ಒಂದೇ ಹಾಡನ್ನು ಪುರುಷ ಮತ್ತು ಸ್ತ್ರೀ ಕಂಠದಲ್ಲಿ ಬೇರೆ ಬೇರೆಯಾಗಿ ಹಾಡಿಸುವ ಪರಿಪಾಠ ಹಿಂದಿ ಚಿತ್ರರಂಗದಲ್ಲಿ 50ರ ದಶಕದ ಆದಿಭಾಗದಲ್ಲೇ ಆರಂಭವಾಗಿತ್ತು. ಇಂತಹ ಮೊತ್ತ ಮೊದಲ ಜನಪ್ರಿಯ ಅವಳಿ ಹಾಡು, ನಿಖರವಾಗಿ ಹೇಳಬೇಕಾದರೆ ತ್ರಿವಳಿ ಹಾಡನ್ನು ಶಂಕರ್ ಜೈಕಿಶನ್ ಅವರು 1952ರ ದಾಗ್ ಚಿತ್ರದಲ್ಲಿ ಪರಿಚಯಿಸಿದ್ದರು. ಏ ಮೇರೆ ದಿಲ್ ಕಹಿಂ ಔರ್ ಚಲ್ ಹಾಡಿನ ಎರಡು ಅವತರಣಿಕೆಗಳನ್ನು ತಲತ್ ಮಹಮೂದ್ ಮತ್ತು ಒಂದನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಇದೇ ಜಾಡಿನಲ್ಲಿ ಮುಂದೆ ಸಿ.ರಾಮಚಂದ್ರ ಅವರ ಧೀರೆ ಸೆ ಆಜಾರಿ ಅಖಿಯನ್ ಮೆಂ, ಈನಾ ಮೀನಾ ಡೀಕಾ, ಬರ್ಮನ್ ದಾದಾ ಅವರ ನ ಯೆ ಚಾಂದ್ ಹೋಗ, ಜಾಯೆ ತೊ ಜಾಯೆ ಕಹಾಂ,ಜೀವನ್ ಕೆ ಸಫರ್ ಮೆ ರಾಹೀ, ನ ತುಮ್ ಹಮೆ ಜಾನೋ ಮುಂತಾದವು ಅವಳಿ ಹಾಡುಗಳಾಗಿ ಬಂದವು. ಆದರೆ ಇವು ತದ್ರೂಪಿ ಆಗಿರಲಿಲ್ಲ. ಧಾಟಿ, ಸಂಗೀತದ arrangement ಇತ್ಯಾದಿ ಕೊಂಚ ಭಿನ್ನವಾಗಿರುತ್ತಿತ್ತು. ಕೆಲವು ಸಲ ಸಾಹಿತ್ಯವೂ ಬೇರೆಯೇ ಆಗಿರುತ್ತಿತ್ತು.
ತದ್ರೂಪಿ ಅವಳಿಗಳು
1961ರ ಜಂಗ್ಲಿಯಲ್ಲಿ ರಫಿ ಹಾಡಿದ್ದ ಎಹೆಸಾನ್ ತೇರಾ ಹೋಗಾ ಮುಝ್ ಪರ್ ಹಾಡಿನ ಹಿನ್ನೆಲೆ ಸಂಗಿತದ trackನ್ನು ಯಥಾವತ್ ಬಳಸಿ ಲತಾ ಮಂಗೇಶ್ಕರ್ ಅವರಿಂದ ಅದೇ ಸಾಹಿತ್ಯವನ್ನು ಅದೇ ಶ್ರುತಿಯಲ್ಲಿ ಹಾಡಿಸುವ ಮೂಲಕ ಶಂಕರ್ ಜೈಕಿಶನ್ ಹೊಸತೊಂದು ಪ್ರಯೋಗ ಮಾಡಿದರು. ಮೊದಲು ಈ ಶಮ್ಮಿ ಕಪೂರ್ ಹಾಡನ್ನು ಸಾಯಿರಾಬಾನುವಿನಿಂದಲೂ ಹಾಡಿಸುವ ಆಲೋಚನೆ ಇರಲಿಲ್ಲವಂತೆ. ರಫಿಯ ಹಾಡಿಗೇ ಸಾಯಿರಾ ಅವರಿಂದ lip sync ಮಾಡಿಸಿ ಚಿತ್ರೀಕರಣ ಮಾಡಿ ನೋಡಿದಾಗ ಎಲ್ಲರಿಗೂ ಮೆಚ್ಚಿಕೆಯಾಯಿತಂತೆ. ಮುಂದೆ ಸಾಯಿರಾ ಅಭಿನಯವನ್ನು ತೆರೆಯ ಮೇಲೆ ನೋಡುತ್ತಾ ರಫಿ track ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ಇದನ್ನು ಹಾಡಿದರಂತೆ. ಇದರ ಯಶಸ್ಸಿನಿಂದ ಉತ್ತೇಜಿತರಾದ ಶಂಕರ್ ಜೈಕಿಶನ್ ಜಬ್ ಪ್ಯಾರ್ ಕಿಸೀಸೆ ಹೋತಾ ಹೈಯಲ್ಲಿ ಜಿಯಾ ಓ ಜಿಯಾ ಒ ಕುಛ್ ಬೋಲ್ ದೊ, ಲವ್ ಇನ್ ಟೋಕಿಯೋದಲ್ಲಿ ಓ ಮೇರೆ ಶಾಹೆಖುಬಾ ಮುಂತಾದ ತದ್ರೂಪಿ ಅವಳಿಗಳನ್ನು ಸೃಷ್ಟಿಸಿದರು. 1964 ರಿಂದ 1966ರ ಮಧ್ಯದಲ್ಲಿ ಕೆಲ ಕಾಲ ರಫಿ ಮತ್ತು ಲತಾ ಜೊತೆಗೆ ಹಾಡುತ್ತಿರಲಿಲ್ಲ. ಆಗ ರೆಡಿಯೋ ಸಿಲೋನಿನವರು ಓ ಮೇರೆ ಶಾಹೆಖುಬಾ ಹಾಡಿನ ಎರಡೂ ಆವೃತ್ತಿಗಳನ್ನು ಯುಗಳಗೀತೆಯ ರೀತಿ ಸಮ್ಮಿಳಿತಗೊಳಿಸಿ ಕೇಳುಗರನ್ನು ಖುಶಿಪಡಿಸುತ್ತಿದ್ದುದುಂಟು. ಇತ್ತೀಚೆಗೆ ನಾನೂ ಈ ಪ್ರಯೋಗ ಮಾಡಿ ಜಿಯಾ ಓ ಜಿಯಾ ಓ ಕುಛ್ ಬೋಲ್ ದೋ ಹಾಡಿನ ತದ್ರೂಪಿಗಳನ್ನು ಬಳಸಿ ಯುಗಳ ಗೀತೆ ತಯಾರಿಸಿದ್ದುಂಟು.
ಇತರ ಅವಳಿಗಳು
ತದ್ರೂಪಿ ಅಲ್ಲದಿದ್ದರೂ ಶಂಕರ್ ಜೈಕಿಶನ್ ಇನ್ನೂ ಬಹಳಷ್ಟು ಅವಳಿ ಗೀತೆಗಳನ್ನು ಸೃಷ್ಟಿಸಿದ್ದಾರೆ. ತುಮ್ ಕಮ್ ಸಿನ್ ಹೋ/ಮೈ ಕಮ್ ಸಿನ್ ಹೂಂ,ಅಜೀ ರೂಠ್ ಕರ್ ಅಬ್ / ಅಜೀ ಹಮ್ ಸೆ ಬಚ್ ಕರ್, ತುಮ್ ಮುಝೆ ಯೂಂ ಭುಲಾ ನ ಪಾವೋಗೆ, ಗರ್ ತುಮ್ ಭುಲಾ ನ ದೋಗೆ, ರಾತ್ ಔರ್ ದಿನ್ ದಿಯಾ ಜಲೇ, ಚಲೇ ಜಾ ಚಲೇಜಾ ಚಲೇಜಾ ಜಹಾಂ ಪ್ಯಾರ್ ಮಿಲೇ, ಜಿಂದಗೀ ಎಕ್ ಸಫರ್ ಹೈ ಸುಹಾನಾ ಕೆಲವು ಉದಾಹರಣೆಗಳು. ರಫಿ ಧ್ವನಿಯಲ್ಲೇ ಮೈ ಗಾವೂಂ ತುಮ್ ಸೋ ಜಾವೋ ಹಾಡಿನ ಎರಡು ಆವೃತ್ತಿಗಳಿದ್ದವು. ಇತರ ಸಂಗೀತ ನಿರ್ದೇಶಕರೂ ಈ ದಿಸೆಯಲ್ಲಿ ಹಿಂದುಳಿಯಲಿಲ್ಲ. ಲೌಟ್ ಕೆ ಆಜಾ ಮೇರೆ ಮೀತ್, ಹಮ್ ನೆ ತುಝ್ ಕೋ ಪ್ಯಾರ್ ಕಿಯಾ ಹೈ ಕಿತನಾ, ಮುಝ್ ಕೊ ಇಸ್ ತನಹಾಯಿ ಮೆಂ, ದಿಲ್ ಬೇಕರಾರ್ ಸಾ ಹೈ, ಅಕೇಲೆ ಹೈಂ ಚಲೇ ಆವೋ, ತ್ರಿವಳಿ ರೂಪದ ಪರದೇಸಿಯೋಂ ಸೆ ನ ಅಖಿಯಾ ಮಿಲಾನಾ, ಓ ಸಾಥೀರೇ ತೇರೆ ಬಿನಾ ಭೀ ಕ್ಯಾ ಜೀನಾ, ಮೇರೆ ಮೆಹಬೂಬ್ ತುಝೆ, ವಾದಿಯಾಂ ಮೇರಾ ದಾಮನ್, ರಫಿ-ಕಿಶೋರ್ ಕಂಠಗಳ ತುಮ್ ಬಿನ್ ಜಾವೂಂ ಕಹಾಂ, ಫೂಲೊಂಕಾ ತಾರೊಂಕಾ, ಮೇರೇ ನೈನಾ ಸಾವನ್ ಭಾದೊಂ, ಹಮೆ ತುಮ್ಸೆ ಪ್ಯಾರ್ ಕಿತ್ನಾ, ದಿಲ್ ಜೋ ನ ಕಹ ಸಕಾ, ಖಿಲ್ತೆ ಹೈಂ ಗುಲ್ ಯಹಾಂ, ತೇರಿ ಆಂಖೋ ಕೆ ಸಿವಾ ದುನಿಯಾ ಮೆ, ಗರೀಬೊಂ ಕೀ ಸುನೋ, ಅಜನಬೀ ತುಮ್ ಜಾನೇ ಪಹಚಾನೇ ಸೇ, ಸಾಜನ್ ಸಾಜನ್ ಪುಕಾರೂಂ, ಆಹಾ ಆಹಾ ಆ ಯೇ ಸುಹಾನಾ ಸಫರ್, ಒಂದೇ ಕಂಠದ ಎರಡು ರೂಪಗಳ ಆನೇ ಸೇ ಉಸ್ ಕೇ ಆಯೇ ಬಹಾರ್, ವಿಭಿನ್ನ ಯುಗಳ ಕಂಠಗಳ ಜಬ್ ಸೆ ಹಮ್ ತುಮ್ ಬಹಾರೋ ಮೆಂ, ಏಕ್ ದೋ ತೀನ್, ಬಹುತ್ ಪ್ಯಾರ್ ಕರತೆ ಹೈಂ, ತೇರೆ ಮೇರೆ ಬೀಚ್ ಮೆಂ, ದಿಲ್ ಹೈ ಕೆ ಮಾನತಾ ನಹೀಂ ಮುಂತಾದ ಜನಪ್ರಿಯ ಅವಳಿ ಹಾಡುಗಳು ಪುಂಖಾನುಪುಂಖವಾಗಿ ಬಂದವು. ರೇಡಿಯೋ ಸಿಲೋನಿನಲ್ಲಿ ಇಂತಹ ಹಾಡುಗಳಿಗೇ ಮೀಸಲಾದ ದೋ ಪಹಲೂ ದೋರಂಗ್ ದೋ ಗೀತ್ ಎಂಬ ಅಆಪ್ತಾಹಿಕ ಕಾರ್ಯಕ್ರಮವೊಂದಿತ್ತು.
ಕನ್ನಡದಲ್ಲಿ
ಕನ್ನಡದಲ್ಲಿ ಅವಳಿ ಹಾಡುಗಳ ಪರಂಪರೆ ಆರಂಭವಾದದ್ದು ಸ್ವಲ್ಪ ತಡವಾಗಿ ಅಂದರೆ 60ರ ದಶಕದ ಆದಿ ಭಾಗದಲ್ಲಿ. ನನಗೆ ತಿಳಿದಿರುವ ಪ್ರಕಾರ 1961ರಲ್ಲಿ ಬಂದ ಕಣ್ತೆರೆದು ನೋಡು ಚಿತ್ರಕ್ಕಾಗಿ ಒಮ್ಮೆ ಪಿ.ಬಿ.ಶ್ರೀನಿವಾಸ್ ಹಾಗೂ ಇನ್ನೊಮ್ಮೆ ಅವರ ಜೊತೆ ಬೆಂಗಳೂರು ಲತಾ ಹಾಡಿದ್ದ ಬಂಗಾರದೊಡವೆ ಬೇಕೆ ಇಂತಹ ಮೊದಲ ಗೀತೆ. ನಂತರ 1966ರಲ್ಲಿ ಬಂದ ಬದುಕುವ ದಾರಿ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಕಂಠಗಳಲ್ಲಿದ್ದ ಇಲ್ಲೂ ಇರುವೆ ಅಲ್ಲೂ ಇರುವೆ ಇಂತಹ ಎರಡನೇ ಗೀತೆಯಾಯಿತು. ಮುಂದೆ ಬರೆದೆ ನೀನು ನಿನ್ನ ಹೆಸರ, ಪಂಚಮ ವೇದ, ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ, ಒಲವೆ ಜೀವನ ಸಾಕ್ಷಾತ್ಕಾರ, ನಿನ್ನೊಲುಮೆ ನನಗಿರಲಿ ತಂದೆ, ತೂಗುವೆ ರಂಗನ, ನಾ ಅಮ್ಮ ಎಂದಾಗ ಏನೋ, ಈ ಲೋಕವೆಲ್ಲ ನೀನೆ ಇರುವ, ಯುಗಳ ಸ್ವರಗಳ ಅವಳಿ ಕಾಣದ ದೇವರು ಊರಿಗೆ ನೂರು, ತ್ರಿವಳಿ ರೂಪದ ನಂಬಿದೆ ನಿನ್ನ ನಾದ ದೇವತೆಯೇ ಮುಂತಾದವು ಬಂದವು. 