ಸ್ವರ ಲಿಪಿ



ಈ ಪುಟದಲ್ಲಿ ಕೆಲವು ಜನಪ್ರಿಯ ಸರಳ ಸುಲಭ ಹಾಡುಗಳ ಸ್ವರಲಿಪಿ ಲಭ್ಯವಾಗಲಿದೆ.  ಲಿಪಿಯಲ್ಲಿ ಬಳಸಲಾಗುವ ಚಿಹ್ನೆ ಇತ್ಯಾದಿಗಳ ವಿವರಗಳಿಗೆ ಸಪ್ತಸ್ವರಗಳ ಸುತ್ತ ಲೇಖನ ಓದಬಹುದು. ಸ್ವರಸ್ಥಾನಗಳ ಪರಿಚಯವಿರುವವರು ಇದರ ಸಹಾಯದಿಂದ ಯಾವ ವಾದ್ಯದಲ್ಲಾದರೂ  ಈ  ಹಾಡುಗಳನ್ನು ನುಡಿಸಿ ಆನಂದಿಸಬಹುದು. ಕಲಿಯಲು ಸುಲಭವಾಗುವಂತೆ ಜೊತೆಯಲ್ಲಿ ಮೂಲ ಹಾಡೂ ಇರುತ್ತದೆ.

8. ಹೂವು ಚೆಲುವೆಲ್ಲ
ಬಹು ಸಮಯದಿಂದ ಕೋರಿಕೆ ಸಲ್ಲಿಸುತ್ತಿದ್ದ ಅನೇಕರಿಗಾಗಿ ಹೂವು ಚೆಲುವೆಲ್ಲ ಹಾಡಿನ ಸ್ವರಲಿಪಿ ಇಲ್ಲಿದೆ. ಆದರೆ ಇದು ಒಂದು ಪೆನ್ಸಿಲ್ ಸ್ಕೆಚ್ ಇದ್ದಂತೆ. ಇದನ್ನು ಆಧಾರವಾಗಿಟ್ಟುಕೊಂಡು ಅಭ್ಯಾಸ ಮಾಡುತ್ತಾ ಹಾಡು ನುಡಿಸುವುವನ್ನು ರೂಢಿಸಿಕೊಳ್ಳಬೇಕು. ಇಲ್ಲಿ ಹಾಡಿನ ಮೊದಲ ಚರಣ ಮಾತ್ರ ಇದೆ.  ಉಳಿದೆರಡು ಚರಣಗಳ ಸ್ವರಗಳಲ್ಲಿ  ವ್ಯತ್ಯಾಸವೇನೂ ಇಲ್ಲ. ಸಾಹಿತ್ಯವನ್ನು ಗಮನಿಸಿಕೊಂಡರಾಯಿತು. ಪಲ್ಲವಿ ತಾಳಕ್ಕಿಂತ ಎರಡಕ್ಷರ ಮೊದಲು ಮತ್ತು ಚರಣ ಮೂರಕ್ಷರ ನಂತರ ಆರಂಭವಾಗುತ್ತದೆ.

ಹಾಡಿನ ಕುರಿತಾದ ವಿಶ್ಲೇಷಣಾತ್ಮಕ ಬರಹಕ್ಕೆ  ಇಲ್ಲಿ ಕ್ಲಿಕ್ಕಿಸಿ.



 


7. ಗಗನವು ಎಲ್ಲೊ
ಗೆಜ್ಜೆಪೂಜೆ ಚಿತ್ರದ ಗಗನವು ಎಲ್ಲೋ.  ಇದು ಸ  ರಿ2  ಗ2  ಮ1 ಪ  ನಿ2 ಸ  ಸ್ವರಗಳನ್ನು ಹೊಂದಿದ್ದು  ಅಭೇರಿಯಂತೆ ಭಾಸವಾಗುವ  ಅಗ್ನಿಕೋಪ ಎಂಬ ರಾಗವನ್ನು ಹೋಲುತ್ತದೆ.  ಹೆಚ್ಚಿನ ವಿವರಗಳಿಗಾಗಿ ಮತ್ತು ಮೂಲ ಹಾಡಿಗಾಗಿ ಗಗನವು Yellow ಭೂಮಿಯೂ Yellow ಲೇಖನ ನೋಡಿ.


ಎರಡನೆ ಚರಣಕ್ಕೂ ಇವೇ ಸ್ವರಗಳು.

6. ರಾರ ವೇಣು ಗೋಪ ಬಾಲ
ಬಿಲಹರಿ ರಾಗದ ಸುಮಧುರ ಸ್ವರಜಿತ್.  ಇದರ ತೆಲುಗು ಸಾಹಿತ್ಯದ  ವಿವಿಧ ಪಾಠಾಂತರಗಳು ಅಂತರ್ಜಾಲದಲ್ಲಿವೆ.  ಇಲ್ಲಿರುವುದು ನಮ್ಮ ಗುರುಗಳಾದ ಗೋಪಾಲಕೃಷ್ಣ ಐಯರ್ ಮೂಲಕ ಬಂದಿರುವುದು.  ಇದನ್ನು ಸಾಹಿತ್ಯವಿಲ್ಲದೆ ಸ್ವರಗಳಲ್ಲಿ ಹಾಡಿದರೂ ಕೇಳಲು ಚಂದವೇ.  ಕೊಳಲಿಗೆ ಹೇಳಿ ಮಾಡಿಸಿದ ಕೃತಿ ಇದು. ಸ್ವರಲಿಪಿಯ sub titlesನೊಂದಿಗೆ  ಈ ಕೃತಿಯ ವಿಶೇಷ  ವೀಡಿಯೊ ಇಲ್ಲಿ ನೋಡಬಹುದು.






