Monday, 22 August 2011

ತುಳು ಚಿತ್ರಗೀತೆಗಳ ಸಾರ ಸಂಗ್ರಹ


" ಇದ್ ಇಲಂಗ ವಾನುಲಿ ವರ್ತಗ ಒಲಿಪರಪ್ಪು. ಇಪ್ಪುಡುದು ನೇರಂ ಎರಂಡ್ ಮಣಿ.  ಎರಂಡ್ ಮುಪ್ಪದ್ ವರೈ ಕನ್ನಡ ಪಾಡಲ್.  ಮೊದಲಾವದಾಕ ದಾರೆದ ಬುಡೆದಿ ಎಂದ ಪಡತ್ತಿಲ್ ಪಿ.ಬಿ.ಶ್ರೀನಿವಾಸ್ ಪಾಡಿಯ ಪಾಟ್ ".  ಮುಂದೆ  ಅಲೆ ಅಲೆಯಾಗಿ ತೇಲಿ ಬಂತು "ನಿಕ್ಕಾದೆ ಯಾನ್ ದುಂಬಿಯಾದ್ ಬರ್ಪೆ..." ಇದು 1972 ರ ಒಂದು ಮಧ್ಯಾಹ್ನ ರೇಡಿಯೊ ಸಿಲೋನ್ ನ  ಕನ್ನಡ ಕಾರ್ಯಕ್ರಮದಲ್ಲಿ  ತಮಿಳು ಉದ್ಘೋಷಣೆಯೊಂದಿಗೆ ಪ್ರಸಾರವಾದ ಮೊತ್ತ ಮೊದಲ ತುಳು ಚಿತ್ರಗೀತೆ.  ತುಳು ಸಿನೆಮಾ ತಯಾರಾಗುತ್ತಾ ಇದೆ, H M V ಯ H.M. ಮಹೇಶ್ ಪ್ರಯತ್ನದಿಂದ ರೇಡಿಯೊ ಸಿಲೋನ್ ನಲ್ಲಿ ಇದರ ಹಾಡುಗಳು ಬಿತ್ತರಗೊಳ್ಳಲಿವೆ ಎಂದು ಪೇಪರಿನಲ್ಲಿ ಓದಿ ಗೊತ್ತಿತ್ತು.  ಆದರೆ  ಹಾಡುಗಳು ಯಾವ ರೀತಿ ಇರಬಹುದೆಂಬ ಕಲ್ಪನೆ ಇರಲಿಲ್ಲ.  ಸಾಮಾನ್ಯವಾಗಿ ತುಳು ನಾಟಕಗಳಲ್ಲಿ ಅಳವಡಿಸಲಾಗುತ್ತಿದ್ದಂತೆ  ಹಿಂದಿ ಟ್ಯೂನ್ ಆಧಾರಿತ   ಹಾಡುಗಳು ಇರಬಹುದೆಂದು ಅಂದುಕೊಂಡಿದ್ದ ನಮಗೆ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ  ಪಿ.ಬಿ.ಎಸ್,  ಜಾನಕಿ ಮುಂತಾದವರ ಧ್ವನಿಯಲ್ಲಿ ತುಳು ಹಾಡುಗಳನ್ನು ಕೇಳಿದಾಗ ಥ್ರಿಲ್ ಎನಿಸಿತ್ತು.  ಮುಂದೆ ಬಿಡುಗಡೆಗೊಂಡ  ಇನ್ನೂ ಹಲವು ತುಳು ಚಿತ್ರಗಳ ಹಾಡುಗಳನ್ನು ಕೇಳಲು ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಸಮಾರಂಭಗಳಲ್ಲಿ ಅಳವಡಿಸುತ್ತಿದ್ದ ಧ್ವನಿ ವರ್ಧಕಗಳನ್ನು ಬಿಟ್ಟರೆ  ಬಹಳಷ್ಟು ವರ್ಷ ರೇಡಿಯೊ ಸಿಲೋನ್ ಒಂದೇ ಆಸರೆಯಾಗಿತ್ತು. ಮುಂದೆ ಮಂಗಳೂರು ಆಕಾಶವಾಣಿ ಜನ್ಮ ತಾಳಿದ ಮೇಲೆ ಹೆಚ್ಚು ಹೆಚ್ಚು ತುಳು ಗೀತೆಗಳು ಕೇಳಿಬರತೊಡಗಿದವಾದರೂ  ವರುಷಗಳು ಸಂದಂತೆ ರೇಡಿಯೊ ಸಿಲೋನ್ ಹಿನ್ನೆಲೆಗೆ ಸರಿಯುತ್ತಾ ಬಂತು, ಗಾನ ತಟ್ಟೆಗಳು ಅಟ್ಟ ಸೇರಿದವು, ತುಳು ಹಾಡುಗಳು ಮತ್ತೆ ಅಪರೂಪವಾಗತೊಡಗಿದವು.  ಈಗಲೂ "ಎಕ್ಕ ಸಕ", "ಮೋಕೆದ ಸಿಂಗಾರಿ" ಮುಂತಾದ ಹಾಡುಗಳು  ರೇಡಿಯೋದಲ್ಲೋ, ಆರ್ಕೆಷ್ಟ್ರಾಗಳಲ್ಲೊ ಅಥವಾ remix ರೂಪದಲ್ಲೊ ಆಗೊಮ್ಮೆ  ಈಗೊಮ್ಮೆ ಕಿವಿಗೆ ಬೀಳುವುದುಂಟು.  ಆದರೆ ಬಹುತೇಕ original ಹಾಡುಗಳು ಜನಮಾನಸದಿಂದ ಮರೆಯಾಗಿವೆ.  ಈಗ ವಿಶೇಷ ಪ್ರಯತ್ನದಿಂದ 1970-80 ರ ದಶಕದ ಸುಮಾರು 12 ಚಿತ್ರಗಳ ಹಾಡುಗಳ ಸಾರವನ್ನು  ವಿಶಿಷ್ಟ ರೂಪದಲ್ಲಿ ಪ್ರಸ್ತುತ ಪಡಿಸಿದ್ದೇನೆ.  ಆಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿ,  ಈ ಪ್ರಯತ್ನ ನಿಮಗೆ ಹೇಗನ್ನಿಸಿತು ಎಂದು ತಿಳಿಸಿ.



