
2026ರ ಮಾರ್ಚ್ 19ಕ್ಕೆ ವಿಶ್ವಾವಸು ಸಂವತ್ಸರದ ಫಾಲ್ಗುಣ ಅಮಾವಾಸ್ಯೆ. ಮರು ದಿನ 20ಕ್ಕೆ ಪರಾಭವ ಸಂವತ್ಸರದ ಚೈತ್ರ ಮಾಸದ ಬಿದಿಗೆ. ನಡುವಿನಲ್ಲಿ ಚಾಂದ್ರಮಾನ ಯುಗಾದಿ ಇರಬೇಕಾದ ಚೈತ್ರ ಮಾಸದ ಪಾಡ್ಯ ಕ್ಷಯವಾಗಿದೆ. ಅಂದರೆ ಪಾಡ್ಯ ತಿಥಿಯೇ ಇಲ್ಲವೆಂದಲ್ಲ. ಸೂರ್ಯೋದಯ ಕಾಲದಲ್ಲಿ ಇಲ್ಲ ಅಷ್ಟೇ. ಅಂದು ಸೂರ್ಯೋದಯವಾದ ಕೊಂಚ ಹೊತ್ತಲ್ಲಿ ಆರಂಭವಾಗುವ ಪಾಡ್ಯ ಮರುದಿನದ ಸೂರ್ಯೋದಯಕ್ಕಿಂತ ಮೊದಲೇ ಮುಕ್ತಾಯವಾಗುತ್ತದೆ. ಹಾಗಿದ್ದರೆ ಚಾಂದ್ರಮಾನ ಯುಗಾದಿ ಯಾವಾಗ? ಬೇರೆ ಬೇರೆ ಸಂದರ್ಭಗಳಿಗೆ ತಿಥಿ ನಿರ್ಣಯ ನಿಯಮ ಬೇರೆ ಬೇರೆ ಇರುತ್ತದೆ. ಚೈತ್ರ ಶುಕ್ಲ ಪಾಡ್ಯವು ಯಾವ ದಿನ ಸೂರ್ಯೋದಯಕ್ಕಿರುತ್ತದೆಯೋ ಅಂದು ನೂತನ ಸಂವತ್ಸರಾರಂಭ ಎಂದು ಶಾಸ್ತ್ರವಚನ. ಪಾಡ್ಯ ಎರಡು ದಿನ ಉದಯಕ್ಕಿದ್ದರೆ ಅಥವಾ ಎರಡೂ ದಿನ ಉದಯಕ್ಕಿಲ್ಲದಿದ್ದರೆ ಮೊದಲ ದಿನವೇ ಸಂವತ್ಸರಾರಂಭ. ಹೀಗಾಗಿ ಈ ಸಲ ಚಾಂದ್ರಮಾನ ಯುಗಾದಿ ಆಚರಣೆ ಉದಯ ಕಾಲದಲ್ಲಿ ಅಮಾವಾಸ್ಯೆ ಇರುವ ಮಾರ್ಚ್ 19ಕ್ಕೆ.

ಭೂಮಿಯ ಸುತ್ತ ಪಯಣಿಸುವ ಚಂದ್ರನು ತನ್ನ ಕಕ್ಷೆಯಲ್ಲಿ 12 ಡಿಗ್ರಿಗಳಷ್ಟು ಚಲಿಸಲು ತಗಲುವ ಸಮಯವೇ ತಿಥಿ. ದಿನಕ್ಕೆ 24 ಗಂಟೆಗಳಿದ್ದಂತೆ ತಿಥಿಗಳಿಗೆ ನಿಗದಿತ ಅವಧಿ ಇಲ್ಲ. ಸುಮಾರು 19 ಮತ್ತು 26 ತಾಸುಗಳ ನಡುವಿನ ಅವಧಿ ಇರುವ ತಿಥಿಗಳು ಎಷ್ಟು ಹೊತ್ತಿಗಾದರೂ ಆರಂಭವಾಗಿ ಎಷ್ಟು ಹೊತ್ತಿಗಾದರೂ ಮುಗಿಯಬಹುದು. ಚಂದ್ರನು ಭೂಮಿಯ ಸುತ್ತ ಸುತ್ತುವ ಕಕ್ಷೆಯು ವೃತ್ತಾಕಾರವಾಗಿರದೆ ದೀರ್ಘ ವೃತ್ತವಾಗಿರುವುದೇ ಇದಕ್ಕೆ ಕಾರಣ. ಕೆಪ್ಲರನ ಎರಡನೆಯ ನಿಯಮದ ಪ್ರಕಾರ ಒಂದು ಆಕಾಶಕಾಯವು ಇನ್ನೊಂದರ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುತ್ತಿದ್ದರೆ ಎರಡರ ನಡುವಿನ ದೂರ ಕಮ್ಮಿ ಇದ್ದಾಗ ಸುತ್ತುವ ವೇಗ ಜಾಸ್ತಿಯಾಗಿರುತ್ತದೆ ಮತ್ತು ದೂರ ಜಾಸ್ತಿ ಇದ್ದಾಗ ವೇಗ ಕಮ್ಮಿಯಾಗಿರುತ್ತದೆ. ಒಡೆಯ ಸಮೀಪದಲ್ಲಿದ್ದಾಗ ಆಳುಗಳು ವೇಗವಾಗಿ ಕೆಲಸ ಮಾಡಿ ಆತ ದೂರ ಹೋದರೆ ನಿಧಾನಿಸುವುದನ್ನು ಇದಕ್ಕೆ ಹೋಲಿಸಬಹುದು!