5. ಭಾಗ್ಯದ ಬಳೆಗಾರ
ಮಧ್ಯಮಾವತಿ ರಾಗಾಧಾರಿತ ಅತಿ ಜನಪ್ರಿಯ ಹಾಡು.
FB, Whatsappಗಳಲ್ಲಿ ಈಗಲೂ ಹರಿದಾಡುತ್ತಿರುವ ಈ ಹಾಡಿನ ಜನಪ್ರಿಯ ವೀಡಿಯೊ ಇಲ್ಲಿ ನೋಡಬಹುದು.




4. ಜ್ಯೋತಿ ಕಲಶ್ ಛಲ್‌ಕೆ
ಭಾಭೀ ಕೀ ಚೂಡಿಯಾಂ ಚಿತ್ರದ ಭೂಪ್(ಮೋಹನ) ರಾಗಾಧಾರಿತ ever green ಹಾಡು. ಒಂದೆರಡು ಕಡೆ ಅನ್ಯ ಸ್ವರವಾಗಿ   ನಿ3 ಲಘು ಸ್ಪರ್ಷ ಇದೆ.






3. ಜಯತು ಜಯ ವಿಠಲ
ಸಂತ ತುಕಾರಾಂ ಚಿತ್ರದ ಮೋಹನ ರಾಗಾಧಾರಿತ ಹಾಡು.





2. ಗುರುವಾರ ಬಂತಮ್ಮ
ಮಧ್ಯಮಾವತಿ ರಾಗದ ಈ ಹಾಡಿನ ಪ್ರತೀ ಸಾಲು ಪ್ರತೀ ಚರಣ ವಿಭಿನ್ನವಾಗಿದೆ. ಮೂಲ ಹಾಡನ್ನು ಒಂದೆರಡು ಸಲ ಗಮನವಿಟ್ಟು ಆಲಿಸಿ ನಂತರ ಸ್ವರಗಳನ್ನು ಆಧಾರವಾಗಿಟ್ಟುಕೊಂಡು ಪ್ರಯತ್ನಿಸಬೇಕು.




1. ಗಜಮುಖನೆ ಗಣಪತಿಯೆ




10 comments:

mukundachiplunkar said...

ಒಳ್ಳೆಯ ಪ್ರಯತ್ನ ಸ೦ಗೀತಪಾಠದ್ದು.ಭೇಷ್

Chidambar Kakathkar said...

ಆಸಕ್ತಿ ಇದ್ದವರಿಗೆ ಉಪಯೋಗ ಆಗುವುದಾದರೆ ಆಗಲಿ ಎಂಬ ಉದ್ದೇಶ.

Anonymous said...

ತುಂಬಾ ಧನ್ಯವಾದ...ಇದು ಕಲಿಯುವವರಿಗೆ ತುಂಬಾ ಅನುಕೂಲವಾಗಿದೆ.

ಭವಾನಿ ಪೈ (FB)

Anonymous said...

ಬಹಳ ಚೆನ್ನಾಗಿದೆ. ಸಂಗೀತ ಅಭ್ಯಾಸ ಮಾಡುವವರಿಗೆ ಒಳ್ಳೆಯ ಮಾಹಿತಿ.

ಗುರುಪ್ರಸಾದ್ ಮೈಸೂರು (FB)

Unknown said...

so nice. very much helpful to learners. thank you so much. Ganesh Jaya Hatwar

ದಕ್ಷಿಣ ಕನ್ನಡ said...

ನಿಮ್ಮ ಸ್ವರ ಲಿಪಿಯಿಂದ ನನಗೆ ತುಂಬ ಉಪಯೋಗವಾಯಿತ್ತು ಸರ್.ನಿಮಗೆ ತುಂಬಾ ಧನ್ಯವಾದಗಳು ಸರ್.

Chidambar Kakathkar said...

ನಿಮಗೆ ಉಪಯೋಗವಾದದ್ದು ತಿಳಿದು ಸಂತೋಷವಾಯಿತು. ನಿಮ್ಮ ಪರಿಚಯ ತಿಳಿಸಿದರೆ ಹೆಚ್ಚು ಸಂತೋಷವಾಗುತ್ತದೆ!

ದಕ್ಷಿಣ ಕನ್ನಡ said...

ಹೂವು ಚೆಲುವೆಲ್ಲ ನನಂದಿಂತ್ತು ಈ ಗೀತೆಯ ಸ್ವರಲಿಪಿ ಪರಿಚಯ ಮಾಡಿಕೂಟ್ಟಿದ್ದಕ್ಕೆ ಅನಂತ ಧನ್ಯವಾದಗಳು.ಆ ಭಗವಂತ ನಿಮಗೆ ಮತ್ತು ಕುಟುಂಬ ವರ್ಗದವರಿಗೆ ಆರೋಗ್ಯ ಮತ್ತು ಐಶ್ವರ್ಯವನ್ನು ದಯಪಾಲಿಸಿಲ್ಲಿ ಆ ಭಗವಂತನಲ್ಲಿ ಪ್ರಾರ್ಥನೆ.

Teacher Today said...

Thank you somuch -- RK

Unknown said...

ಧನ್ಯವಾದಗಳು