ಮೊನ್ನೆ 2017 ಮಾರ್ಚ್ 31ರಂದು ದೆಹಲಿಯ ಅತ್ಯಂತ ಹಳೆಯ ಚಿತ್ರ ಮಂದಿರ ರೀಗಲ್ ಶಾಶ್ವತವಾಗಿ ಬಾಗಿಲು ಮುಚ್ಚಿತು. ಕೊನೆಯ ದಿನ ಕೊನೆಯ ದೇಖಾವೆಗೆ ಅಲ್ಲಿ ಪ್ರದರ್ಶಿತವಾಗುವ ಗೌರವ ಪ್ರಾಪ್ತವಾದದ್ದು ರಾಜ ಕಪೂರ್ ಅವರ ಸಂಗಂ ಚಿತ್ರಕ್ಕೆ. ಅದು ಹೌಸ್ ಫುಲ್ ಶೋ ಆಗಿತ್ತಂತೆ. ಕಥಾ ಹಂದರದಲ್ಲಿ ತರ್ಕಕ್ಕೆ ನಿಲುಕದ ಎಷ್ಟೋ ಅಂಶಗಳಿದ್ದರೂ ತನ್ನ ಒಟ್ಟಾರೆ ಶ್ರೀಮಂತಿಕೆಯಿಂದ ಅದು ನೋಡುಗರ ಮೇಲೆ ಮಾಡಿದ ಮೋಡಿ ಎಂಥದ್ದೆಂಬುದಕ್ಕೆ ಇದು ಸಾಕ್ಷಿ.
1964ರ ಎಪ್ರಿಲ್ ತಿಂಗಳಿಂದಲೇ ಸಂಗಂ ಚಿತ್ರದ ಹಾಡುಗಳು ರೇಡಿಯೊದಲ್ಲಿ ಪ್ರಸಾರವಾಗತೊಡಗಿದ್ದವು. ರೇಡಿಯೋ ಸಿಲೋನಿನಲ್ಲಿ ಪ್ರಚಾರದ ಭರಾಟೆಯೂ ಜೋರಾಗಿತ್ತು. ಹೀಗಾಗಿ ಜೂನ್ 26ರಂದು ಚಿತ್ರ ಬಿಡುಗಡೆಗೊಳ್ಳುವ ಹೊತ್ತಿಗೆ ಎಲ್ಲರಿಗೂ ಹಾಡುಗಳೆಲ್ಲ ಕಂಠಪಾಠವಾಗಿದ್ದವು. ನಿರೀಕ್ಷೆ ಮುಗಿಲು ಮುಟ್ಟಿ ಚಿತ್ರಪ್ರೇಮಿಗಳೆಲ್ಲರೂ ಚಿತ್ರವು ಬೆಳ್ಳಿತೆರೆಯನ್ನಲಂಕರಿಸುವ ಕ್ಷಣಕ್ಕಾಗಿ ಕಾಯುವಂತಾಗಿತ್ತು. ಶಂಕರ್ ಜೈಕಿಶನ್ ಸಂಗೀತದ ಸೆಳೆತದ ಜೊತೆಗೆ ರಾಜಕಪೂರ್ ಅವರ ಮೊತ್ತ ಮೊದಲ ಕಲರ್ ಚಿತ್ರ, ಸುಮಾರು ನಾಲ್ಕು ತಾಸುಗಳ ಸುದೀರ್ಘ ಅವಧಿ, ಎರಡು intervalಗಳು, ಒಂದು ಇಂಗ್ಲಿಷ್ ಹಾಡು, ವಿಧೇಶಗಳಲ್ಲಿ ಚಿತ್ರೀಕರಣ ಇತ್ಯಾದಿ ಅಂಶಗಳು ಚಿತ್ರದ ವಿಶೇಷ ಆಕರ್ಷಣೆಯಾಗಿದ್ದವು. ನಾನು ಆಗ 8ನೇ ತರಗತಿಯಲ್ಲಿ ಓದುತ್ತಿದ್ದು ದಸರಾ ರಜೆಯಲ್ಲಿ ಆಯೋಜಿಸಲಾದ ಪ್ರವಾಸದ ಸಂದರ್ಭದಲ್ಲಿ ಮಂಗಳೂರಿನ ಸೆಂಟ್ರಲ್ ಟಾಕೀಸಿನಲ್ಲಿ ಆ ಚಿತ್ರ ನೋಡುವ ಅವಕಾಶ ಸಿಕ್ಕಿತು. ನಾನು ನೋಡಿದ ಮೊದಲ ಕಲರ್ ಸಿನಿಮಾ ಇದು. ಅದೂ ಉಜ್ವಲ ಟೆಕ್ನಿಕಲರ್‌ನಲ್ಲಿ. (ಕ್ಯಾಮರಾದೊಳಗೆ ಪ್ರವೇಶಿಸುವ ಕಿರಣಗಳನ್ನು ಕೆಂಪು, ಹಸಿರು ಮತ್ತು ನೀಲಿ ಫಿಲ್ಟರುಗಳ ಮೂಲಕ ವಿಭಜಿಸಿ ಫಿಲ್ಮಿನ ಪ್ರತ್ಯೇಕ ಮೂರು ಪಟ್ಟಿಗಳ ಮೇಲೆ ಬೀಳುವಂತೆ ಮಾಡಿ ನಂತರ ಆ ಮೂರೂ ಭಾಗಗಳು ಒಂದರ ಮೇಲೊಂದು ಬೀಳುವಂತೆ super impose ಮಾಡುವುದರಿಂದ ಟೆಕ್ನಿಕಲರಿನ ವರ್ಣ ವೈವಿಧ್ಯ ಮತ್ತು ಸ್ಪಷ್ಟತೆ ಅನುಪಮವಾದುದು. ಆದರೆ ಈ ಪ್ರಕ್ರಿಯೆ ತುಂಬಾ ದುಬಾರಿಯಾದ್ದರಿಂದ ಆ ಮೇಲೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು ಎಲ್ಲರೂ ಅಗ್ಗದ ಈಸ್ಟ್‌ಮನ್ ಕಲರ್ ಬಳಸತೊಡಗಿದರು.) ಮತ್ತೆರಡು ಸಲ ಮರುಬಿಡುಗಡೆಯಾದಾಗಲೂ ಥಿಯೇಟರುಗಳಲ್ಲಿ ನೋಡಿದ್ದೇನೆ. ಇತ್ತೀಚೆಗೆ ಯೂಟ್ಯೂಬ್ ವಾಹಿನಿಯಲ್ಲಿ ಆ ಚಿತ್ರದ unedited HD ಆವೃತ್ತಿ ನೋಡಲು ಸಿಕ್ಕಿತು. ನಾನು ಕೇಳಲು ಹಳೆಯ ಹಾಡುಗಳ ಕಡು ಅಭಿಮಾನಿಯಾದರೂ ನೋಡಲು ಇಷ್ಟ ಪಡುವುದು ಶಮ್ಮಿ ಕಪೂರ್ ಅವರ ಚಿತ್ರಗಳನ್ನು ಮತ್ತು ಹಾಡುಗಳನ್ನು ಮಾತ್ರ. ಆದರೆ ಸಂಗಂ ಇದಕ್ಕೊಂದು ಅಪವಾದ.