70ರ ದಶಕದಲ್ಲೂ ನಿನ್ನ ನೀನು ಮರೆತರೇನು, ಬಿಸಿಲಾದರೇನು, ಆಸೆಯ ಭಾವ, ಆಕಾಶ ದೀಪವು ನೀನು, ಈ ಗುಲಾಬಿಯು ನಿನಗಾಗಿ, ಜೋ ಜೋ ಲಾಲಿ ನಾ ಹಾಡುವೆ, ಬಾನದಾರಿಯಲ್ಲಿ ಸೂರ್ಯ, ನೀ ಮೀಟಿದ ನೆನಪೆಲ್ಲವೂ, ರಾಮಾಚಾರಿ ಹಾಡುವಾ ಇತ್ಯಾದಿ ಜನಪ್ರಿಯ ಹಾಡುಗಳು ಸೇರ್ಪಡೆಗೊಂಡವು. ಇತ್ತೀಚಿನ ಅನಿಸುತಿದೆ ಯಾಕೋ ಇಂದು ವರೆಗೂ ಈ ಪರಿಪಾಠ ಮುಂದುವರಿಯುತ್ತಾ ಬಂದಿದೆ. ಕೆಲವು ಸಲ ಅವಳಿ-ಜವಳಿಗಳ ಪೈಕಿ ಅವಳಿ ಒಂದು ಚಿತ್ರದಲ್ಲಿದ್ದು ಜವಳಿ ಅನೇಕ ವರ್ಷಗಳ ನಂತರ ಬಂದ ಇನ್ನೊಂದು ಚಿತ್ರದಲ್ಲಿದ್ದದೂ ಇದೆ! ಮಂತ್ರಾಲಯ ಮಹಾತ್ಮೆಯಲ್ಲಿ ಪಿ.ಬಿ.ಎಸ್ ಧ್ವನಿಯಲ್ಲಿದ್ದ ಇಂದು ಎನಗೆ ಗೋವಿಂದ ಎರಡು ಕನಸು ಚಿತ್ರದಲ್ಲಿ ಜಾನಕಿ ಧ್ವನಿಯಲ್ಲಿ ಬಂದದ್ದು, ಕಿಟ್ಟು ಪುಟ್ಟು ಚಿತ್ರದಲ್ಲಿ ಜೇಸುದಾಸ್-ಜಾನಕಿ ಧ್ವನಿಯಲ್ಲಿದ್ದ ಕಾಲವನ್ನು ತಡೆಯೋರು ಹಾಡನ್ನು ಆಪ್ತಮಿತ್ರದಲ್ಲಿ ಗುರುಕಿರಣ್-ಶಂಕರ್ ಮಹಾದೇವನ್ ಹಾಡಿದ್ದು, ಗಂಧದ ಗುಡಿಯಲ್ಲಿ ಪಿ.ಬಿ.ಎಸ್ ಧ್ವನಿಯಲ್ಲಿದ್ದ ನಾವಾಡುವ ನುಡಿಯೇ ಅದೇ ಹೆಸರಿನ ಎರಡನೇ ಭಾಗದ ಚಿತ್ರದಲ್ಲಿ ರಾಜ್ ಕುಮಾರ್ ಸ್ವತಃ ಹಾಡಿದ್ದು ಇದಕ್ಕೆ ಕೆಲವು ಉದಾಹರಣೆಗಳು. ತುಳು ಚಿತ್ರಗಳಲ್ಲೂ ಅವಳಿ ಹಾಡುಗಳು ಬಂದಿವೆ. ನಮ್ಮ ಮಂಗಳೂರಿನವರೇ ಆದ ಅಶೋಕ್-ಚರಣ್ ಸಂಗೀತ ನೀಡಿದ ಬೊಳ್ಳಿದೋಟ ಚಿತ್ರದ ದಾನೇ ಪೊಣ್ಣೆ / ದಾನೆ ಪನ್ಲೆ ಸಾಹಿತ್ಯ ಬೇರೆ ಬೇರೆಯಾಗಿದ್ದರೂ ಉಳಿದಂತೆ ತದ್ರೂಪಿಯಾಗಿದ್ದು ಅವುಗಳನ್ನು ಸೇರಿಸಿ ನಾನು ತಯಾರಿಸಿದ ಯುಗಳ ಗೀತೆ youtubeನಲ್ಲಿ ಲಭ್ಯವಿದೆ.
