆಯ ಹಾಡಿನ ಹಿನ್ನೆಲೆ ತಿಳಿಸಿ ಮತ್ತು ಕೇಳುವಂತೆ ಮಾಡಿದ ತಮಗೆ ಧನ್ಯವಾದಗಳು ಸರ್

    ReplyDelete
  7. ಲೇಖನ ಓದಿದ ಮೇಲೆ ನವಗೀತೆಯಂತೆ ಆಲಿಸಿದಷ್ಟು ಖುಷಿ 💕

    ReplyDelete
  8. Replies
    1. ಧನ್ಯವಾದಗಳು. ತಮ್ಮ ಪರಿಚಯ ತಿಳಿಸಿದರೆ ಸಂತೋಷ.

      Delete

Your valuable comments/suggestions are welcome