50ರ ದಶಕದಲ್ಲೇ ಘರೌಂದಾ ಎಂಬ ಹೆಸರಲ್ಲಿ ನರ್ಗಿಸ್ ಮತ್ತು ದಿಲೀಪ್ ಕುಮಾರ್ ಅವರನ್ನೊಳಗೊಂಡು ಈ ಚಿತ್ರ ತಯಾರಿಸುವ ಕನಸನ್ನು ರಾಜ್ ಕಪೂರ್ ಕಂಡಿದ್ದರಂತೆ. ಆದರೆ ಮದರ್ ಇಂಡಿಯಾದ ನಂತರ ಸುನಿಲ್ ದತ್ತ್ ಅವರನ್ನು ಮದುವೆಯಾದ ನರ್ಗಿಸ್ ಚಿತ್ರ ರಂಗಕ್ಕೇ ವಿದಾಯ ಹೇಳಿದರು. ದಿಲೀಪ್ ಕುಮಾರ್ ಏನೇನೋ ನೆವ ಹೇಳಿ ನಿರಾಕರಿಸಿದರಂತೆ. ದೇವಾನಂದ್ ಕೂಡ ಒಪ್ಪದಿದ್ದಾಗ ಗೋಪಾಲ್ ಪಾತ್ರಕ್ಕೆ ಅಂತಿಮವಾಗಿ ರಾಜೇಂದ್ರ ಕುಮಾರ್ ಆಯ್ಕೆ ಆದರು. ರಾಧಾ ಪಾತ್ರಕ್ಕೆ ರಾಜ್ ಕಪೂರ್ ಬಯಸಿದ್ದ ವೈಜಯಂತಿ ಮಾಲಾ ತನ್ನ ವ್ಯಸ್ತತೆಯ ಕಾರಣ ಬಹಳ ಸಮಯ ಸಮ್ಮತಿ ಸೂಚಿಸಿರಲಿಲ್ಲವಂತೆ. ತಾಳ್ಮೆ ಕಳೆದುಕೊಂಡ ರಾಜ ಕಪೂರ್ ಕೊನೆಗೆ ಮದ್ರಾಸಲ್ಲಿ ಶೂಟಿಂಗಲ್ಲಿ ನಿರತವಾಗಿದ್ದ ವೈಜಯಂತಿ ಮಾಲಾಗೆ ‘ರಾಧಾ, ಸಂಗಮ್ ಹೋಗಾ ಕಿ ನಹೀಂ?’ ಎಂದು ಟೆಲಿಗ್ರಾಮ್ ಕಳಿಸಿದಾಗ ಕೊನೆಗೂ ಆಕೆ ‘ಹೋಗಾ ಹೋಗಾ ಹೋಗಾ’ ಉತ್ತರಿಸಿದಳಂತೆ. ಈ ಟೆಲಿಗ್ರಾಮ್ ಸಂಭಾಷಣೆಯನ್ನು ಆಧಾರವಾಗಿಸಿ ಶೈಲೇಂದ್ರ ಅವರು ಮೇರೆ ಮನ್ ಕೀ ಗಂಗಾ ಹಾಡನ್ನು ರಚಿಸಿದರು ಎಂದು ರಾಜ ಕಪೂರ್ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಸಂಗಂ ಚಿತ್ರದ ಹಾಡುಗಳು ಎಲ್ಲರಿಗೂ ಗೊತ್ತಿರುವಂಥವೇ, ಸಾವಿರಾರು ಬಾರಿ ಕೇಳಿರುವಂಥವೇ. ಆದರೆ ಪ್ರತಿ ಸಲ ಕೇಳಿದಾಗಲೂ ಹೊಸತೆನ್ನಿಸುವ ಗುಣ ಅವುಗಳಿಗಿದೆ. ಹೀಗಾಗಿ ಪಂಚತಂತ್ರದ ಶ್ಲೋಕವನ್ನು ಕೊಂಚ ಬದಲಾಯಿಸಿ ಆದಿತ್ಯಸ್ಯೋದಯಮ್ ತಾತ ತಾಂಬೂಲಂ ಭಾರತೀ ಕಥಾ | ಸಂಗಂ ಸಂಗೀತ ಶ್ರವಣಂ ಅಪೂರ್ವಾಣಿ ದಿನೇ ದಿನೇ ಎಂದು ಹೇಳಲು ಅಡ್ಡಿ ಇಲ್ಲ. ನಾವು ಕೇಳುತ್ತಾ ಬಂದಿರುವ ಹಾಡುಗಳಿಗೂ ಚಿತ್ರದಲ್ಲಿರುವ ಅವೇ ಹಾಡುಗಳಿಗೂ ಸಾಕಷ್ಟು ವ್ಯತ್ಯಾಸ ಇರುವುದು ಸಂಗಂನ ವಿಶೇಷ. ಕೆಲವು ಕುತೂಹಲಕಾರಿ titbitಗಳನ್ನು ಓದಿ ಹಾಡುಗಳನ್ನು ಪೂರ್ತಿಯಾಗಿ ಕೇಳುವುದು ಚೇತೋಹಾರಿ ಅನುಭವ ನೀಡಬಲ್ಲುದು.
ಪದ್ಯಾವಳಿ
ಪದ್ಯಾವಳಿ
‘ಮುಂದಿನ ಕಥೆಯನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸಿರಿ’ ಎಂಬ standard ವಾಕ್ಯದೊಂದಿಗೆ ಮುಗಿಯುವ ಚಿತ್ರದ ಕಥಾ ಸಾರಾಂಶ ಮತ್ತು ಹಾಡುಗಳನ್ನೊಳಗೊಂಡ ಪದ್ಯಾವಳಿ ಇಲ್ಲಿದೆ. ಅದು ಮಂಗಳೂರಿನ ನವಭಾರತ್ ಪ್ರೆಸ್ಸಲ್ಲಿ ಮುದ್ರಿತವಾಗಿರುವುದನ್ನು ಗಮನಿಸಬಹುದು. ಅಂದರೆ ಚಿತ್ರದ ವಿತರಕರು ಒದಗಿಸಿದ ಮೂಲ ಹಿಂದಿ ಸಾಮಗ್ರಿಯನ್ನಾಧರಿಸಿ ಇಲ್ಲಿಯವರೇ ಯಾರೋ ಅದನ್ನು ಕನ್ನಡಕ್ಕೆ ಅನುವಾದಿಸಿರಬೇಕು. ಕಥಾ ಸಾರಾಂಶ ಬರೆದ ಶೈಲಿಯನ್ನು ಗಮನಿಸಿದರೆ ಹಿಂದಿ ಕನ್ನಡ ಎರಡನ್ನೂ ಬಲ್ಲ ಯಾರೋ ವಿದ್ವಾಂಸರ ಸಹಾಯವನ್ನು ಇದಕ್ಕಾಗಿ ಪಡೆದಿರಬಹುದು ಅನ್ನಿಸುತ್ತದೆ. ಈಗ ಪದ್ಯಾವಳಿ, ಹಾಡುಗಳು ಮತ್ತು ನೀವು. ಈ ಪುಟವನ್ನು book mark ಮಾಡಿಕೊಂಡು ಬಿಸಿ ಕಾಫಿಯನ್ನು ಸಣ್ಣ ಸಣ್ಣ ಗುಟುಕುಗಳಲ್ಲಿ ಹೀರಿದಂತೆ ನಿಮಗೆ ವಿರಾಮದ ವೇಳೆ ಸಿಕ್ಕಿದಾಗಲೆಲ್ಲ ಒಂದೊಂದೇ ಹಾಡನ್ನು ಆಸ್ವಾದಿಸಿ. ಇದು ಎಂದಿಗೂ ತಣಿಯದ ಕಾಫಿಯಾದ್ದರಿಂದ ಎಷ್ಟು ಸಲ ಬೇಕಿದ್ದರೂ ಆಸ್ವಾದಿಸಬಹುದು!
ಪದ್ಯಾವಳಿ ತೆರೆಯಲು ಅದರ ಮೇಲೆ ಕ್ಲಿಕ್ಕಿಸಿ scroll ಮಾಡಿ.
ಪದ್ಯಾವಳಿ ತೆರೆಯಲು ಅದರ ಮೇಲೆ ಕ್ಲಿಕ್ಕಿಸಿ scroll ಮಾಡಿ.
ಮೇರೇ ಮನ್ ಕೀ ಗಂಗಾ
ಇದು ಶೈಲೇಂದ್ರ ಅವರ ರಚನೆ. ಶಂಕರ್ ಜೈಕಿಶನ್ ಒಂದೇ ಹೆಸರಾಗಿದ್ದರೂ ಕೆಲವು ಹಾಡುಗಳನ್ನು ಶಂಕರ್, ಕೆಲವನ್ನು ಜೈಕಿಶನ್ ಸಂಯೋಜಿಸುತ್ತಿದ್ದುದು ಗುಟ್ಟೇನೂ ಆಗಿರಲಿಲ್ಲ. ಸಾಮಾನ್ಯವಾಗಿ ಶೈಲೇಂದ್ರ ಬರೆದ ಹಾಡುಗಳಿಗೆ ಶಂಕರ್, ಹಸರತ್ ಜೈಪುರಿ ಬರೆದ ಹಾಡುಗಳಿಗೆ ಜೈಕಿಶನ್ ಸ್ವರ ಸಂಯೋಜಿಸುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಆ ಅಲಿಖಿತ ನಿಯಮ ಇಲ್ಲಿ ಮುರಿಯಲ್ಪಟ್ಟು ಈ ಶೈಲೇಂದ್ರ ಹಾಡನ್ನು ಜೈಕಿಶನ್ ಸ್ವರಬದ್ಧಗೊಳಿಸಿದ್ದರು. ಹಾಡಿನಲ್ಲಿ bagpipe ಉಪಯೋಗಿಸಲಾಗಿದ್ದು ಚಿತ್ರದಲ್ಲೂ ಮರವೊಂದರ ಮೇಲೆ ಕುಳಿತ ರಾಜಕಪೂರ್ ಆ ವಾದ್ಯ ನುಡಿಸುತ್ತಾರೆ. ಆಕರ್ಷಕವಾಗಿ ನುಡಿಸಲಾಗಿರುವ ಢೋಲಕ್ ಜೊತೆಗೆ ಬುಡುಬುಡಿಕೆಯಂತಹ ಸಂಗೀತೋಪಕರಣವೊಂದನ್ನು ಬಳಸಲಾಗಿದೆ. Bagpipeನ ಜೊತೆಗೂ ಮೌರಿಯಂಥ ಇನ್ನೊಂದು ವಾದ್ಯವನ್ನೂ ಬಳಸಿರಬಹುದು ಅನ್ನಿಸುತ್ತದೆ. Bagpipeನದ್ದು ನಿರಂತರ ಧ್ವನಿಯಾದ್ದರಿಂದ ಪೆ ಪೆ ಪೆ ಪೆ ಪೆ ಪೇಪೆ ಎಂದು ತೂತ್ಕಾರ ಅದರಲ್ಲಿ ಬರಲಾರದು. ಹಾಡಿನ ನಡುವೆ ನಾಯಕಿ ಹೇಳುವ ‘ನಹೀಂ ಕಭೀ ನಹೀಂ ಹಟ್’, ‘ಜಾವೊನ ಕ್ಯೂಂ ಸತಾತ್ರ್ ಹೋ ಹೋಗಾ ಹೋಗಾ ಹೋಗಾ’ ಇತ್ಯಾದಿ ಸಾಲುಗಳು ಈ ಹಾಡಿನ ಇನ್ನೊಂದು ಆಕರ್ಷಣೆ. ಮುಂದೆ ಎಪ್ರಿಲ್ ಫೂಲ್ ಚಿತ್ರದ ಟೈಟಲ್ ಹಾಡು, ಅಮನ್ ಚಿತ್ರದ ಆಜ್ ಕೀ ರಾತ್ ಯೆ ಕೈಸಿ ರಾತ್, ಜಬ್ ಜಬ್ ಫೂಲ್ ಖಿಲೆಯ ಏಕ ಥಾ ಗುಲ್ ಮುಂತಾದ ಹಾಡುಗಳಲ್ಲಿ ಈ trend ಮುಂದುವರೆಯಿತು. ಈ ಹಾಡಿನ interlude ಹಾಡಿನಷ್ಟೇ ಅಥವಾ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚೇ ಜನಪ್ರಿಯ ಅಂದರೂ ತಪ್ಪಿಲ್ಲ. ಹಳ್ಳಿ ಊರುಗಳ ವಾಲಗದವರೂ ಈ interlude ಸಮೇತವೇ ಈ ಹಾಡು ನುಡಿಸುತ್ತಿದ್ದುದು. ಹಿಂದಿ ಗೊತ್ತಿಲ್ಲದ ನಮ್ಮ ತಾಯಿ ಕೂಡ ‘ಹೋಗಾ ಕಿ ನಹೀಂ’ ಎಂದು ಹಾಡಿಕೊಳ್ಳುತ್ತಿದ್ದುದು ಈ ಹಾಡಿನ ಜನಪ್ರಿಯತೆಗೆ ಇನ್ನೊಂದು ಪುರಾವೆ. ಮುಕೇಶ್ ಮಾಧುರ್ಯ ಮಂಜರಿಯಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿಗಳಿವೆ. ಸಹಜವಾಗಿಯೇ ಇದು 1964ರ ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಪ್ರಥಮ ಸ್ಥಾನ ಗಳಿಸಿ ಚೋಟಿ ಕೀ ಪಾಯ್ದಾನನ್ನು ಅಲಂಕರಿಸಿತ್ತು. ಈಗ ಮೊದಲು ಗೀತ್ ಮಾಲಾದಲ್ಲಿ ಅಮೀನ್ ಸಯಾನಿ ಮೊಳಗಿಸಿದ್ದ ಚೋಟಿ ಕಾ ಬಿಗುಲ್, ಆ ಮೇಲೆ ಹಾಡು ಕೇಳಿ.
ಹರ್ ದಿಲ್ ಜೊ ಪ್ಯಾರ್ ಕರೇಗಾ
ಸುಮಿತ್ ಮಿತ್ರಾ ನುಡಿಸಿದ Piano Accordionನ ಅತ್ಯಾಕರ್ಷಕ prelude ಮತ್ತು interlude ಹೊಂದಿದ ಈ ಹಾಡೂ ಶೈಲೇಂದ್ರ ಅವರ ರಚನೆ. ಸಂಗೀತ ಸಂಯೋಜನೆ ಶಂಕರ್ ಅವರದ್ದಾಗಿರಬಹುದು. ಒಂದು interludeಗೆ piano ಬಳಕೆಯಾಗಿದೆ. ಮುಕೇಶ್, ಲತಾ ಮಂಗೇಶ್ಕರ್ ಜೊತೆಗೆ ಮಹೇಂದ್ರ ಕಪೂರ್ ಹಾಡಿದ್ದಾರೆ. ಯಾವುದೋ ಒಂದು ಪಾರ್ಟಿಯಲ್ಲಿ ಅವರ ಹಾಡು ಕೇಳಿ ಮೆಚ್ಚಿದ ರಾಜಕಪೂರ್ ತನ್ನ ಚಿತ್ರದಲ್ಲಿ ಹಾಡಿಸುವೆ ಎಂದು ನೀಡಿದ್ದ ವಾಗ್ದಾನದಂತೆ ಅವರಿಗೆ ಈ ಅವಕಾಶ ನೀಡಿದ್ದಾರೆ. ಈ ಹಿಂದಿನ ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದ ಹಮ್ ಭೀ ಹೈಂ ತುಮ್ ಭೀ ಹೋ ಹಾಡಿನಲ್ಲೂ ಒಂದೆರಡು ಸಾಲು ಮಹೇಂದ್ರ ಕಪೂರ್ ಹಾಡಿದ್ದರು. 78rpm ಧ್ವನಿಮುದ್ರಿಕೆಯಲ್ಲಿ ಮಹೇಂದ್ರ ಕಪೂರ್ ಹಾಡಿದ ಚರಣ ಇರಲಿಲ್ಲ. LPಯಲ್ಲಿ ಇದೆ. ಚಿತ್ರದಲ್ಲೂ ಎಲ್ಲ ಮೂರು ಚರಣಗಳಿದ್ದು ಹಾಡಿನ ಕೊನೆಗೆ ದೀರ್ಘವಾದ ಅತಿರಿಕ್ತ accordion ವಾದನ ಇದೆ.
ಓ ಮೆಹೆಬುಬಾ
ಇದು ಹಸರತ್ ಜೈಪುರಿ ರಚನೆಯಾದ್ದರಿಂದ ಜೈಕಿಶನ್ ಸಂಯೋಜನೆ ಎಂದು ಊಹಿಸಬಹುದು. ಮ್ಯಾಂಡೊಲಿನ್, ಸೋಲೊವೊಕ್ಸ್ ಮತ್ತು ಗ್ರೂಪ್ ವಯಲಿನ್ಸ್ ಜೊತೆಗಿನ high pitch ಕೋರಸ್ ಬಳಸಲಾಗಿದೆ. ತಾಳವಾದ್ಯವಾಗಿ ಬೊಂಗೋ ಇದೆ. LPಯಲ್ಲಿ ಮೂರು ಚರಣಗಳಿದ್ದು ಈಗ ಲಭ್ಯವಿರುವ ಚಿತ್ರದ ಪ್ರತಿಯಲ್ಲಿ ಗುಜರೂಂ ಮೆ ಇಧರ್ ಸೇ ಕಭೀ ಚರಣ ಇಲ್ಲ. ಆದರೆ ಆರಂಭದಲ್ಲಿ ರೆಕಾರ್ಡಲ್ಲಿ ಇಲ್ಲದ ಅತಿರಿಕ್ತವಾದ ಭಾಗ ಇದೆ. ಅಂದು ಥಿಯೇಟರುಗಳಲ್ಲಿ ಪ್ರದರ್ಶಿಸಲ್ಪಟ್ಟ ಪ್ರತಿಯಲ್ಲಿ ಎಲ್ಲ ಚರಣಗಳು ಇದ್ದವೆಂದು ನೆನಪು.
