ಕೆಲ ಸಮಯ ಹಿಂದೆ ಕನ್ನಡದ ಮನ್ನಾಡೆ ಎಂಬ ಹೆಸರಲ್ಲಿ ಗಾಯಕ ಪೀಠಾಪುರಂ ನಾಗೇಶ್ವರ ರಾವ್ ನೆನಪನ್ನು ಹಂಚಿಕೊಂಡಿದ್ದೆ. ಇಂದು ತನ್ನ ಸುಮಾರು 6 ದಶಕಗಳ ಆರಕ್ಕೇರದ ಮೂರಕ್ಕಿಳಿಯದ ಕಲಾಯಾತ್ರೆಯನ್ನು ಮುಗಿಸಿ 94ರ ಹರೆಯದಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿದ ಅಸಲಿ ಮನ್ನಾಡೆ ಅರ್ಥಾತ್ ಪ್ರಬೋಧ್ ಚಂದ್ರ ಡೇ ಅವರಿಗೆ ಕೆಲವು ಹಾಡುಗಳ ಮೂಲಕ ನುಡಿ ನಮನ ಸಲ್ಲಿಸುವ ಸಮಯ ಬಂದಿದೆ. ಅವರ ನಿಧನದೊಂದಿಗೆ ಚಿತ್ರಸಂಗೀತದ ಸುವರ್ಣಯುಗವನ್ನು ಆಳಿದ್ದ ಪುರುಷ ಗಾಯಕರ ಕೊನೆಯ ಕೊಂಡಿ ಕಳಚಿದಂತಾಗಿದೆ.
1. ಮೇರಿ ಸೂರತ್ ತೇರಿ ಆಂಖೆಂ - ಪೂಛೊ ನ ಕೈಸೆ ಮೈನೆ. Pucho Na Kaise
ಅವರ ಸರ್ವ ಶ್ರೇಷ್ಠ ಗೀತೆಗಳ ಪೈಕಿ ಒಂದು. ಅಹಿರ್ ಭೈರವ್ ರಾಗಾಧಾರಿತ ಎಸ್.ಡಿ. ಬರ್ಮನ್ ಸಂಯೋಜನೆ. ಆರಂಭದ ದಿನಗಳಲ್ಲಿ ಮನ್ನಾಡೇ ಅವರು ಬರ್ಮನ್ ಸಹಾಯಕರಾಗಿ ದುಡಿದಿದ್ದರು.
ಬಕ್ಕ ತಲೆಯ ದೇವಿಡ್ ಅವರ ಧ್ವನಿಯಾಗಿ ಮನ್ನಾಡೆ ಹಾಡಿದ ಶಂಕರ್ ಜೈಕಿಶನ್ ನಿರ್ದೇಶನದ ಗೀತೆ.
3. ದೂಜ್ ಕಾ ಚಾಂದ್ - ಫೂಲ್ ಗೇಂದುವಾ Duj Ka Chand - Phul Genduva
ಹಳೆ ಗ್ರಾಮಫೋನ್ ತಟ್ಟೆಯಲ್ಲಿ ಸೂಜಿ ಸಿಕ್ಕಿಹಾಕಿಕೊಂಡಂತೆ ಕೇಳಿಸುವ ವಿಶಿಷ್ಟ ಸಂಯೋಜನೆಯುಳ್ಳ ರೋಶನ್ ಅವರ ಸ್ವರ ಕಲ್ಪನೆ.
4. ಚಂದಾ ಔರ್ ಬಿಜಲಿ - ಕಾಲ್ ಕಾ ಪಹಿಯಾ Chanda Aur Bijli - Kaal Ka Pahiya
ಆರಂಭದ ದಿನಗಳಲ್ಲಿ ಹೆಚ್ಚು ಭಜನೆಗಳನ್ನೇ ಹಾಡಿ ಸಂತ ಮನ್ನಾಡೆ ಎಂದೆನ್ನಿಸಿಕೊಂಡಿದ್ದವರು ಮತ್ತೆ 60ರ ದಶಕದ ಕೊನೆಯಲ್ಲಿ ಶಂಕರ್ ಜೈಕಿಶನ್ ನಿರ್ದೇಶನದಲ್ಲಿ ಹಾಡಿದ ಸುಂದರ ಭಜನೆ.