ಹೋಲಿಕೆ
ಒಂದು ಹಾಡು ಪುರುಷ/ಸ್ತ್ರೀ ಕಂಠಗಳಲ್ಲಿ ಬೇರೆಬೇರೆಯಾಗಿ ಕೇಳಿಬಂದಾಗ ಯಾವುದು ಹೆಚ್ಚು ಆಕರ್ಷಕ ಎಂಬ ಜಿಜ್ಞಾಸೆ ಉಂಟಾಗುವುದು ಸಹಜ. ರಫಿ-ಲತಾ ಧ್ವನಿಯ ಅವಳಿ ಗೀತೆಗಳ ಪೈಕಿ ಅಜೀ ರೂಠ್ ಕರ್ / ಅಜೀ ಹಮ್ ಸೆ ಬಚ್ ಕರ್ ಹೊರತು ಪಡಿಸಿ ಎಲ್ಲದರಲ್ಲೂ ರಫಿ ಮೇಲುಗೈ ಸಾಧಿಸಿದ್ದಾರೆ ಎಂದು ನನ್ನ ಅನ್ನಿಸಿಕೆ. ಕನ್ನಡದಲ್ಲೂ ಪಂಚಮ ವೇದದಲ್ಲಿ ಜಾನಕಿ ಮಿಂಚಿದ್ದಾರೆ ಎಂಬುದನ್ನು ಬಿಟ್ಟರೆ ಉಳಿದಂತೆ ಪುರುಷ ಕಂಠಗಳದ್ದೇ ಪಾರಮ್ಯ ಎಂದು ಅನೇಕರ ಅಂಬೋಣ. ಏನಿದ್ದರೂ ಇದು ಅವರವರ ಅನಿಸಿಕೆಯೇ ಹೊರತು ಇದಮಿತ್ಥಂ ಎಂದು ಹೇಳುವ ಹಾಗಿಲ್ಲ.
ಪಂಚಮ ವೇದ
ಗೆಜ್ಜೆ ಪೂಜೆ ಚಿತ್ರದ ಈ ಹಾಡು ಜಾನಕಿ ಅವರಿಗಾಗಿಯೇ D Sharp ಏರು ಶ್ರುತಿಯಲ್ಲಿ ಸಂಯೋಜಿಸಲ್ಪಟ್ಟಿದ್ದು ಅವರ versionಗೆ ಹೆಚ್ಚು ಉಠಾವ್ ಸಿಗಲು ಕಾರಣವಾಗಿರಬಹುದು. ಆ ಮೇಲೆ ಅದನ್ನು ಪಿ.ಬಿ.ಎಸ್ ಅವರು C Sharp ತಗ್ಗು ಶ್ರುತಿಯಲ್ಲಿ ಹಾಡಿರುತ್ತಾರೆ. ಎರಡು ವರ್ಷನ್ ಒಂದೇ ಸಾಹಿತ್ಯ ಹೊಂದಿದ್ದರೂ ಸಂದರ್ಭಗಳ ಮೂಡ್ ಬೇರೆ ಬೇರೆಯಾಗಿದ್ದು ಅದಕ್ಕೆ ತಕ್ಕಂತೆ ಸಂಗೀತದ arrangement, ಹಾಡಿದ ಶೈಲಿ ಮತ್ತು ಪ್ರತಿ ಸಾಲಿನ ಸಂಗತಿಗಳು ಕೂಡ ವಿಭಿನ್ನವಾಗಿದೆ. ಹೀಗಾಗಿ ಈ ಹಾಡನ್ನು ಇತರರು ಹಾಡಲು/ನುಡಿಸಲು ಪ್ರಯತ್ನಿಸುವಾಗ ಆ ಶೈಲಿ ಈ ಶೈಲಿ ಬೆರೆತು ಕಲಸು ಮೇಲೋಗರವಾಗುವುದಿದೆ. ಸ್ವರಗಳನ್ನು ಗುರುತಿಸಬಲ್ಲ ಆಸಕ್ತರಿಗೆ ಅನುಕೂಲವಾಗಲೆಂದು ಎರಡರ ವ್ಯತ್ಯಾಸ ಸ್ಪಷ್ಟವಾಗುವಂತೆ ಪ್ರತೀ ಸಾಲಿನ ಸ್ವರ ಪ್ರಸ್ತಾರದೊಡನೆ ಎರಡು versionಗಳನ್ನೂ ಪ್ರತ್ಯೇಕವಾಗಿ ಪ್ರಸ್ತುತಪಡಿಸುವ ಪ್ರಯತ್ನವೊಂದನ್ನು ಇಲ್ಲಿ ಮಾಡಿದ್ದೇನೆ. ವಿಶೇಷವಾಗಿ ಗಮಕ/ಮುರ್ಕಿಗಳ ಸಂದರ್ಭದಲ್ಲಿ ಈ ಸ್ವರಗಳು indicative ಅಷ್ಟೇ ಹೊರತು ನೂರು ಶೇಕಡಾ ಸರಿಯಾಗಿವೆ ಎಂದು ಹೇಳಲಾಗದು. ಎರಡೂ versionಗಳ prelude/interludeಗಳು ಬಿಂಕದ ಸಿಂಗಾರಿಯಲ್ಲಿದಂತೆ ಹಾಡಿನ ಅವಿಭಾಜ್ಯ ಅಂಗಗಳೇನೂ ಅಲ್ಲದ್ದರಿಂದ ಇಲ್ಲಿ ಅವುಗಳಿಗೆ ಪ್ರಾಮುಖ್ಯ ಕೊಡಲಾಗಿಲ್ಲ. ಸ್ವರಲಿಪಿಯಲ್ಲಿ ಆಸಕ್ತಿಯಿಲ್ಲದವರು ಸಾಹಿತ್ಯ ಓದುತ್ತಾ ಎರಡೂ version ಆಲಿಸಿ ಆನಂದಿಸಬಹುದು. ವಿಜಯ ನಾರಸಿಂಹ ಅವರ ಸಾಹಿತ್ಯದಲ್ಲಿ ಎಲ್ಲೂ ಕ್ರಿಯಾಪದ ಇಲ್ಲದಿರುವುದನ್ನು ಗಮನಿಸಿ.
****
ಪಂಚಮ ವೇದ ಪ್ರೇಮದ ನಾದ
ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಜೀವಜೀವದ ಸ್ವರಸಂಚಾರ
ಅಮೃತಚೇತನ ರಸಧಾರ
ರಾಧಾ ಮಾಧವ ವೇಣುವಿಹಾರ
ಗೀತೆಯೇ ಪ್ರೀತಿಯ ಜೀವನಸಾರ
ಪ್ರೇಮಗಾನದೆ ಪರವಶ ಈ ಧರೆ
ಮಾನಸಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ ಬಾಳಿಗಾಸರೆ
****
ಸ್ವರಲಿಪಿ
ವಿಜಯಭಾಸ್ಕರ್ ಸಂಗೀತ ಸಂಯೋಜಿಸಿರುವ ಈ ಹಾಡು ಭೀಮ್ ಪಲಾಸ್ ಅರ್ಥಾತ್ ಅಭೇರಿ ರಾಗಾಧಾರಿತವಾಗಿದ್ದು ಆರೋಹಣ ಅವರೋಹಣ ಈ ರೀತಿ ಇದೆ.
ಸ ಗ2 ಮ1 ಪ ನಿ2 ಸ
ಸ ನಿ2 ದ2 ಪ ಮ1 ಗ2 ರಿ2 ಸ
ಕೆಲವೆಡೆ ದ1 ಕೂಡ ಪ್ರಯೋಗಿಸಲಾಗಿದ್ದು ಅದನ್ನು ನಮೂದಿಸಲಾಗಿದೆ.
ಉಳಿದೆಡೆ ದ2 ಎಂದು ತಿಳಿಯುವುದು.
ಕಪ್ಪು ಬಣ್ಣ ಮಧ್ಯ ಸಪ್ತಕವೆಂದೂ
ಹಸುರು ಬಣ್ಣ ಮಂದ್ರವೆಂದೂ
ಕೆಂಪು ಬಣ್ಣವನ್ನು ತಾರ ಸಪ್ತಕವೆಂದೂ ತಿಳಿಯಬೇಕು.
ರಿಸನಿಸಾನಿ ಈ ರೀತಿ underline ಇದ್ದರೆ ಎರಡನೇ ಕಾಲ(ಡಬಲ್ ಸ್ಪೀಡ್).
ಈ ಪಂಚಮ ವೇದ ಹಾಡು ಪಂಚಮದಿಂದಲೇ ಆರಂಭವಾಗುವುದು ಮತ್ತು ಸರಿಗಮ ಪದದ ಸ್ವರಗಳೂ ಸರಿಗಮವೇ ಆಗಿರುವುದನ್ನು ಗಮನಿಸಬೇಕು.