ಯೆ ಮೇರಾ ಪ್ರೇಮ್ ಪತ್ರ್ ಪಢ್ ಕರ್
Massಗೆ ಮೇರೆ ಮನ್ ಕೀ ಗಂಗಾ ಈ ಚಿತ್ರದ ನಂಬರ ವನ್ ಹಾಡಾಗಿದ್ದರೆ Classಗೆ ರಫಿಯ ಈ ಹಾಡು ನಂಬರ್ ವನ್. ರಫಿ ಅಭಿಮಾನಿಗಳ ಮಾತಿನಲ್ಲಿ ಹೇಳುವುದಾದರೆ ಉಳಿದೆಲ್ಲ ಹಾಡುಗಳು ಸೇರಿ ಒಂದು ತೂಕವಾದರೆ ಈ ಹಾಡೇ ಒಂದು ತೂಕ. ಹಸರತ್ ಜೈಪುರಿ ಬರೆದ ಈ ಹಾಡಿನ ಆರಂಭದಲ್ಲಿ ಇರುವ ಮೆಹರ್ಬಾನ್ ಲಿಖೂಂ, ಹಸೀನಾ ಲಿಖೂಂ, ಯಾ ದಿಲರುಬಾ ಲಿಖೂಂ ಸಾಲುಗಳು ಪತ್ರ ಬರೆಯುವ ವಿವಿಧ ಶೈಲಿಗಳಾಗಿರಬಹುದೆಂದು ನಾನು ಬಹಳ ಕಾಲ ಅಂದುಕೊಂಡಿದ್ದೆ. ಅದರ ಅರ್ಥ ‘ಏನೆಂದು ಸಂಬೋಧಿಸಿ ಪತ್ರವನ್ನು ಆರಂಭಿಸಲಿ’ ಎಂದು ಆ ಮೇಲೆ ತಿಳಿಯಿತು. ಗ್ರೂಪ್ ವಯಲಿನ್ಸ್ ಜೊತೆಗೆ ರಷ್ಯನ್ ಶೈಲಿಯ high pitch ಕೋರಸ್ ಮತ್ತು ಚೇಲೋದ ಅತಿಮಂದ್ರ counter melody ಜೈಕಿಶನ್ ಅವರ ಈ ಸಂಗೀತ ಸಂಯೋಜನೆಯ ಮುಖ್ಯ ಆಕರ್ಷಣೆ. ಆ ವರ್ಷದ ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಇದು ಎರಡನೇ ಸ್ಥಾನದಲ್ಲಿತ್ತು. ಸಿನಿಮಾದ ಕಥೆಯಲ್ಲಿ ಈ ಪ್ರೇಮಪತ್ರದ್ದು ಪ್ರಮುಖ ಪಾತ್ರ. ಈ ಹಾಡಿನ interludeನ್ನು ವಿಜಯ ಭಾಸ್ಕರ್ ಅವರು ತಾರೆಗಳ ತೋಟದಿಂದ ಚಂದಿರ ಬಂದ ಹಾಡಲ್ಲಿ ಬಳಸಿಕೊಂಡಿದ್ದಾರೆ.
ರೆಕಾರ್ಡಿನಲ್ಲಿ ರಫಿ ಮಾತ್ರ ಹಾಡಿದ್ದರೂ ಚಿತ್ರದಲ್ಲಿ ಕೊನೆಗೆ ಲತಾ ಮಂಗೇಶ್ಕರ್ ಕೂಡ ದನಿಗೂಡಿಸಿರುವುದು ವಿಶೇಷ. ನೀವು ಇಲ್ಲಿ ಆ ಭಾಗವನ್ನೂ ಕೇಳಲಿದ್ದೀರಿ.
ಕಾ ಕರೂಂ ರಾಮ್ ಮುಝೆ ಬುಡ್ಢಾ ಮಿಲ್ ಗಯಾ
ತನ್ನ ದಢೂತಿ ದೇಹದಿಂದಾಗಿ ರಾಜ್ ಕಪೂರ್ ಸಂಗಂನಲ್ಲಿ ಮಧ್ಯವಯಸ್ಕನಂತೆ ಕಾಣಿಸುತ್ತಿದ್ದು ಇದು ಆತ ತನ್ನನ್ನು ತಾನೇ ಗೇಲಿ ಮಾಡಿಕೊಂಡಂತಿರುವ ಹಾಡು. ಕ್ಯಾ ಕರೂಂ ಬದಲಿಗೆ ಗ್ರಾಮ್ಯ ಶೈಲಿಯ ಕಾ ಕರೂಂ ಪದ ಬಳಸಲಾಗಿದೆ. ಮೊದಲು ಲತಾ ಮಂಗೇಶ್ಕರ್ ಈ ಹಾಡನ್ನು ಹಾಡಲು ಒಪ್ಪಿರಲಿಲ್ಲವಂತೆ. ತಾನಿದನ್ನು ಅಶ್ಲೀಲವಾಗೇನೂ ಚಿತ್ರೀಕರಿಸುವುದಿಲ್ಲ ಎಂದು ರಾಜ್ ಕಪೂರ್ ಭರವಸೆ ನೀಡಿದ ಮೇಲಷ್ಟೇ ಹಾಡಿದರಂತೆ. ಈ ಹಾಡಿನ ಕಾರಣಕ್ಕೋ ಅಥವಾ ಇನ್ಯಾವುದಕ್ಕೋ ಮುಂದೆ ಬಾಬ್ಬಿ ವರೆಗೆ ಯಾವುದೇ ರಾಜ ಕಪೂರ್ ಚಿತ್ರದಲ್ಲಿ ಲತಾ ಹಾಡಲಿಲ್ಲ. ಆಕಾಶವಾಣಿಗೂ ಇದು ಅಪವಿತ್ರ ಹಾಡಾಯಿತು. ಹೀಗಾಗಿ ಗ್ರಾಮಫೋನ್ ರೆಕಾರ್ಡ್ ಬಿಟ್ಟರೆ ರೇಡಿಯೋ ಸಿಲೋನಿನಲ್ಲಿ ಮಾತ್ರ ಇದು ಕೇಳಲು ಸಿಗುತ್ತಿದ್ದುದು. ಜಂಗ್ಲಿಯ ಚಾಹೆ ಕೋಯಿ ಮುಝೆ, ಎಪ್ರಿಲ್ ಫೂಲ್ ಚಿತ್ರದ ಟೈಟಲ್ ಹಾಡು ಮತ್ತು ಮೇರಾ ನಾಮ್ ರೀಟಾ ಕ್ರಿಸ್ಟೀನಾ, ಜಾನ್‌ವರ್ ಚಿತ್ರದ ಲಾಲ್ ಛಡಿ ಮೈದಾನ್ ಖಡಿ, ಗುಮ್ನಾಮ್ ಚಿತ್ರದ ಹಮ್ ಕಾಲೆ ಹೈಂ ತೊ ಮತ್ತು ಇಸ್ ದುನಿಯಾ ಮೆಂ ಜೀನಾ ಹೋ ತೊ, ಸಾಧೂ ಔರ್ ಶೈತಾನಿನ ಮೆಹಬೂಬಾ ಮೆಹಬೂಬಾ ಬನಾಲ್ಯೊ ಮಿಜೆ ದೂಲ್ಹಾ, ಶತ್ರಂಜ್ ಚಿತ್ರದ ಬದ್ಕಮ್ಮಾ ಇತ್ಯಾದಿ ಕೂಡ ಆಕಾಶವಾಣಿಗೆ ಅಪವಿತ್ರವಾಗಿದ್ದು ರೇಡಿಯೋ ಸಿಲೋನಿನಲ್ಲಿ ಮಾತ್ರ ಕೇಳಲು ಸಿಗುತ್ತಿದ್ದ ಹಾಡುಗಳು. ಇದು ಹಸರತ್ ಜೈಪುರಿ ಅವರ ರಚನೆ. ತನ್ನ ನೆರೆಮನೆ ಹುಡುಗಿಯೊಬ್ಬಳಿಗೆ ಬರೆದಿದ್ದ ನಿಜವಾದ ಪ್ರೇಮ ಪತ್ರವಿದು ಎಂದು ಅವರು ಹೇಳಿದ್ದನ್ನು ಕೇಳಿದ್ದೇನೆ. ಮೊದಲ ಸಲ ಇದನ್ನು ಕೇಳಿದಾಗ ಎದುರಿಗಿರುವ ರಾಮ ಎಂಬ ವ್ಯಕ್ತಿಯೊಡನೆ ತನಗೆ ಮುದುಕ ಸಿಕ್ಕಿದ ಸಮಾಚಾರ ತಿಳಿಸುವ ಹಾಡಿದು ಎಂದುಕೊಂಡಿದ್ದೆ! ಆ ಮೇಲೆ ‘ರಾಮ್’ ಎಂದರೆ ಅಯ್ಯೋ ದೇವರೇ ಎಂದಂತೆ ಎಂದು ತಿಳಿಯಿತು. ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಇದು 10ನೇ ಸ್ಥಾನದಲ್ಲಿತ್ತು.