ತ.ರಾ.ಸು ಕಾದಂಬರಿ ಹಂಸ ಗೀತೆ ಆಧರಿಸಿದ ಚಿತ್ರದ ನೆನಪಲ್ಲುಳಿಯುವ ಹಾಡು. ಈ ಚಿತ್ರದ ಮೂಲಕ ಶಂಕರ್ ಜೈಕಿಶನ್ ಅವರು ತಾವು ಶಾಸ್ತ್ರೀಯ ಸಂಗೀತದಲ್ಲೂ ಯಾರಿಗೂ ಕಮ್ಮಿಯಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದರು.
6. ತಲಾಷ್ - ತೇರೆ ನೈನಾ Talaash - Tere Naina
ಎಸ್.ಡಿ.ಬರ್ಮನ್ ನಿರ್ದೇಶನದಲ್ಲಿ ಮೂಡಿ ಬಂದ ಇನ್ನೊಂದು ಶ್ರೇಷ್ಠ ಹಾಡು. ಹಿಂದಿ ಹಾಡುಗಳಲ್ಲಿ ಅಪರೂಪವಾದ ಮೃದಂಗದ ಬಳಕೆ ಇಲ್ಲಿಯ ವಿಶೇಷ.
7. ಪಗ್ಲಾ ಕಹೀಂಕಾ - ಭೈಂಸ್ ಕೊ ಡಂಡಾ Pagla Kahin Ka - Bhains Ko Danda
60ರ ದಶಕದಲ್ಲಿ ಶಮ್ಮಿ ಕಪೂರ್- ರಫಿ ನಡುವೆ ಬಿಡಿಸಲಾರದಂತಹ ಬೆಸುಗೆ ಬೆಸೆದಿದ್ದರೂ ಏಕೋ ಈ ಶಂಕರ್ ಜೈಕಿಶನ್ ಹಾಡು ಮನ್ನಾಡೆ ಪಾಲಾಯಿತು. ಹಾಗೆಂದು ಶಂ ಜೈ ಸಂಗೀತ ನೀಡಿದ ಮೊದಲ ಶಮ್ಮಿ ಚಿತ್ರ ಉಜಾಲಾದಲ್ಲಿ ಮನ್ನಾಡೆಯೇ ಹಾಡಿದ್ದರು.
8. ದೂರ್ ಕೀ ಆವಾಜ್ -ಹಮ್ ಭಿ ಅಗರ್ Door Ki Awaz - Hum Bhi Agar
ರವಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಆಕರ್ಷಕ ಬರ್ತ್ ಡೇ ಹಾಡು. ಇಲ್ಲಿ ನಿಜ ಜೀವನದಲ್ಲೂ ಗೆಳೆಯರಾಗಿದ್ದ ರಫಿ- ಮನ್ನಾಡೆ ಜೊತೆಯಾಗಿದ್ದಾರೆ. ಆಶಾ ಭೋಸ್ಲೆಯೂ ದನಿಗೂಡಿಸಿದ್ದಾರೆ. ಸಾಮಾನ್ಯವಾಗಿ ಹೀರೊಗಳಿಗೆ ರಫಿಯೇ ಹಾಡುತ್ತಿದ್ದ ಕಾಲದ ಈ ಹಾಡಲ್ಲಿ ಮಾತ್ರ ಹೀರೊ ಜೊಯ್ ಮುಖರ್ಜಿಗೆ ಮನ್ನಾಡೆ ಹಾಗೂ ಹಾಸ್ಯ ನಟ ಜಾನಿವಾಕರ್ ಅವರಿಗೆ ರಫಿ ಧ್ವನಿಯಾಗಿರುವುದು ಗಮನಿಸಬೇಕಾದ ಅಂಶ. ರಫಿ ಹೊರತು ಇನ್ನಾರ ಧ್ವನಿಯನ್ನೂ ಜಾನಿವಾಕರ್ ಒಪ್ಪದಿದ್ದುದು ಇದಕ್ಕೆ ಕಾರಣ.