ಎಸ್.ಜಾನಕಿ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾನಂದ
ಗರೀನಿರೀ ಸರಿಗಮ ಪಾನೀಸಾಮಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾನಂದ
ಗರಿನಿರೀ ಸರಿಗಮ ಪಾನೀಸಾಮಪಾ
ಹೃದಯ ಸಂಗಮ ಅನುರಾಗ ಬಂಧ
ರಿರೀಗರೀ ರೀಸಾನೀದಾ ನಿನೀಸಾಸ ರೀರೀ
ಹೃದಯ ಸಂಗಮ ಅನುರಾಗ ಬಂಧ
ರಿರೀಮಗರಿ ರಿಸನಿದ ನಿನೀಸಾಸ ರಿನೀರೀ
ರಾಗ ರಾ ಗಿಣಿ ಯೋಗಾನುಬಂಧ
ಮಾದನಿದನಿ ರಿಸನಿಸಾನಿ ದಾದಾದನೀಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾನಂದ
ಗರಿನಿರೀ ಸರಿಗಮ ಪಾನೀಸಾಮಪಾ
ಜೀವಜೀವದ ಸ್ವರಸಂ ಚಾರ
ಸಾನಿಸಾಸಸ ಸನಿಪಮ ಪಪಮಾ
ಅಮೃತ ಚೇತನ ರಸಧಾರ
ಸಸನಿಸಾಸಸ ಪಪಗಾಸಾ
ಜೀವ ಜೀವದ ಸ್ವರಸಂ ಚಾರ
ನಿಸಸ ಸಗಮಪಮಗಸಾ ಸನಿಪಮ ಪಪಮಾ
ಅಮೃತ ಚೇತನ ರಸಧಾರ
ನಿಸಸ ಸರಿಗಾರೀಸಾ ಪಪನೀಸಾ
ರಾಧಾ ಮಾಧವ ವೇಣುವಿಹಾರ
ನಿಪನಿಪನಿಪರಿರಿ ಗರಿಸನಿಸಸನೀ
ಗೀತೆಯೆ ಪ್ರೀತಿಯ ಜೀವನ ಸಾರ
ರೀಮಮ ಮಾಗರೀಗಮರೀಸಾ ನೀದಪ ದಪಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾನಂದ
ಗರಿನಿರೀ ಸರಿಗಮ ಪಾನೀಸಾಮಪಾ
ಪ್ರೇಮಗಾನದೆ ಪರವಶ ಈ ಧರೆ
ಸಾನಿಸಾಸಸ ಸನಿಪಮ ಪಮಮಮ
ಮಾನಸಲೋಕದ ಗಂಗೆಯ ಧಾರೆ
ನಿಸಾಸನಿಸಾಸಸ ನೀದಪಸಾಸಾ
ಪ್ರೇಮಗಾನದೆ ಪರವಶ ಈ ಧರೆ
ನಿಸಸ ಸಗಮಪಮಗಸಾ ಸನಿಪಮ ಪಮಮಮ
ಮಾನಸ ಲೋಕದ ಗಂಗೆಯ ಧಾರೆ
ಪಸಾಸಸ ಸರಿಗಾರಿಸಸಾ ನೀದಪಸಾಸಾ
ದಿವ್ಯದಿಗಂತದ ಭಾಗ್ಯತಾರೆ
ನೀಪಪರೀರಿರಿ ಗಾರೀಸನಿಸಾನೀ
ಭವ್ಯ ರಸಿಕತೆ ಬಾಳಿ ಗಾಸರೆ
ರಿಮಮಗಗರಿಸ ದನಿಸನಿದನಿದಪ ದಾಪಪ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾನಂದ
ಗರಿನಿರಿ ಸರಿಗಮ ಪಾನೀಸಾಮಪಾ
ಹೃದಯ ಸಂಗಮ ಅನುರಾಗ ಬಂಧ
ರಿರೀಗ ರಿಸನಿದ ನಿನೀಸಾಸ ರೀರಿ
ರಾಗ ರಾ ಗಿಣಿ ಯೋಗಾನುಬಂಧ
ಮಾದನಿದನಿ ರಿಸರಿಸನೀದ1 ದಾ1ದಾ1ದನೀಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ನೀಗಾ ರಿಗರಿಸ ರೀಸಾ