Ich liebe dich – I Love You
ಇದು ಇಂಗ್ಲಿಷ್ ಹಾಡೆಂದು ಬಿಂಬಿಸಲ್ಪಟ್ಟಿದ್ದರೂ ಇದರ ಪಲ್ಲವಿಯಲ್ಲಿ ich liebe dich ಎಂಬ German, j’ vous t’aime ಎಂಬ French, ya lyublyu vas ಎಂಬ Ukranian ಮತ್ತು ಇಶ್ಕ್ ಹೈ ಇಶ್ಕ್ ಎಂಬ ಉರ್ದು ಭಾಗಗಳಿವೆ. ಇದನ್ನು ವಿವಿಯನ್ ಲೋಬೊ ಎಂಬವರು ಹಾಡಿದ್ದು ಚಿತ್ರದ titlesನಲ್ಲಿ ಅವರ ಹೆಸರು ನಮೂದಾಗಿಲ್ಲ. ಹೀಗಾಗಿ ಇದು ಕೊನೆ ಕ್ಷಣದ ಸೇರ್ಪಡೆಯಾಗಿರಬಹುದೆಂದು ಊಹೆ. ಜೈಕಿಶನ್ ಅವರು ಯಾವಾಗಲೂ ಭೇಟಿ ಕೊಡುತ್ತಿದ್ದ ಹೋಟೆಲಲ್ಲಿ ವಿವಿಯನ್ ಲೋಬೊ ಈ ಹಾಡು ಹಾಡುತ್ತಿದ್ದರಂತೆ. ಒಂದಷ್ಟು interlude music ಸೇರಿಸಿ ಅದನ್ನು ಯಥಾವತ್ ಬಳಸಿಕೊಳ್ಳಲಾಗಿದೆ. ಶಂಕರ್ ಜೈಕಿಶನ್ ಛಾಯೆಯೇನೂ ಇದರಲ್ಲಿ ಗೋಚರಿಸುವುದಿಲ್ಲ. ಇದನ್ನು ರೇಡಿಯೋದಲ್ಲಿ ಒಮ್ಮೆಯೂ ಕೇಳಿದ ನೆನಪಿಲ್ಲ.
ದೋಸ್ತ್ ದೋಸ್ತ್ ನ ರಹಾ
ಇದು ಶಂಕರ್ ಅವರ ಮಹತ್ವಾಕಾಂಕ್ಷೆಯ ಹಾಡು. ಸ್ವತಃ ಶಂಕರ್ ಮತ್ತು ರೋಬರ್ಟ್ ಎಂಬ ಕಲಾವಿದ ನುಡಿಸಿದ ಪಿಯಾನೋ ಮತ್ತು ಗ್ರೂಪ್ ವಯಲಿನ್ಸ್ ಮಾತ್ರ ಮುಖ್ಯ ವಾದ್ಯಗಳು. ನಿಜಕ್ಕೂ ಮನ ಕುಲಕುವ ಸಂಗೀತ ಸಂಯೋಜನೆ. ಚಿತ್ರದ ಕಥೆ ಪ್ರಕಾರ ಗೋಪಾಲ್ ಮತ್ತು ರಾಧಾ ಸುಂದರನಿಗೆ ಯಾವುದೇ ದ್ರೋಹ ಎಸಗದಿರುವುದರಿಂದ ಗೋಪಾಲ್ ಪಾತ್ರ ನಿರ್ವಹಿಸಿದ್ದ ರಾಜೇಂದ್ರ ಕುಮಾರ್ ಈ ಹಾಡಿನ ಪ್ರಸ್ತುತತೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದರಂತೆ. ಆದರೆ ಹಾಡನ್ನು ಕೈಬಿಡಲು ಮನಸ್ಸಿಲ್ಲದ ರಾಜ್ ಕಪೂರ್ ತನ್ನ ಅಂದರೆ ಸುಂದರನ ಮೇಲೆ ಹೆಚ್ಚು ಕೇಂದ್ರೀಕರಿಸದೆ ಗೋಪಾಲ್ ಮತ್ತು ರಾಧಾ ಪಾತ್ರಗಳನ್ನು ಮುಂಚೂಣಿಯಲ್ಲಿರಿಸಿ ಹಾಡನ್ನು ಚಿತ್ರೀಕರಿಸಿದರೆಂದು ರಾಜೇಂದ್ರ ಕುಮಾರ್ ಒಂದು interviewನಲ್ಲಿ ಹೇಳಿದ್ದರು.
ಬಿನಾಕಾ ಗೀತ್ ಮಾಲಾದ ಜನಪ್ರಿಯತೆಯಲ್ಲಿ ಪ್ರಥಮ ಎರಡು ಸ್ಥಾನಗಳನ್ನು ಅಲಂಕರಿಸಿದ್ದ ಜೈಕಿಶನ್ ಅವರ ಪ್ರೇಮ್ ಪತ್ರ ಪಢ್ ಕರ್ ಮತ್ತು ಮೇರೆ ಮನ್ ಕೀ ಗಂಗಾ ಅಷ್ಟೇ ಅಲ್ಲ, 10ನೇ ಸ್ಥಾನದ ಬುಡ್ಢಾ ಮಿಲ್ ಗಯಾಗಿಂತಲೂ ತನ್ನ ಈ ಹಾಡು ಹಿಂದುಳಿದು 12ನೇ ಸ್ಥಾನ ಪಡೆದದ್ದು ಶಂಕರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಮೇಲಾಗಿ ಜೈಕಿಶನ್ ಒಂದು interviewದಲ್ಲಿ ಪ್ರೇಮ್ ಪತ್ರ ಪಢ್ ಕರ್ ತನ್ನ ಸಂಯೋಜನೆ ಎಂಬ ರಹಸ್ಯವನ್ನು ಬಿಚ್ಚಿಟ್ಟದ್ದೂ ಅವರ ಅಸಮಾಧಾನಕ್ಕೆ ಇನ್ನೊಂದು ಕಾರಣ. ಈ ಅಸಮಾಧಾನ ಕ್ರಮೇಣ ಹೆಚ್ಚುತ್ತ ಹೋಗಿ ಅವರಿಬ್ಬರ ಮಧ್ಯೆ ಬಿರುಕುಂಟಾಗಲೂ ಕಾರಣವಾಗಿ ಕ್ರಮೇಣ ಅವರ ಸಂಗೀತದ ಗುಣಮಟ್ಟದ ಮೇಲೂ ಋಣಾತ್ಮಕ ಪರಿಣಾಮ ಬೀರತೊಡಗಿತು ಎಂದೂ ಕೆಲವರು ಹೇಳುತ್ತಾರೆ. ಅಮೀನ್ ಸಯಾನಿ ಶಂಕರ್ ಅಸಮಾಧಾನದ ಬಗ್ಗೆ ಏನು ಹೇಳಿದ್ದರೆಂದು ಮೊದಲು ಕೇಳಿ ಆ ಮೇಲೆ ಹಾಡು ಆಲಿಸಿ.
