ಕೆಲ ವರ್ಷಗಳ ಹಿಂದೆ ಉದಯವಾಣಿಯ ಹಾಡು ಹಾದಿ ಹೆಜ್ಜೆ ಗುರುತು ಅಂಕಣದಲ್ಲಿ ಜಗನ್ಮೋಹಿನಿ ಚಿತ್ರದ ಎಂದೋ ಎಂದೋ ಹಾಡಿನ ಬಗ್ಗೆ ನನ್ನದೂ ಒಂದು ಕಿರು ಲೇಖನ ಪ್ರಕಟವಾಗಿತ್ತು. ಅದು ಹೀಗಿತ್ತು.
-----
ಇಲ್ಲದ ಹಾಡಿಗೆ ತುಡಿತ
ಎಂದೋ ಎಂದೋ ಎಂದೋ, ಎಂದೋ ನಿನ್ನ ದರುಶನ - 50ರ ದಶಕದ ಸೂಪರ್ ಹಿಟ್ ಚಿತ್ರ ಜಗನ್ಮೋಹಿನಿಯ ಈ ಹಾಡು ನನ್ನ ಕಿವಿಗೆ ಬಿದ್ದ ಮೊದಲ ಸಿನಿಮಾ ಗೀತೆ. ನನ್ನ ಅಕ್ಕ ಈ ಹಾಡನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಿದ್ದಳಂತೆ. ಮತ್ತೆ ಮತ್ತೆ ಈ ಹಾಡು ಹಾಡುವಂತೆ ನಾನು ಹಠ ಮಾಡುತ್ತಿದ್ದುದೂ ಇತ್ತಂತೆ. ನನಗೆ ಅರಿವು ಮೂಡುವುದಕ್ಕೂ ಮುನ್ನ ಎಂದೋ ಒಮ್ಮೆ ಮನೆಯವರೊಂದಿಗೆ ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ ಆ ಚಿತ್ರವನ್ನು ನೋಡಿದ್ದು, ಅದರೊಳಗಿನ ಜನರೆಲ್ಲ ಬೂದಿಯ ಮೇಲೇಕೆ ಓಡಾಡುತ್ತಿದ್ದಾರೆಂದು ನಾನು ಅಚ್ಚರಿಪಟ್ಟದ್ದು - ಕೆಲ ಅಸ್ಪಷ್ಟ ನೆನಪು ನನಗಿನ್ನೂ ಇದೆ. ಕಪ್ಪು ಬಿಳುಪಿನ ಆ ಚಿತ್ರದ ನೆಲ, ಬೆಟ್ಟ ಗುಡ್ದಗಳು ನನಗೆ ಬೂದಿ ರಾಶಿಯಂತೆ ಕಂಡಿರಬೇಕು. ನಮ್ಮಕ್ಕ ಈಗಲೂ ಆ ಹಾಡನ್ನು ಹಾಡಬಲ್ಲರು. ಆದರೆ ರೇಡಿಯೋದಲ್ಲಾಗಲೀ, ಧ್ವನಿಮುದ್ರಿಕೆಯಲ್ಲಾಗಲೀ ಅದನ್ನು ನಾನು ಇದು ವರೆಗೂ ಕೇಳಿದ್ದಿಲ್ಲ. ಬಹುಶ: ಇನ್ನು ಕೇಳುವ ಸಾಧ್ಯತೆಯೂ ಇಲ್ಲ. ಚಿತ್ರದ ಮೂಲ ಪ್ರತಿಯೇ ನಾಶವಾಗಿ ಹೋಗಿದೆಯೆಂದು ಕೇಳಿದ್ದೇನೆ. ಗ್ರಾಮೋಫೋನ್ ಇಟ್ಟುಕೊಂಡಿದ್ದವರ ಮನೆಯ ಅಟ್ಟದಲ್ಲೋ, ಹಳೆ ಕಾಲದ ಮೈಕ್ ಸೆಟ್ಟಿನವರ ಗೋದಾಮಿನಲ್ಲೋ ಈ ಹಾಡಿನ ಸವೆದು ಹೋದ ಗಾನ ತಟ್ಟೆ ಇರಲೂಬಹುದು. ಆದರೆ ಆಗಾಗ ರೇಡಿಯೊ, ಟಿ.ವಿ.ಗಳಲ್ಲಿ ಪ್ರಸಾರವಾಗುವ ಇದರ ಮೂಲವಾದ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ, ಆಯೇಗಾ ಆನೇವಾಲಾ ಹಾಡನ್ನು ಕೇಳಿದಾಗಲೆಲ್ಲ ಆ ದಿನಗಳ ಮಸುಕಾದ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಮುಂದಿನ ದಿನಗಳಲ್ಲಿ ಅದೆಷ್ಟೋ ಹಾಡುಗಳು ಮನಸ್ಸನ್ನು ಪ್ರವೇಶಿಸಿವೆ, ನೆಲೆ ನಿಂತಿವೆ, ಕ್ಯಾಸೆಟ್, ಸಿ.ಡಿ.ಗಳ ರೂಪದಲ್ಲಿ ಕಪಾಟು ಸೇರಿವೆ. ಆದರೆ ಇಲ್ಲದ ಈ ಹಾಡಿನ ಬಗ್ಗೆ ತುಡಿತ ಕಮ್ಮಿಯಾಗಿಲ್ಲ.