ಪ್ರಣಯದ ಸರಿಗಮ ಭಾವಾ ನಂದ
ಗರೀನಿರೀ ಸರಿಗಮ ಪಾರೀನಿ ಸನಿಸಾಪಾ
ಪಿ.ಬಿ.ಶ್ರೀನಿವಾಸ್
ಪಂಚಮ ವೇದ ಪ್ರೇಮದ ನಾದ
ಪಾಪಮ ಮನೀಗ ಸಗರಿಸ ಸರೀಸ
ಪ್ರಣಯದ ಸರಿಗಮ ಭಾವಾ ನಂದ
ಗರಿನಿರಿ ಸರಿಗಮ ಪಾನೀ ಸನಿಸಮಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ಮನೀಗ ಸಗರಿಸ ಸರೀಸ
ಪ್ರಣಯದ ಸರಿಗಮ ಭಾವಾ ನಂದ
ಗರಿನಿರಿ ಸರಿಗಮ ಪಾನೀ ಸನಿಸಮಪಾ
ಹೃದಯ ಸಂಗಮ ಅನುರಾಗ ಬಂಧ
ರಿರಿಗ ರಿಸನಿದ ನಿನೀಸಾಸ ರೀರಿಪ
ಹೃದಯ ಸಂಗಮ ಅನುರಾಗ ಬಂಧ
ರಿರಿಗ ರಿಸನಿದ ನಿನಿಸಾಸ ರೀರಿಪ
ರಾಗ ರಾಗಿಣಿ ಯೋಗಾನುಬಂಧ
ಮಾದ ನೀರಿಸರಿಸನಿದ ದಾದಾದನೀಪ
ಜೀವಜೀವದ ಸ್ವರ ಸಂಚಾರ
ನೀಸನೀಸಸ ನಿಸನಿಪಮ ಪಪಮ
ಅಮೃತಚೇತನ ರಸಧಾರ
ನಿಸಸನಿಸಸರೀನಿ ಪಪನೀನಿಸಾಪ
ರಾಧಾ ಮಾಧವ ವೇಣುವಿಹಾರ
ಪಾಪನಿ ಪಾರಿರಿ ರೀಸನಿ ಸಸನೀ
ಗೀತೆಯೇ ಪ್ರೀತಿಯ ಜೀವನಸಾರ
ರೀಮಮಾ ರೀಸಸ ನೀದದನಿದಾಪ
ಪಂಚಮ ವೇದ ಪ್ರೇಮದ ನಾದ
ಪಾಪಮ ಮನೀಗ ಸಗರಿಸ ಸರೀಸ
ಪ್ರಣಯದ ಸರಿಗಮ ಭಾವಾ ನಂದ
ಗರಿನಿರಿ ಸರಿಗಮ ಪಾನೀ ಸನಿಸಮಪಾ
ಪ್ರೇಮಗಾನದೆ ಪರವಶ ಈ ಧರೆ
ನೀಸನೀಸಸ ನಿಸನಿಪಮ ಪಪಮ
ಮಾನಸಲೋಕದ ಗಂಗೆಯ ಧಾರೆ
ನೀಸಸನಿಸಸರೀನಿ ನೀಪಪ ನಿನಿ ಸನಿಸಾಪ
ದಿವ್ಯದಿಗಂತದ ಭಾಗ್ಯ ತಾರೆ
ಪಾಪನಿ ಪಾರಿರಿ ಗರಿನಿ ಸಸನೀ
ಭವ್ಯ ರಸಿಕತೆ ಬಾಳಿಗಾಸರೆ
ರೀಮಗರಿಸಸ ನಿದದನಿಪಪಪ
ಪಂಚಮ ವೇದ ಪ್ರೇಮದ ನಾದ
ಪಾಪಮ ಮನೀಗ ಸಗರಿಸ ಸರೀಸ
ಪ್ರಣಯದ ಸರಿಗಮ ಭಾವಾ ನಂದ
ಗರಿನಿರಿ ಸರಿಗಮ ಪಾನೀ ಸನಿಸಮಪಾ
ಹೃದಯ ಸಂಗಮ ಅನುರಾಗ ಬಂಧ
ರಿರಿಗ ರಿಸನಿದ ನಿನೀಸಾಸ ರೀರಿಪ
ರಾಗ ರಾ ಗಿಣಿ ಯೋಗಾನುಬಂಧ
ಮಾದನಿದನಿ ರಿಸರಿಸನೀದ1 ದಾ1ದಾ1ದನೀಪಾ
ಪಂಚಮ ವೇದ ಪ್ರೇಮದ ನಾದ
ಪಾಪಮ ಮನೀಗ ಸಗರಿಸ ಸರೀಸ
ಪ್ರಣಯದ ಸರಿಗಮ ಭಾವಾ ನಂದ
ಗರಿನಿರಿ ಸರಿಗಮ ಪಾನೀ ನಿಸಾಪಾ

No comments:
Post a Comment
Your valuable comments/suggestions are welcome