ಓ ಮೇರೆ ಸನಮ್
ಚಿತ್ರದ ಇತರ ಹಾಡುಗಳ ನೆರಳಿನಲ್ಲಿ ತನ್ನ ಯೋಗ್ಯತೆಯಷ್ಟು ಜನಪ್ರಿಯತೆ ಗಳಿಸಲು ಸಾಧ್ಯವಾಗದ ಅತಿ ಸುಂದರ ಅತ್ಯಂತ ಮಧುರ ಹಾಡಿದು. ಮುಕೇಶ್ ಅವರ ರೇಂಜ್ ಗಮನದಲ್ಲಿರಿಸಿ ಅವರ ಚರಣವನ್ನು ಬೇರೆ ರೀತಿ ಸಂಯೋಜಿಸಿರುವುದನ್ನು ಗಮನಿಸಬಹುದು. ಶೈಲೇಂದ್ರ ಅವರ ಸಾಹಿತ್ಯಕ್ಕೆ ಶಂಕರ್ ಅವರ ಶಿವರಂಜಿನಿ ಆಧಾರಿತ ರಾಗ ಸಂಯೋಜನೆ. ಸಿತಾರ್, ವಯಲಿನ್ಸ್, vibraphone, ತಬ್ಲಾಗಳ ಸುಂದರ ಸಂಗಮ. ಮೂರು ಚರಣಗಳಿದ್ದು ಎರಡನ್ನು ಲತಾ ಮತ್ತು ಒಂದನ್ನು ಮುಕೇಶ್ ಹಾಡಿದ್ದಾರೆ. ಚಿತ್ರದಲ್ಲಿ ಒಂದೇ ಚರಣ ಬಳಸಿಕೊಳ್ಳಲಾಗಿದೆ.
ಹಿನ್ನೆಲೆ ಸಂಗೀತ
ಅತಿ ಮಧುರ ಹಾಡುಗಳಷ್ಟೇ ಅಲ್ಲದೆ ಚಿತ್ರದುದ್ದಕ್ಕೂ ಅತ್ಯಾಕರ್ಷಕ ಹಿನ್ನೆಲೆ ಸಂಗೀತ ಹೊಂದಿರುವುದು ಸಂಗಂ ಚಿತ್ರದ ಇನ್ನೊಂದು ವಿಶೇಷ. ಆ ತುಣುಕುಗಳು ಮುಂದೆ ಎಷ್ಟು ಚಿತ್ರಗಳ ಹಾಡುಗಳಾಗಿ ಹೊಮ್ಮಿದವೋ ಏನೋ. ಈ ಒಂದು ತುಣುಕಂತೂ ಕನ್ನಡ ಹಾಡಾಗಿದೆ. ಯಾವುದೆಂದು ಗುರುತಿಸಿ.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅದರ ಹೆಸರನ್ನೊಳಗೊಂಡ ಒಂದು ಹಾಡು ಅಂದರೆ ಟೈಟಲ್ ಸಾಂಗ್ ಇರುವುದುಂಟು. ಆದರೆ ಈ ಚಿತ್ರದ ಮೇರೆ ಮನ್ ಕೀ ಗಂಗಾ, ಓ ಮೆಹೆಬೂಬಾ ಮತ್ತು ಓ ಮೇರೆ ಸನಮ್ - ಈ ಮೂರು ಹಾಡುಗಳಲ್ಲಿ ಸಂಗಂ ಪದದ ಉಲ್ಲೇಖವಿದೆ. ಇದರ ಹಾಡುಗಳ ಸಾಲುಗಳನ್ನಾಧರಿಸಿ ಬೋಲ್ ರಾಧಾ ಬೋಲ್, ಹರ್ ದಿಲ್ ಜೊ ಪ್ಯಾರ್ ಕರೇಗಾ ಮತ್ತು ಬುಡ್ಢಾ ಮಿಲ್ ಗಯಾ ಹೆಸರಿನ ಚಿತ್ರಗಳು ತಯಾರಾಗಿವೆ.
ಒಟ್ಟಿನಲ್ಲಿ ಗಮನಿಸುವಾಗ ಮೇರೆ ಮನ್ ಕೀ ಗಂಗಾ, ಹರ್ ದಿಲ್ ಜೊ ಪ್ಯಾರ್ ಕರೇಗಾ, ಯೆ ಮೇರಾ ಪ್ರೇಮ್ ಪತ್ರ್ ಮತ್ತು ಓ ಮೇರೆ ಸನಮ್ ಹಾಡುಗಳ ತೂಕ ಉಳಿದವುಗಳಿಗಿಂತ ಹೆಚ್ಚು ಎಂದು ನನ್ನ ಅಭಿಪ್ರಾಯ. ವೈಯುಕ್ತಿಕವಾಗಿ ಮೇರೆ ಮನ್ ಕೀ ಗಂಗಾ ನನಗೆ ಆಗಲೂ ಈಗಲೂ ಅತಿ ಹೆಚ್ಚು ಇಷ್ಟದ ಹಾಡು. ಸಂಗಂ ಚಿತ್ರ ಬಂದ ಆ ಕಾಲದಲ್ಲೇ ರೇಡಿಯೋದಲ್ಲಿ ಹಾಡಿನ ವಿವರಗಳನ್ನು ಹೇಳಿದಾಕ್ಷಣ ಯಾವ ಹಾಡೆಂದು ಗುರುತಿಸುವ ಕಲೆ ನನಗೆ ಸಿದ್ಧಿಸಿತ್ತು. ಆದರೆ ಚಿತ್ರ ಸಂಗಂ, ಗಾಯಕರು ಮುಕೇಶ್, ರಚನೆ ಶೈಲೇಂದ್ರ, ಸಂಗೀತ ಶಂಕರ್ ಜೈಕಿಶನ್ ಅಂದಾಕ್ಷಣ ಎರಡು ಸಾಧ್ಯತೆಗಳಿದ್ದು ಆ ಹಾಡು ದೋಸ್ತ್ ದೋಸ್ತ್ ನ ರಹಾ ಆಗಿರದೇ ಮೇರೆ ಮನ್ ಕೀ ಗಂಗಾ ಆಗಿರಲಿ ಎಂದು ನಾನು ಹಾರೈಸುವುದಿತ್ತು. ಹೆಚ್ಚಿನ ಸಲ ಅದು ನಿಜವೂ ಆಗುತ್ತಿತ್ತು.
ಶಂಕರ್ ಪಾಲಿಗೆ ನಿಜವಾದ ದೋಸ್ತ್ ದೋಸ್ತ್ ನ ರಹಾ
ಜೈಕಿಶನ್ ನಿಧನದ ನಂತರ ತನ್ನ ಪರಮ ಮಿತ್ರ ರಾಜ ಕಪೂರ್ ಮಾತ್ರವಲ್ಲ ಇತರ ಪ್ರಮುಖ ನಿರ್ಮಾಪಕರೂ ಶಂಕರ್ ಅವರನ್ನು ಕೈಬಿಟ್ಟು ಅವರ ಪಾಲಿಗೆ ‘ದೋಸ್ತ್ ದೋಸ್ತ್ ನ ರಹಾ’ ನಿಜವಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸ. ಇವರೆಲ್ಲ ದೂರ ಸರಿಯಲು ಶಂಕರ್ ಅವರ ಸಿಡುಕು ಸ್ವಭಾವ ಕಾರಣವೆಂದು ಹೇಳುತ್ತಾರೆ. ಜೈಕಿಶನ್ ಅಕಾಲಿಕವಾಗಿ ನಿಧನರಾಗದಿದ್ದರೆ ಬಾಬ್ಬಿ, ಸೀತಾ ಔರ್ ಗೀತಾ, ಶೋಲೆ, ಸತ್ಯಂ ಶಿವಂ ಸುಂದರಂ ಮುಂತಾದ ಚಿತ್ರಗಳಲ್ಲಿ ಶಂಕರ್ ಜೈಕಿಶನ್ ಸಂಗೀತವೇ ಇರುತ್ತಿತ್ತು.
ಪತ್ರಿಕಾ ಜಾಹೀರಾತುಗಳು
ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವೈವಿಧ್ಯಮಯ ಸಂಗಂ ಜಾಹೀರಾತುಗಳನ್ನು ನೋಡಲು scroll ಮಾಡಿ.

