Sunday 13 November 2022

ಕಣ್ಣ ನೋಟದಲ್ಲೇ ಜೀವನ ಪ್ರಮಾಣ



ಪೆನ್ಶನ್ ಪಡೆಯುವವರು ವರ್ಷಕ್ಕೊಮ್ಮೆ ಜೀವನ ಪ್ರಮಾಣ ಪತ್ರ (Life Certificate) ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಪಿಂಚಣಿದಾರರು ಒಂದೋ ಆಯಾ ಸಂಸ್ಥೆಗೆ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಇಲ್ಲವಾದರೆ ಪೋಸ್ಟ್ ಆಫೀಸ್ ಅಥವಾ ಸೈಬರ್ ಸೆಂಟರ್‌ಗಳಿಗೆ ಹೋಗಿ electronic ಮಾಧ್ಯಮದ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಒಂದಷ್ಟು ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ತುಂಬಾ ವಯಸ್ಸಾದವರು ಇದ್ದರೆ ಹೊರಗೆ ಹೋಗುವುದೂ ತ್ರಾಸದಾಯಕವೇ.

ಈಗ ಇವಾವುದರ ಅಗತ್ಯವೂ ಇಲ್ಲದೆ android phoneನಲ್ಲಿ ಮನೆಯಿಂದಲೇ ಒಂದು ಪೈಸೆ ಖರ್ಚಿಲ್ಲದೆ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದು.

ಇದಕ್ಕೆ ಎರಡು appಗಳು ಬೇಕಾಗುತ್ತವೆ.

1. AadharFaceRd
ಇದನ್ನು google play storeನಿಂದ ಡೌನ್ ಲೋಡ್ ಮಾಡಿ install ಮಾಡಿಕೊಳ್ಳಬೇಕು. ಇದು ಹಿನ್ನೆಲೆಯಲ್ಲಿ ಕೆಲಸ ಮಾಡುವ app. ಇದರ ಐಕಾನ್ desktop ಮೇಲೆ ಇರುವುದಿಲ್ಲ.
2. Jeevan Pramaan 3.6.3 Face App.
ಇದು google play storeನಲ್ಲಿ ಸಿಗುವುದಿಲ್ಲ.

ಇದನ್ನು
https://jeevanpramaan.gov.in/package/download

ತಾಣದ ಮೂಲಕ ಪಡೆಯಬೇಕಾಗುತ್ತದೆ. ಈ ತಾಣಕ್ಕೆ ಹೋಗಿ ನಾವು ಕೊಟ್ಟ email idಗೆ ಡೌನ್ ಲೋಡ್ ಲಿಂಕ್ ಬರುತ್ತದೆ. ಆ ಲಿಂಕ್ ಮೂಲಕ ಹೋಗಿ Jeevan Pramaan 3.6.3 Face App ಆಯ್ಕೆ ಮಾಡಬೇಕು. ಸಂಬಂಧಿಸಿದ APK ಫೈಲು ಡೌನ್ ಲೋಡ್ ಆಗುತ್ತದೆ. ಅದನ್ನು downloads ನಲ್ಲಿ ಹುಡುಕಿ ಕ್ಲಿಕ್ಕಿಸಿದರೆ app install ಆಗುತ್ತದೆ. ಬೇಕಿದ್ದ permissions ಕೊಡಬೇಕು.

ನಂತರ ಆ ಮೊಬೈಲ್ ಒಡೆಯ ಈ app ತೆರೆದು ತನ್ನನ್ನು ಆಪರೇಟರ್ ಎಂದು ದಾಖಲಿಸಿಕೊಳ್ಳಬೇಕು. ಇದಕ್ಕೆ ಆಧಾರ್ ನಂಬರ್, ಮೊಬೈಲ್ ನಂಬರ್ ಮತ್ತು email id ಬೇಕಾಗುತ್ತವೆ. OTP ಮೂಲಕ authentication ಆದ ಮೇಲೆ ಒಳ್ಳೆಯ ಬೆಳಕಿರುವಲ್ಲಿ ಮೊಬೈಲನ್ನು ಮುಖದ ಮುಂದೆ ಹಿಡಿದು ಕಣ್ಣಿನ iris capture ಮಾಡಬೇಕಾಗುತ್ತದೆ. ಮೊಬೈಲಲ್ಲಿ ಸರಿಯಾದ ಕೋನದಲ್ಲಿ ಮುಖದ ಬಿಂಬ ಮೂಡಿದೊಡನೆ Blink ಎಂಬ ಸೂಚನೆ ಕಾಣಿಸುತ್ತದೆ. ಕೆಲವು ಸಲ ಕಣ್ಣನ್ನು ಮಿಟುಕಿಸಿದಾಗ iris capture ಆಗಿ operator ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಗಿಯುತ್ತದೆ. ಇದು one time process.