9. ಅಭಿಲಾಷಾ - ಏಕ್ ಜಾನಿಬ್ ಶಮ್ಮೆ ಮೆಹೆಫಿಲ್ Abhilasha - Ek janib Shamme Mehfil
ಇನ್ನೊಂದು ಮನ್ನಾಡೇ-ರಫಿ ಯುಗಳ ಗೀತೆ. ಸಂಗೀತ ನಿರ್ದೇಶನ ಆರ್.ಡಿ.ಬರ್ಮನ್. ಅವರಿಬ್ಬರು ಜೊತೆಯಾಗಿ ಹಾಡಿದಷ್ಟು ಯುಗಳ ಗೀತೆಗಳನ್ನು ಇನ್ನಾವ ಪುರುಷ ಗಾಯಕ ಜೋಡಿಯೂ ಹಾಡಿರಲಾರದು. ಇವರಿಬ್ಬರ ನಿವಾಸಗಳು ಅಕ್ಕ ಪಕ್ಕದಲ್ಲೇ ಇದ್ದುವಂತೆ. ಇಬ್ಬರಿಗೂ ತಮ್ಮ ತಮ್ಮ ತಾರಸಿಯ ಮೇಲೆ ಗಾಳಿಪಟ ಹಾರಿಸುವ ಹವ್ಯಾಸ ಇತ್ತಂತೆ. ಮನ್ನಾಡೆ ಗಾಳಿಪಟ ರಫಿಯವರ ಪಟಕ್ಕಿಂತ ಯಾವಾಗಲೂ ಹೆಚ್ಚು ಎತ್ತರಕ್ಕೇರುತಿತ್ತಂತೆ. ಆಗ ರಫಿ "ಗಾಳಿಪಟದಲ್ಲಿ ನನ್ನನ್ನು ಸೋಲಿಸಿದೆಯಲ್ಲ. ನಾಳೆ ಯುಗಳಗೀತೆಯ ರೆಕಾರ್ಡಿಂಗ್ ನಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ" ಎಂದು ಹುಸಿ ಧಮಕಿ ಹಾಕುತ್ತಿದ್ದರಂತೆ!
10. ಕಲಾವತಿ - ಕುಕು ಕುಹೂ
ಇಬ್ಬರು ಸಂಗೀತ ನಿರ್ದೇಶಕರಿದ್ದ ಕಲಾವತಿ ಚಿತ್ರದಲ್ಲಿ ಅಳವಡಿಸಲಾಗಿದ್ದ ಕುವೆಂಪು ರಚನೆ. ಮನ್ನಾಡೇ ಹಾಗೂ ಸುಮನ್ ಕಲ್ಯಾಣಪುರ್ ಹಾಡುಗಳನ್ನು ಮುಂಬಯಿಯಲ್ಲಿ ಲಕ್ಷ್ಮಣ್ ಬೇರ್ಲೆಕರ್ ಸಂಯೋಜಿಸಿದರೆ ಇತರ ಹಾಡುಗಳ ರೂವಾರಿ ಜಿ.ಕೆ.ವೆಂಕಟೇಶ್. ಮನ್ನಾಡೆ ಮಾರ್ಗದರ್ಶಿ, ಸಂಗೊಳ್ಳಿ ರಾಯಣ್ಣ, ಕಲ್ಪವೃಕ್ಷ ಮುಂತಾದ ಚಿತ್ರಗಳಲ್ಲಿ ಇನ್ನೂ ಕೆಲವು ಕನ್ನಡ ಗೀತೆಗಳನ್ನು ಹಾಡಿದ್ದರು.
11. ಮನ್ನಾಡೆ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿ ನನ್ನ ಜೊತೆ ನಡೆಸಿದ ಫೋನ್ ಇನ್ ಸಂದರ್ಶನದ ತುಣುಕು.
ರಫಿ, ತಲತ್ ತನ್ನಿಂದ ಶ್ರೇಷ್ಠರೆಂದಿದ್ದ ಮನ್ನಾಡೇ
ಒಂದು ವೇಳೆ ತಾನು ಸಂಗೀತ ನಿರ್ದೇಶಕನಾಗಿರುತ್ತಿದ್ದರೆ ರೊಮ್ಯಾಂಟಿಕ್ ಹಾಡುಗಳನ್ನು ರಫಿ ಅಥವಾ ತಲತ್ ಮಹಮೂದ್ ಅವರಿಂದ ಹಾಡಿಸುತ್ತಿದ್ದೆ. ನನ್ನದು ಏನಿದ್ದರೂ ನಂತರದ ಸ್ಥಾನ ಎಂದು ಮನ್ನಾಡೇ ಹೇಳಿದ್ದನ್ನು ಅವರ ಧ್ವನಿಯಲ್ಲೇ ಕೇಳಿ.
Good.... You are right about Manna da not getting a star to go with. Also great analysis about his voice !!
ReplyDelete--Jayadeva Prasad Moleyar in FB
Manna Da was great! His classical based songs are unforgettable.
ReplyDelete