4 comments:

  1. Dear sir,
    Where can I get the full version of the Tulu film songs?
    Vinod Phadke
    Tiptur

    ReplyDelete
  2. ಅತ್ಯುತ್ತಮ ಕೆಲಸ ಮಾಡಿದ್ದೀರಿ. ತುಳುವಿನಲ್ಲಿ ಇಷ್ಟೊಂದು ಸುಂದರ ಹಾಡುಗಳಿವೆ ಎಂದು ಗೊತ್ತೇ ಇರಲಿಲ್ಲ. ಸದ್ಯದ ಮಾರುಕಟ್ಟೆಯಲ್ಲಿ ಇದೇ ಹಾಡುಗಳ ರಿಮಿಕ್ಸ್‌, ರಿಸಿಂಗಿಂಗ್‌ ಕೇಳಿ ಬೇಜಾರಾಗಿತ್ತು. ಹಾಡು ಕೇಳಿ ಖುಷಿ ಆಯಿತು. ಆ ಹಾಡುಗಳು ಪೂರ್ಣ ಪ್ರಮಾಣದಲ್ಲಿ ಇದ್ದರೆ ನೀಡಬಹುದೇ? ತುಳು ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ನೀಡಿ
    –ಶರತ್‌ ಹೆಗ್ಡೆ
    9964677010

    ReplyDelete
  3. Great Collection, Kakatkarji. In the absence of original, we were reconciling to the remix version. Listening the jhalak (Sara) has led me to the itching to hear at least 2 or 3 of the original songs....Ekka Sakka, Ekka Sakka (In Youtube, there is a jarred version though), Pakkila Mooji, Mokeda Singari....

    ReplyDelete
  4. ಅಮೂಲ್ಯವಾದ ಸಂಗ್ರಹ, ಕೇಳಿ ಬಹಳ ಬಹಳ ಖುಷಿಯಾಯ್ತು , ಧನ್ಯವಾದಗಳು !

    ReplyDelete

Your valuable comments/suggestions are welcome