ನಂತರ ಆ ಮೊಬೈಲಿನಿಂದ ತನ್ನದೇ ಅಥವಾ ಬೇರೆ ಎಷ್ಟು ಮಂದಿ ಪಿಂಚಣಿದಾರರ ಜೀವನ ಪ್ರಮಾಣ ಪತ್ರವನ್ನೂ ಪಡೆಯಬಹುದು. screen ಮೇಲೆ ಕಾಣಿಸುವ ಸೂಚನೆಗಳನ್ನು ಅನುಸರಿಸುತ್ತಾ ಹೋದರಾಯಿತು. ಪೆನ್ಶನ್ ಪಡೆಯುವವರ ಆಧಾರ್, ಮೊಬೈಲ್ ನಂಬರ್, PensionPaymentOrder ಮತ್ತು ಬ್ಯಾಂಕ್ ವಿವರಗಳು ಬೇಕಾಗುತ್ತವೆ. Drop Down Menuವಿನಲ್ಲಿ ಸರಿಯಾದುದನ್ನು ಆಯ್ಕೆ ಮಾಡುವುದು ಬಲು ಮುಖ್ಯ. 

ಕರ್ನಾಟದಲ್ಲಿ SAMPANN ಮೂಲಕ ಪಿಂಚಣಿ ಪಡೆಯುವ ಬಿ.ಎಸ್.ಎನ್.ಎಲ್ ನಿವೃತ್ತರು ಈ ಕೆಳಗಿನ ಕ್ರಮ ಅನುಸರಿಸಬೇಕು.
Full Name as in Aadhar : ಇಲ್ಲಿ ಆಧಾರ್‌ನಲ್ಲಿ ಇದ್ದಂತೆ ಹೆಸರು ಟೈಪ್ ಮಾಡಬೇಕು.
Type of Pension : Service ಆಯ್ಕೆ ಮಾಡಬೇಕು.
Sanctioning Authority :  Telecom ಆಯ್ಕೆ ಮಾಡಬೇಕು
Disbursing Agency : SAMPANN ಆಯ್ಕೆ ಮಾಡಬೇಕು.
Agency :  CCA Karnataka ಆಯ್ಕೆ ಮಾಡಬೇಕು.
PPO Number : SAMPANN ಒದಗಿಸಿದ PPO ನಂಬರ್ ಟೈಪ್ ಮಾಡಬೇಕು.
Account Number(pension) : ಪೆನ್ಶನ್ ಜಮೆ ಆಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ನಂಬರ್ ಟೈಪ್ ಮಾಡಬೇಕು.

ಬೇರೆ ಸಂಸ್ಥೆಗಳಿಂದ ಪಿಂಚಣಿ ಪಡೆಯುವವರು  ಅದಕ್ಕೆ ಸೂಕ್ತವಾದ ಆಯ್ಕೆಗಳನ್ನು ಮಾಡಬೇಕು.  

Re Employed ಮತ್ತು Re Marriage ಗಳ ಎದುರು No ಆಯ್ಕೆಯಾಗಿರುತ್ತದೆ.  ಬದಲಾವಣೆ ಅಗತ್ಯವಿಲ್ಲದಿದ್ದರೆ ಅದನ್ನು ಹಾಗೆಯೇ ಬಿಡಬೇಕು.

ನಂತರ  ಅಲ್ಲಿರುವ ಎರಡು check boxಗಳನ್ನು ಟಿಕ್ ಮಾಡಿ Submit ಒತ್ತಬೇಕು. Confirm ಸ್ಕ್ರೀನಿನಲ್ಲಿ Yes ಒತ್ತಬೇಕು.