1964 ನಲ್ಲಿ ನಾನು KPT ( ಮಂಗಳೂರು) ಯಲ್ಲಿ ಇಂಜಿನಿಯರಿಂಗ್ ಸೆಕೆಂಡ್ ಇಯರ್ ನಲ್ಲಿದ್ದೆ. ಆಗ ಯಾವುದಾದರೂ ಹೊಸ ಪಿಕ್ಚರ್ ಬಂದರೆ ಅದನ್ನು ನಾವು ಬಿಡುತ್ತಿರಲಿಲ್ಲ. ಸೆಂಟ್ರಲ್ ಟಾಕೀಸ್ ನಲ್ಲಿ ಆಗ ಬಾಲ್ಕನಿಗೆ ರೂ 1.35/- ಟಿಕೆಟ್ ದರ ಇತ್ತು. ಆದರೆ ಈ ಚಿತ್ರಕ್ಕೆ ಎರಡು ಮಧ್ಯಂತರಗಳಿದ್ದ ಕಾರಣ ಅಪವಾದವಾಗಿ ರೂ 2.10/- ಮಾಡಿದ್ದರು. ಆದರೂ ಇದನ್ನು ನೋಡುವ ಸಾಹಸ ಮಾಡಿದೆವು ( ಆಗ 75 ಪೈಸೆ ಹೆಚ್ಹಳವೆಂದರೆ ಅಯ್ಯೋ ಅನ್ನಿಸುತ್ತಿತ್ತು). ಹೆಚ್ಹಿನವರು ಈ ಚಿತ್ರವನ್ನು ಮುಖ್ಯವಾಗಿ ಮೇರೆ ಮನ್ ಕೀ ಗಂಗಾ ಹಾಡಿನಲ್ಲಿ ವೈಜಯಂತೀ ಮಾಲಾಳನ್ನು ನೋಡಲಿಕ್ಕೊಸ್ಕರ ಹಾಗೂ ವಿದೇಶದಲ್ಲಿ ಮಾಡಿದ ಚಿತ್ರಣಕ್ಕೊಸ್ಕರ ನೋಡುತ್ತಿದ್ದರು. ನಂತರ ಮೂರನೇ ವರುಷದಲ್ಲಿ ನಮಗೆ ಎಜುಕೇಶನಲ್ ಟೂರ್ ಗೆ ಹೈದರಾಬಾದ್ ಗೆ ಹೋಗುವ ಚಾನ್ಸ್ ಸಿಕ್ಕಿತ್ತು. ಆಗ ಇದರ ಚಿತ್ರ ನಡೆದ ಹುಸೇನ್ ಸಾಗರ್ ಲೇಕ್ ನೋಡುವ ಸಂದರ್ಭವೂ ಕೈಗೂಡದೆ ಇರಲಿಲ್ಲ. ಮೇರೆ ಮನಕಿ ಗಂಗಾ ಹಾಡಿನಲ್ಲಿ ರಾಜ್ ಕಪೂರ್ ಕೂತ ಮರ ಕೂಡಾ ನೋಡಲು ಸಿಕ್ಕಿತ್ತು!
ReplyDeleteಓ ..!! ಸಂಗಂ ...!! ಆ ಸಮಯದಲ್ಲೇ
ReplyDeleteನಮ್ಮಲ್ಲಿ ಮತ್ತೆ ರೇಡಿಯೋ ಟ್ರಾನ್ಸಿಸ್ಟರ್ ತಂದದ್ದು.
ಇಡೀ ದಿವಸ ಎಲ್ಲಿಯಾದರೂ ಒಂದು ಚ್ಯಾನೆಲ್ ನಲ್ಲಿ ಸಂಗಂ
ಹಾಡು ಇರ್ತಿತ್ತು....
ನಾನಾಗ ಹೈಸ್ಕೂಲ್ 8ನೇ ತರಗತಿ.
ಮಂಗಳೂರಿಗೆ ಶಾಲೆಯಿಂದ”ಟ್ರಿಪ್’....
ಯಾವುದೋ ಒಂದು ಶೈಕ್ಷಣಿಕ ಸಿನೇಮ ತೋರಿಸುವ ಉದ್ದೇಶ....
":ಶೈಕ್ಷಣಿಕ" ...ಆದ್ದರಿಂದಲೋ ಏನೋ ... ಏನೂ ನೆನಪಿಲ್ಲ....
ನಂತರ ಬಾಲಾಜಿ ಟಾಕೀಸಿನಲ್ಲಿ ...
ಮಾರ್ಕೋಫೊಲೊ ಇಂಗ್ಲಿಷ್ ಸಿನೇಮಾ ನೋಡಿ ...
ಹಿರಿಯ ವಿದ್ಯಾರ್ಥಿನಿಯರ ಒತ್ತಾಯದ ಮೇರೆಗೆ ಸಂಗಂ ತೋರಿಸಿದ್ದರು.
ಮಂಗಳೂರಿನ ಟ್ರಿಪ್ಪಿಗೆ ನಮ್ಮನ್ನು ಕರಕೊಂಡು ಹೋದವರು
ಶ್ರೀಧರ್ ರಾವ್ ಮಾಸ್ಟ್ರು
ಸಂಗಂ ನೋಡಿ ..ಪುನಃ ಬರುವಾಗ ಬಸ್ಸಿನಲ್ಲಿ
ಹೆಣ್ಣು ಮಕ್ಕಳೆಲ್ಲಾ ಏನೇನೋ ಪದ್ಯ ಹೇಳ್ತಾ ಇದ್ರು..
ಮಾಸ್ಟ್ರು .. " ಬೋಲ್ ರಾಧಾ ... ಹೇಳಿ ನೋಡ್ವಾ..."
ಅಂತ ಹೇಳಿದಾಗ ಬಸ್ಸಿನಲ್ಲಿ ನಗೆಯ ಸ್ಪೋಟ ...!!!
...............................!!!!
ಮಾಸ್ಟ್ರ ಶ್ರೀಮತಿಯವರ ಹೆಸರು ರಾಧಾ.
Moorthy Deraje (FB)
ಸಂಗಮ್ ಚಿತ್ರವನ್ನು ಮೊದಲ ನೋಡಿದಾಗ ನನಗೆ ಹಿಂದಿ ಸರಿಯಾಗಿ ಅರ್ಥವೇ ಆಗುತ್ತಿರಲಿಲ್ಲ. ಆದರೂ ಆಗಿನ ಕಾಲಕ್ಕೆ ಅಪರೂಪವಾಗಿದ್ದ ವಿದೇಶದಲ್ಲಿ ಚಿತ್ರೀಕರಣವಾಗಿದ್ದ ಚಿತ್ರ ಎಂದು ಮನೆಯವರೆಲ್ಲ ಹೋಗಿದ್ದೆವು. ಸಂಭಾಷಣೆಗಳು ಪೂರ್ತಿ ಅರ್ಥವಾಗದಿದ್ದರೂ ಕಥೆ ಅರ್ಥವಾಯ್ತು. ಹಾಡುಗಳಂತೂ ಒಂದಕ್ಕಿಂತ ಒಂದು ಸೂಪರ್. ಎಲ್ಲ ಹಾಡುಗಳು ಚೆನ್ನಾಗಿದ್ದರೂ ನನಗೆ ತುಂಬಾ ಇಷ್ಟವಾದ ಎಂದೆಂದಿಗೂ ಪ್ರಿಯವಾದ ಹಾಡೆಂದರೆ ಏಹ್ ಮೇರಾ ಪ್ರೇಮಪತ್ರ ಪಡ್ಕರ್ . ಆ ಲೊಕೇಶನ್ , ಚಿತ್ರೀಕರಣ ರಾಜೇಂದ್ರಕುಮಾರ್ ವ್ಯಜಯಂತಿಮಾಲಾ gulmohar ಮರಗಳು ಹಸಿರು ಹುಲ್ಲಿನ ಹಾಸು , ಅವರಿಬ್ಬರ ತನ್ಮಯತೆ ಎಲ್ಲಾ ಮರೆಯಲಾಗದ ನೆನಪುಗಳು. ಅದರಲ್ಲೂ ಕೊನೆಯಲ್ಲಿ ಲತಾಜಿಯರ ಧ್ವನಿಯಲ್ಲಿ ಬರುವ ಕೊನೆಯ ಸಾಲು ತುಂಬಾ ಅದ್ಭುತ . ಆ humming ಅದೆಷ್ಟು ಮೋಹಕ . ಮುಂದೆ ಕಾಲೇಜು ಗೆಳತಿಯರ ನಡುವೆ ಈ ಸಿನಿಮಾ ಚರ್ಚೆ ಬಂದಾಗ ನಾನಾಗಿದ್ರೆ rajkpoor ಅನ್ನು ಒದ್ದೋಡಿಸಿ ರಾಜೇಂದ್ರ ಕುಮಾರನ್ನು ಮದ್ವೆ ಆಗತಿದ್ದೆ ಅಂತಾನೂ ಹೇಳಿದ್ದೆ. ಮೊನ್ನೆ ಮೊನ್ನೆ ಈ ಹಾಡಿನ ಫೀಮೇಲ್ ವರ್ಷನ್ ಯೌಟ್ಯೂಬ್ ನಲ್ಲಿ ನೋಡಿದೆ. ಅದು ಬಹುಷಃ ಸಿನೆಮಾದಲ್ಲಿಲ್ಲ ಅನ್ಸುತ್ತೆ. ಟಿವಿ ನಲ್ಲಿ ಈ ಸಿನಿಮಾ ಎಷ್ಟು ಸಲ ಬಂದರೂ ನೋಡುತ್ತೇನೆ.
