ಸುಪ್ರಸಿದ್ಧ ಚಲನ ಚಿತ್ರಗೀತೆಗಳ ತುಣುಕುಗಳನ್ನು ಸೇರಿಸಿ ರಚಿಸಲ್ಪಟ್ಟ ಅಣಕವಾಡುಗಳು ಎಲ್ಲ ಭಾಷೆಯ ಚಲನಚಿತ್ರಗಳಲ್ಲೂ ಬಂದಿವೆ. ಹೆಚ್ಚಾಗಿ ಇವು ಹಾಸ್ಯ ಸನ್ನಿವೇಶಗಳಿಗಾಗಿ ಸಂಯೋಜಿಸಲ್ಪಟ್ಟರೂ ಕೆಲವೊಮ್ಮೆ ಒಂದು ರೂಪಕದ ರೂಪದಲ್ಲೂ ಇರುವುದುಂಟು. ಕಿಶೋರ್, ಮುಕೇಶ್ ಅಥವಾ ಆಶಾ ಭೋಸ್ಲೆ ಹಾಡಿದ್ದ ಹಾಡನ್ನು ರಫಿ ಹಾಡಿದರೆ ಹೇಗಿರುತ್ತದೆ, ರಫಿ ಹಾಡು ಆಶಾ ಭೋಸ್ಲೆ ಸ್ವರದಲ್ಲಿ ಹೇಗೆ ಕೇಳಿಸುತ್ತದೆ, ಪೀಠಾಪುರಂ ಧ್ವನಿಯಲ್ಲಿದ್ದ ಹಾಡು ಪಿ.ಬಿ.ಎಸ್ ಕಂಠದಲ್ಲಿ, ಜಾನಕಿ ಹಾಡು ಬೆಂಗಳೂರು ಲತಾ ಧ್ವನಿಯಲ್ಲಿದ್ದರೆ ಹೇಗನ್ನಿಸುತ್ತದೆ ಎಂದು ಹೋಲಿಸುತ್ತಾ ಇಂತಹ ಅಣಕವಾಡುಗಳನ್ನು ಆಲಿಸುವುದು ಮೋಜೆನ್ನಿಸುತ್ತದೆ. ತಮ್ಮ ಹಳೆಯ ಚಿತ್ರಗಳ ಗೀತೆಗಳನ್ನು ಮಾತ್ರವಲ್ಲದೆ ಇತರರ (ಹೆಚ್ಚಾಗಿ ಶಂಕರ್ ಜೈಕಿಶನ್) ಗೀತೆಗಳ ತುಣುಕುಗಳನ್ನೂ ಇವು ಒಳಗೊಳ್ಳುತ್ತಿದ್ದುದು ಅಂದಿನ ಸಂಗೀತ ನಿರ್ದೇಶಕರ ವಿಶಾಲ ಮನೋಭಾವಕ್ಕೆ ಸಾಕ್ಷಿ. ಅಂತಹ ಕೆಲವು ಕುತೂಹಲಕರ ಅಣಕವಾಡುಗಳು ಇಲ್ಲಿವೆ.
1. ಮೈ ಚುಪ್ ರಹೂಂಗೀ
ಚಾಹೆ ಕೊಯಿ ಮುಝೆ ಜಂಗ್ಲಿ ಕಹೆ, ದಾದಿಯಮ್ಮಾ ಮಾನ್ ಜಾವೊ, ಲೇಕೆ ಪಹಲಾ ಪಹಲಾ ಪ್ಯಾರ್ ಮುಂತಾದ ಹಾಡುಗಳ ಸಾಲುಗಳನ್ನೊಳಗೊಂಡ ಇದು ಮೊಲವೊಂದು ಸಿಂಹವನ್ನು ಯುಕ್ತಿಯಿಂದ ಸೋಲಿಸುವ ಕಥೆಯನ್ನು ಮಕ್ಕಳು ಅಭಿನಯಿಸಿ ತೋರಿಸುವ ಸನ್ನಿವೇಶಕ್ಕಾಗಿ ಚಿತ್ರಗುಪ್ತ ಅವರಿಂದ ಸಂಯೋಜಿಸಲ್ಪಟ್ಟಿದೆ.