ಆಗ ನಾವು ತುಂಬಿದ ಮಾಹಿತಿಗಳೆಲ್ಲ ಮಾಯವಾದಂತೆ ಭ್ರಮೆ ಮೂಡಿಸುವ ಸ್ಕ್ರೀನ್ ಕಾಣಿಸುತ್ತದೆ. ಇದು ಬೇಕಿದ್ದರೆ ಇನ್ನೊಬ್ಬರ ಮಾಹಿತಿ ತುಂಬಲು ಮಾಡಿರುವ ವ್ಯವಸ್ಥೆ. ಅಲ್ಲಿ Cancel ಒತ್ತಬೇಕು.

Proceed to biomatricauthentication .. ಎಂಬ   Alert  ಕಾಣಿಸುತ್ತದೆ.  ಅಲ್ಲಿ Yes ಒತ್ತಬೇಕು.
ಮುಂದೆ ಕಾಣುವ Confirm ಸ್ಕ್ರೀನಿನಲ್ಲಿ check box ಟಿಕ್ ಮಾಡಿ SCAN ಒತ್ತಬೇಕು.
Do you want to scan face ಎಂದು ಕೇಳಿದಾಗ YES ಒತ್ತಬೇಕು.
ಆಗ ಮೊಬೈಲ್ ಕ್ಯಾಮರಾ selfie modeನಲ್ಲಿ ತೆರೆದುಕೊಳ್ಳುತ್ತದೆ. ಬೇರೆಯವರ Iris capture  ಮಾಡುವುದಾದರೆ back cameraಗೆ ಬದಲಾಯಿಸುವ ಅನುಕೂಲವೂ ಇದೆ.  

ನಂತರ ಒಳ್ಳೆಯ ಬೆಳಕಿರುವಲ್ಲಿ ಪಿಂಚಣಿದಾರನ ಮುಖದೆದುರು ಮೊಬೈಲ್ ಹಿಡಿದು ಆಪರೇಟರ್ ರಿಜಿಸ್ಟ್ರೇಶನ್ ಸಮಯದಲ್ಲಿ ಮಾಡಿದಂತೆ iris capture ಪ್ರಕ್ರಿಯೆ ಮುಗಿಸಿದರೆ Jeevan Pramaan Id ಕಾಣಿಸುತ್ತದೆ. ಪಿಂಚಣಿದಾರನ ಮೊಬೈಲಿಗೆ ಆ ಕುರಿತು ಮೆಸೇಜ್ ಕೂಡ ಬರುತ್ತದೆ. ಆ id ಒದಗಿಸಿ Jeevanpramaan ತಾಣದಿಂದ Life Certificate ಡೌನ್ ಲೋಡ್ ಮಾಡಿಕೊಳ್ಳಬಹುದು. 

ಒಮ್ಮೆ ತುಂಬಿದ ಪಿಂಚಣಿದಾರನ ಮಾಹಿತಿಗಳು ಸೇವ್ ಆಗಿ ಮುಂದಿನ ಸಲ ಲಾಗಿನ್ ಆಗುವಾಗ ಅವೇ ಕಾಣಿಸುತ್ತವೆ. ಅಗತ್ಯ ಇದ್ದರೆ ಮಾತ್ರ ಬದಲಾವಣೆ ಮಾಡಿದರಾಯಿತು.

ತಾವೇ ಸ್ವತಃ ಇದನ್ನೆಲ್ಲ ಮಾಡಲು ಕಷ್ಟ ಅನಿಸುವವರು ಮನೆಯಲ್ಲಿರುವ ಅಥವಾ ಅಕ್ಕಪಕ್ಕದ ಎಳೆಯರ ಸಹಾಯ ಪಡೆಯಬಹುದು. ಮೊಬೈಲ್ ಬಳಕೆಯಲ್ಲಿ ದಕ್ಷರಾಗಿರುವವರು ತಮ್ಮ ಜೀವನ್ ಪ್ರಮಾಣ್ ಮಾಡಿಕೊಳ್ಳುವುದರ ಜೊತೆಗೆ ಅಕ್ಕ ಪಕ್ಕದಲ್ಲಿರಬಹುದಾದ ಪಿಂಚಣಿದಾರ ಹಿರಿಯರಿಗೂ ಮಾಡಿ ಕೊಟ್ಟು ಅವರ ಹಣ, ಸಮಯ ಉಳಿಯುವಂತೆ ಮಾಡಬಹುದು.