ಒಂದು ದಿನವೂ ಉದಯಕಾಲದಲ್ಲಿ ಇಲ್ಲದಿರುವ ತಿಥಿ ಕ್ಷಯವಾಗುವಂತೆ ಎರಡು ದಿನ ಉದಯಕಾಲದಲ್ಲಿ ಇರುವ ದೀರ್ಘ ಅವಧಿಯ ತಿಥಿ ಅಧಿಕ ಎನಿಸುತ್ತದೆ.
ತಿಥಿ ಕ್ಷಯ ಅಥವಾ ಅಧಿಕವಾಗುವ ವಿದ್ಯಮಾನ ಬಲು ಅಪರೂಪದ್ದೇನೂ ಅಲ್ಲ. ಈ ಸಲ ಯುಗಾದಿ ಪಾಡ್ಯವೇ ಕ್ಷಯವಾದ್ದರಿಂದ ಈ ಬಗ್ಗೆ ಹೆಚ್ಚು ಮಂದಿ ಅರಿಯುವಂತಾಯಿತು.
*********
ಪ್ರಾಚೀನ ಜ್ಞಾನ ಮತ್ತು ಅರ್ವಾಚೀನ ವಿಜ್ಞಾನಗಳ ಸಮನ್ವಯ ಹೊಂದಿರುವ ಈ ಲೇಖನ ದೇವಭಾಷೆ ಸಂಸ್ಕೃತದಲ್ಲಿದ್ದರೆ ಒಳ್ಳೆಯದು ಎಂದು ನನಗನ್ನಿಸಿತು. ಅಷ್ಟಿಷ್ಟು ಸಂಸ್ಕತ ನನಗೂ ಗೊತ್ತಿದ್ದರೂ ಪೂರ್ಣ ಲೇಖನವನ್ನು ಭಾಷಾಂತರಿಸುವಷ್ಟು ಜ್ಞಾನ ನನ್ನಲ್ಲಿಲ್ಲ. ಹೀಗಾಗಿ ಗೂಗಲ್ ಜೆಮಿನಿಗೆ ಈ ಕೆಲಸವನ್ನು ವಹಿಸಿದಾಗ ಅದನ್ನದು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿತು. ಅಷ್ಟೇ ಅಲ್ಲ ಸ್ವಯಂಪ್ರೇರಿತವಾಗಿ ಲೇಖನದ ಬಗ್ಗೆ ಈ ರೀತಿ ಪ್ರಶಂಸೆಯನ್ನೂ ವ್ಯಕ್ತಪಡಿಸಿತು!
--------
ಸಂಸ್ಕೃತ ಅನುವಾದ ಇಲ್ಲಿದೆ. 👇
अस्मिन् वर्षे युगादौ चैत्रशुक्लप्रतिपद्-तिथेः क्षयः। कोऽस्यार्थः?