2. ಏಕ್ ಫೂಲ್ ದೋ ಮಾಲಿ
ಜೊ ವಾದಾ ಕಿಯಾ ವೊ, ದಿಲ್ ಕೆ ಝರೊಕೆ ಮೆ ಮುಂತಾದವುಗಳನ್ನೊಳಗೊಂಡ ಇದು ಹಾಸ್ಯ ಸನ್ನಿವೇಶಕ್ಕೆ ರವಿ ಅವರ ಸಂಯೋಜನೆ. ಆಶಾ ಭೋಸ್ಲೆಯ ಪರದೆ ಮೆಂ ರಹನೆ ದೋ ಧಾಟಿಯಲ್ಲಿ ಮೇರಿ ತರಹ ಗಂಜಾ ಎಂದು ರಫಿ ಧ್ವನಿಯಲ್ಲಿ ಡೇವಿಡ್ ತನ್ನ ಬೋಳು ತಲೆಯನ್ನು ತಾನೇ ಲೇವಡಿ ಮಾಡಿಕೊಳ್ಳುವುದು ಇದರ ಹೈಲೈಟ್.
3. ಲಾಖೊಂ ಮೆಂ ಏಕ್
ಈ ಹಾಡಿನಲ್ಲಿ ಮೆರೆ ಸಾಮನೆವಾಲಿ ಖಿಡಕಿ ಮೆಂ, ಮೆರೆ ಸಪನೊಂ ಕಿ ರಾನಿ , ಓ ಮೆರೆ ಸೋನಾರೆ, ಯೇ ಜೊ ಮೊಹಬ್ಬತ್ ಹೈ ಮುಂತಾದ ಬಹುತೇಕ ತಮ್ಮದೇ ಹಾಡುಗಳ ತುಣುಕುಗಳನ್ನು ಆರ್.ಡಿ. ಬರ್ಮನ್ ಅಳವಡಿಸಿದ್ದಾರೆ.
4. ಮೈ ಸುಂದರ್ ಹೂಂ
ಇತರರ ಅಣಕವಾಡುಗಳಲ್ಲಿ ತಮ್ಮ ಹಾಡುಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ಕೃತಜ್ಞತೆಯೋ ಎಂಬಂತೆ ಇಲ್ಲಿ ಶಂಕರ್ ಜೈಕಿಶನ್ ಅವರು ಲಕ್ಷ್ಮಿ-ಪ್ಯಾರೆ, ಕಲ್ಯಾಣಜೀ ಆನಂದಜೀ, ಎಸ್.ಡಿ.ಬರ್ಮನ್ ಮುಂತಾದವರ ಟ್ಯೂನ್‌ಗಳನ್ನೂ ಬಳಸಿದ್ದಾರೆ. ತಮ್ಮ ರಚನೆಗಳೇ ಆದ ತೇರಿ ಪ್ಯಾರಿ ಪ್ಯಾರಿ, ಮುನ್ನೆ ಕಿ ಅಮ್ಮಾ , ಏ ಭಾಯ್ ಜರಾ ದೇಖ್ ಕೆ ಚಲೊ ಮುಂತಾದವೂ ಇವೆ. ಮನ್ನಾಡೆ ಧ್ವನಿಯಲ್ಲಿ ಆರಾಧನಾ ಹಾಡುಗಳನ್ನು ಇದರಲ್ಲಿ ಕೇಳಬಹುದು.
5. ವಾರಿಸ್
ಹಾಸ್ಯ ಪಾತ್ರಗಳಲ್ಲೇ ಹೆಚ್ಚು ಗುರುತಿಸಿಕೊಂಡರೂ ಮಹಮೂದ್ ಬಲು ಪ್ರತಿಭಾವಂತ ನಟ. ಅತ್ಯುತ್ತಮ ಮಿಮಿಕ್ರಿ ಪಟು ಕೂಡ. ಹಮ್‌ಜೋಲಿ ಚಿತ್ರದಲ್ಲಿ ಆತ ತ್ರಿಪಾತ್ರಧಾರಿಯಾಗಿ ಪೃಥ್ವಿರಾಜ ಕಪೂರ್ ಮತ್ತು ರಾಜ್ ಕಪೂರ್ ಅವರ ನಕಲು ಮಾಡಿದ್ದನ್ನು ಅನೇಕರು ನೋಡಿರಬಹುದು. ವಾರಿಸ್ ಚಿತ್ರದ ಈ mixture ಹಾಡಲ್ಲಿ ಆತ ಶಮ್ಮಿ ಕಪೂರನನ್ನು ನಕಲು ಮಾಡಿದ್ದ.
No comments:
Post a Comment
Your valuable comments/suggestions are welcome