ಗಮನಿಸಿ : ಈ appಗಳನ್ನು Androidನಲ್ಲಿ ಮಾತ್ರ ಉಪಯೋಗಿಸಬಹುದು. iphone ಅಥವಾ windows phoneಗಳಲ್ಲಿ ಅಲ್ಲ.

ಇನ್ನೊಂದು ಮುಖ್ಯ ವಿಚಾರವೂ ಇದೆ. ಈ app ಆಧಾರ್ ಸಂಖ್ಯೆ, ಆಧಾರ್ ಕಾರ್ಡಲ್ಲಿ ದಾಖಲಾಗಿರುವ ಹೆಸರು ಮತ್ತು OTPಗಳನ್ನು ಮಾತ್ರ ಪರಿಶೀಲಿಸುತ್ತದೆ. Drop down menuವಿನಿಂದ ಸರಿಯಾದ ಇಲಾಖೆ, ಸಂಸ್ಥೆಯನ್ನು ಆಯ್ದುಕೊಳ್ಳುವುದು ನಮ್ಮದೇ ಜವಾಬ್ದಾರಿ. ಆಯ್ಕೆ ತಪ್ಪಾದರೂ ಜೀವನ ಪ್ರಮಾಣ ಪತ್ರ generate ಆಗುತ್ತದೆ. ಆದರೆ ಸಿಗಬೇಕಾದ ಸಂಸ್ಥೆಗೆ ಮಾಹಿತಿ ಸಿಗುವುದಿಲ್ಲ. Download ಮಾಡಿದ ಜೀವನ ಪ್ರಮಾಣ ಪತ್ರದ ಕೆಳಭಾಗದಲ್ಲಿ ಅದು ಯಾರಿಗೆ ಹೋಗಿದೆ ಎಂದು ಕಾಣಿಸುತ್ತದೆ. ತಪ್ಪಾಗಿದೆ ಎಂದು ಕಂಡರೆ ಸರಿಯಾದ ಮಾಹಿತಿಯೊಡನೆ ಇನ್ನೊಮ್ಮೆ generate ಮಾಡಬಹುದು.

ಸಂಬಂಧಿತ ಸಂಸ್ಥೆಯು ಈ ಮಾಹಿತಿಯನ್ನು ಪಡೆದು ಜೀವನ ಪ್ರಮಾಣ ಪತ್ರವನ್ನು ಅಂಗೀಕರಿಸಿದರೆ ಈ ಸಾಲು ... has been successfully accepted by .... ಎಂದು, ಅಂಗೀಕರಿಸದಿದ್ದರೆ  ... has not been successfully accepted by .... ಎಂದು   ಬದಲಾಗುತ್ತದೆ. ಈ ರೀತಿ ಬದಲಾಗುವ ವರೆಗೆ ಆಗಾಗ ಜೀವನ ಪ್ರಮಾಣ ಪತ್ರವನ್ನು download ಮಾಡುತ್ತಿದ್ದರೆ ಒಳ್ಳೆಯದು. ಪಿಂಚಣಿ ಪಾವತಿಸುವ ಸಂಸ್ಥೆಯನ್ನು ಹೊಂದಿಕೊಂಡು accept ಆಗಲು ತಗಲುವ ಅವಧಿ ಕೆಲವು ದಿನಗಳೂ ಇರಬಹುದು, ಕೆಲವು ವಾರಗಳೂ ಇರಬಹುದು. ಸ್ವೀಕೃತವಾಗಿರುವ ಅಥವಾ ಆಗದಿರುವ ಬಗ್ಗೆ ಕೆಲವು ಸಂಸ್ಥೆಗಳು ಪಿಂಚಣಿದಾರರಿಗೆ ಮೆಸೇಜ್ ಕಳಿಸುತ್ತವೆ.  ಕೆಲವು ಸಂಸ್ಥೆಗಳ websiteಗಳಲ್ಲಿ ಪಿಂಚಣಿದಾರರು ಸ್ವಯಂ ಲಾಗಿನ್ ಆಗಿ status ಖಚಿತಪಡಿಸಿಕೊಳ್ಳುವ ಅನುಕೂಲವೂ ಇರುತ್ತದೆ. 

ಹೊರದೇಶಗಳಿಂದ ಈ ಸೌಲಭ್ಯ ಬಳಸಲು ಅವಕಾಶ ಇಲ್ಲ ಎಂದು UIDAI ಸ್ಪಷ್ಟಪಡಿಸಿದೆ.