ReplyDeleteLaxmi GN (FB)
ನನಗಂತೂ ಸಂಗಂ ಸಿನಿಮಾದ ಎಲ್ಲಾ ಹಾಡುಗಳೂ ತುಂಬಾ ಇಷ್ಟ. “ ಇಷ್ ಲಿಬೆ ಡಿಷ್”( I love you) ಹಾಡಿನಲ್ಲಿ ಬರುವ ನಾನಾ ಭಾಷೆಗಳ I love you ಸಾಲುಗಳು ಒಂದು ರೀತಿ ಖುಷಿ ಕೊಡುತ್ತಿದ್ದವು. “ಓ ಮೇರೆ ಸನಮ್” ಹಾಡು ಕೇಳುವಾಗ, ವೈಜಯಂತಿ ಮಾಲಾಳ ಪಾತ್ರದ ಹತಾಶೆಯನ್ನು ನೋಡಿ, ಮನಸ್ಸು ಆರ್ದ್ರವಾಗುತ್ತಿತ್ತು. “ಯೆ ಮೇರಾ ಪ್ರೇಮ್ ಪತ್ರ್ ಪಢ್ ಕರ್”- ಹಾಡಂತೂ -“love letter ಅಂದ್ರೆ ಹೀಗಿರಬೇಕು. ಹೀಗೆ ಬರೆಯುವ ಹುಡುಗನೇ ನನಗೂ ಸಿಗಬೇಕು”- ಅನ್ನುವ ಭಾವನೆ ಬರಿಸುತ್ತಿತ್ತು.”ಹರ್ ದಿಲ್ ಜೊ ಪ್ಯಾರ್ ಕರೇಗಾ”- ಹಾಡಿನ ಮೂರು ಪ್ಯಾರಾಗಳೂ ಆಯಾ ಪಾತ್ರಧಾರಿಗಳ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದ್ದವು. ಆದರೆ ನನಗೆ ಯಾವಾಗಲೂ “ ಗೋಪಾಲ್” ( ರಾಜೇಂದ್ರ ಕುಮಾರ್) ಹಾಡುತ್ತಿದ್ದ ಸಾಲುಗಳು -“ ಅಪ್ನೀ ಅಪ್ನೀ ಸಬ್ ನೇ ಕೆಹ್ ದೀ”ಕೇಳುವಾಗಲೆಲ್ಲಾ ಸಂಕಟವಾಗುತ್ತಿತ್ತು. ಅದೇಕೋ ಗೊತ್ತಿಲ್ಲ-ಸುಂದರ್ ( ರಾಜ್ ಕಪೂರ್) ಯಾಕಾದರೂ ರಾಧಾ- ಗೋಪಾಲ್ ನಡುವೆ ವಕ್ಕರಿಸಿಕೊಂಡನೋ- ಇವನೇ ಖಳನಾಯಕ ಅಂತಾ ಅನ್ನಿಸಿ, ಸುಂದರ್ ಮೇಲೆ ಸಿಟ್ಟುಬರುತ್ತಿತ್ತು. 😀”ಮೇರೇ ಮನ್ ಕೀ ಗಂಗಾ “ ಹಾಡು ಕೇಳುವಾಗಲೂ ಸುಂದರ್ ಮೇಲೆ ಕೋಪ ಬರುತ್ತಿತ್ತು- ಇಷ್ಟು ಬಲವಂತ ಮಾಡಿ, ರಾಧಾಳ ಬಾಯಿಂದ “ಹೋಗಾ ಹೋಗಾ”- ಹೇಳಿಸಬೇಕಾ?- ಅಂತಾ.😀 ಮೊದಲ ಸಲ ಈ ಸಿನಿಮಾ ನೋಡಿದಾಗ, ನಾನು ತುಂಬಾ ಚಿಕ್ಕವಳು. ಹಿಂದಿ ಭಾಷೆ ಅರ್ಥವೂ ಆಗುತ್ತಿರಲಿಲ್ಲ. ಆದರೆ ಆಗ ಫೇಮಸ್ ಆಗಿದ್ದ “ಮೈ ಕ್ಯಾ ಕರೂ ರಾಮ್ ಮುಝೆ ಬುಡ್ಢಾ ಮಿಲ್ ಗಯಾ “ ಹಾಗೂ “ಮೇರೇ ಮನ್ ಕೀ ಗಂಗಾ” -ಇವೆರಡು ಹಾಡುಗಳೂ ವೈಜಯಂತಿ ಮಾಲಾ ನ ಭಾವಾಭಿನಯ , ಆಕೆ ಹಾಕಿದ್ದ ನವೀನ ದಿರಿಸು ಹಾಗೂ night lamp ನ top ಅನ್ನು hat ಆಗಿ ಬಳಸಿ ಮಾಡಿದ ಆಧುನಿಕ ನೃತ್ಯ ಶೈಲಿ ಮನ ಸೆಳೆದಿದ್ದರೆ, ಎರಡನೇ ಹಾಡಿನಲ್ಲಿ, ಆಕೆ bold ಆಗಿ swimming costume ನಲ್ಲಿ ಅಭಿನಯಿಸಿದ್ದು ಹಾಗೂ ರಾಜ್ ಕಪೂರ್ ನ ತುಂಟಾಟಗಳು- ಮನ ಸೆಳೆದಿದ್ದವು. ಅನೇಕ ವರ್ಷಗಳ ನಂತರ, ನನ್ನ ಕಾಲೇಜು ದಿನಗಳಲ್ಲಿ ಮತ್ತೆ ಇದೇ ಸಿನಿಮಾವನ್ನು ನೋಡಿದಾಗ, ಅಷ್ಟರಲ್ಲಿ ಹಿಂದಿ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲವಳಾಗಿದ್ದ ಕಾರಣದಿಂದ, ಚಿತ್ರದ ಸಂಭಾಷಣೆ ಹಾಗೂ ಹಾಡುಗಳ ಪ್ರತಿಯೊಂದು ಪದವೂ ಹೊಸದಾದ ರೀತಿಯಲ್ಲಿ ನನ್ನ ಮನದಾಳಕ್ಕಿಳಿದುಬಿಟ್ಟಿದ್ದವು.ನನ್ನ -ಎಂದೂ ಮರೆಯದ ಸಿನಿಮಾ ಲಿಸ್ಟ್ ನಲ್ಲಿ- ಸಂಗಂ ಸಿನಿಮಾ ಗೆ ಮಹತ್ತರ ಸ್ಥಾನವಿದೆ. ನಿಮ್ಮ ಚೆಂದದ ಸಂಗಂ ಸಿನಿಮಾದ ಹಾಡುಗಳ ವಿವರಣೆಯಿಂದ , ನನ್ನ ನೆನಪಿನ ಕೋಶದಿಂದ ನಾನು ಖುಷಿಯಿಂದ, ಈ ವಿವರಗಳನ್ನು ಬರೆಯುವಂತಾಯಿತು. ನಿಮಗೆ ಧನ್ಯವಾದಗಳು.🙏
ReplyDeleteಮಂಗಳಾ ಗುಂಡಪ್ಪ ( FB)