----
----
ಒಂದು ದಿನ ಅಂತರ್ಜಾಲದಲ್ಲಿ ಹಳೆಯ ಚಂದಮಾಮಗಳನ್ನು ಜಾಲಾಡುತ್ತಿರುವಾಗ 1952 ಜೂನ್ ಸಂಚಿಕೆಯ ಜಾಹೀರಾತೊಂದರಲ್ಲಿ ಜಗನ್ಮೋಹಿನಿ ಚಿತ್ರದ ಎಲ್ಲ ಹಾಡುಗಳ ಪಟ್ಟಿಯೂ ಕಣ್ಣಿಗೆ ಬಿತ್ತು. ಅದರ ಪರಿಣಾಮವಾಗಿ ಈ ಹಾಡನ್ನು ಯಾವ ರೂಪದಲ್ಲಾದರೂ ಸಂಪಾದಿಸಲೇ ಬೇಕೆಂಬ ಇಚ್ಛೆ ಉತ್ಕಟವಾಯಿತು.

ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ
ಎಂದೋ
ಎಂದೋ
ನೀ ಎನ್ನ ಪ್ರಾಣ ಜ್ಯೋತಿ
ನಿನಗಾಗಿ ಎನ್ನ ಪ್ರೀತಿ
ನಾ ನಿನ್ನ ಕಾದು ಕುಳಿತೆ
ನೀ ಏಕೆ ಎನ್ನ ಮರೆತೆ
ಇರುಳೆಲ್ಲ ನಿನ್ನ ಸ್ವಪ್ನ
ಹಗಲೆಲ್ಲ ನಿನ್ನ ಧ್ಯಾನ
ಹೀಗಾಯ್ತು ಎನ್ನ ಬವಣೆ
ನಾ ಬೇರೆ ದಾರಿ ಕಾಣೆ
ವಿರಹಾಗ್ನಿಯಿಂದ ಉರಿದು
ಕಣ್ಣೀರ ಕೋಡಿ ಹರಿದು
ನೀ ಎನ್ನ ಸೇರದಾದೆ
ಈ ರೂಪ ಕಳೆಯದಾದೆ
ವಿರಹಾಗ್ನಿಯಿಂದ ಉರಿದು
ಕಣ್ಣೀರ ಕೋಡಿ ಹರಿದು
ನೀ ಎನ್ನ ಸೇರದಾದೆ
ಈ ರೂಪ ಕಳೆಯದಾದೆ
ಜಗನ್ಮೋಹಿನಿ ಹಾಡುಗಳ ಜಾಹೀರಾತಿನಲ್ಲಿರುವ 6ನೇ ಹಾಡು ಕರೆಯುವೆ ನಿನ್ನ ಕಣ್ಮಣಿ ನಾನೇ ಇದು ಪತಂಗಾ ಚಿತ್ರದ ಓ ದಿಲ್ ವಾಲೊ ದಿಲ್ ಕಾ ಲಗಾನಾ ಧಾಟಿಯನ್ನು ಹೊಂದಿದ್ದು ಇದೇ ಧಾಟಿಯಲ್ಲಿ ಮುಂಡಾಜೆಯ ಪ್ರಸಿದ್ಧ ಶಿಶು ಕವಿ ರಾಮಚಂದ್ರ ಭಟ್ಟರು ಕರೆವೆನು ನಿನ್ನ ಕಣ್ಮಣಿಯೆನ್ನ ಕಾಡಿಗೆ ಕಣ್ಣಿನ ಓ ನವಿಲೇ ಕವಿತೆಯನ್ನು ರಚಿಸಿದ್ದರು. ಇದನ್ನು ಒಳಗೊಂಡಿದ್ದ ತಮ್ಮನ ಕವಿತೆಗಳು ಪುಸ್ತಕದಲ್ಲಿ ಈ ಧಾಟಿಯ ಉಲ್ಲೇಖವೂ ಇತ್ತು.
10ನೇ ಹಾಡು ಓ ವಸಂತ ಮಾಸ ಓಡಿ ಬಂದಿದೆ ಇದು ಬರಸಾತ್ ಚಿತ್ರದ ಓ ಮುಝೆ ಕಿಸೀ ಸೆ ಪ್ಯಾರ್ ಹೊ ಗಯಾ ಧಾಟಿಯನ್ನು ಹೊಂದಿದೆ. ಇದನ್ನು ಶಾಲಾ ವಾರ್ಷಿಕೋತ್ಸವಗಳಲ್ಲಿ ಟಮ್ಕಿ, ಲೇಜಿಮ್, ಕೋಲಾಟ ಇತ್ಯಾದಿಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದುದು ಅನೇಕರಿಗೆ ನೆನಪಿರಬಹುದು.
10ನೇ ಹಾಡು ಓ ವಸಂತ ಮಾಸ ಓಡಿ ಬಂದಿದೆ ಇದು ಬರಸಾತ್ ಚಿತ್ರದ ಓ ಮುಝೆ ಕಿಸೀ ಸೆ ಪ್ಯಾರ್ ಹೊ ಗಯಾ ಧಾಟಿಯನ್ನು ಹೊಂದಿದೆ. ಇದನ್ನು ಶಾಲಾ ವಾರ್ಷಿಕೋತ್ಸವಗಳಲ್ಲಿ ಟಮ್ಕಿ, ಲೇಜಿಮ್, ಕೋಲಾಟ ಇತ್ಯಾದಿಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದುದು ಅನೇಕರಿಗೆ ನೆನಪಿರಬಹುದು.
Really Ambakka is great. Capacity to remember is excellent!By listening the song only once (unlike us listening thousand times and doing nothing!)she re-sang the song after half century! Hats off to her.
ReplyDeletePadmanabh BK
Both the song and the sequence as to how you found it bring many nostalgic memories. It was nice to hear Amba Mavchi's voice and her ability to remember full wording by listening only once is amazing.
ReplyDeleteListening to her in 'cosy' manner ( whilst in cradle ) must have influenced your musical talent and tremendous knowledge about film music world.
Will await similar posts to this blog, it makes very enjoyable experience ( to read / to listen or to view )
Narahari Joshi
Very very sweet...
ReplyDelete