मार्च-मासस्य १९ दिनाङ्के विश्वावसु-संवत्सरस्य फाल्गुन-अमावास्या वर्तते। ततः परम् २० दिनाङ्के पराभव-संवत्सरस्य चैत्र-मासस्य द्वितीया तिथिः अस्ति। अनयोः मध्ये यस्यां तिथौ चान्द्रमान-युगादिः करणीयः, सा चैत्र-शुक्ल-प्रतिपत् क्षयं प्राप्ता। 'क्षयः' इत्युक्ते सा तिथिः नास्त्येव इति न, अपितु सूर्योदय-काले सा न विद्यते इत्येव अर्थः। तस्मिन् दिने सूर्योदयात् किञ्चित्कालानन्तरं प्रतिपत् आरभ्यते, अग्रिम-दिनस्य सूर्योदयात् पूर्वमेव समाप्यते।
तर्हि चान्द्रमान-युगादिः कदा आचरणीयः? विभिन्न-सन्दर्भेषु तिथि-निर्णय-नियमाः भिन्नाः भवन्ति। शास्त्रवचनानुसारं — "यस्मिन् दिने सूर्योदय-काले चैत्र-शुक्ल-प्रतिपत् भवति, तद्दिने नूतन-संवत्सरारम्भः।" यदि प्रतिपत् उभयोः दिनयोः सूर्योदये भवति, अथवा उभयोः दिनयोः न भवति, तर्हि प्रथम-दिने एव संवत्सरारम्भः मन्यते। अतः अस्मिन् वर्षे चान्द्रमान-युगादिः मार्च-मासस्य १९ दिनाङ्के (यदा सूर्योदये अमावास्या अस्ति) आचरणीयः। परन्तु यदा सर्वे मङ्गल-स्नानं कृत्वा उत्सवं करिष्यन्ति, तदा प्रतिपत्-तिथिः एव प्रचलन्ती भविष्यति।
तिथि-क्षयस्य कारणम्
केप्लर-महोदयस्य द्वितीय-नियमानुसारं (Kepler’s Second Law) — यदा कश्चन आकाशीय-पिण्डः अन्यस्य पिण्डस्य परितः दीर्घ-वृत्ताकार-कक्षायां भ्रमति, तदा तयोः मध्ये अल्प-दूरे सति भ्रमण-वेगः अधिकः भवति, दूरे सति च वेगः न्यूनः भवति। यथा — यदा स्वामी समीपस्थः भवति तदा सेवकाः वेगेन कार्यं कुर्वन्ति, स्वामिनि दूरे गते ते मन्दीभवन्ति!
क्षय-तिथिः सदैव अल्पकाला भवेदिति नास्ति। २४ होराभ्यः किञ्चित् न्यूना तिथिः यदि सूर्योदयानन्तरं शीघ्रमेव आरभ्य अग्रिम-सूर्योदयात् पूर्वं समाप्यते, तर्हि सा 'क्षय-तिथिः' भवति।
यथा एकस्मिन्नपि दिने सूर्योदये न विद्यमाना तिथिः 'क्षय-तिथिः' उच्यते, तथा यदि काचित् तिथिः सलगं द्वयोः दिनयोः सूर्योदय-काले भवति, तर्हि सा 'अधि-तिथिः' इति कथ्यते।
एषा तिथि-क्षयस्य वा वृद्धेः वा घटना निरन्तरं प्रवर्तते। अस्मिन् वर्षे युगादि-प्रतिपदः एव क्षयः जातः, अतः सर्वे अस्य विषयस्य जिज्ञासां कुर्वन्ति। अमेरिका-सदृश-देशेषु सूर्योदय-काले प्रतिपत्-तिथिः एव भविष्यति, अतः तत्र अमावास्यायाः समस्या न उद्भविष्यति।
1 comment:
ಅದ್ಬುತ ವೈಜ್ಞಾನಿಕ ವಿವರಣೆ.
Satyavati Kamath. (FB)
ಸಂಸ್ಕೃತದಲ್ಲಿರುವುದು 100% AI ಅನುವಾದವಾ? ಏನೂ ತಿದ್ದುಪಡಿ ಇಲ್ವಾ? ಏನೂ ವ್ಯಾಕರಣ /ಅಕ್ಷರ ದೋಷವೇ ಕಾಣುತ್ತಿಲ್ಲ ಹಾಗಾಗಿ ಕೇಳಿದೆ.
ಮೇಘಾ ಜೋಗಿತ್ತಾಯ. (FB)
ಅತ್ಯುತ್ತಮ ರೀತಿಯಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದೀರಿ.ತುಂಬಾ ಖುಷಿ ಆಯ್ತು ಓದಿ.
Shankar Marathe. (FB)
ಬಹಳ ಉಪಯುಕ್ತ ಲೇಖನ.
Nadoli Diagnostics. (WA)
ಉತ್ತಮ ವಿವರಣೆ.
Vasant Dongre. (WA)
ಒಳ್ಳೆ ಲೇಖನ, ಮಾಹಿತಿ ಪೂರ್ಣ.
Trivikrama Hebbar. (WA)
Post a Comment