ಆಗ ನಾನು ಎರಡನೆಯ ಅಥವಾ ಮೂರನೆಯ ಕ್ಲಾಸು. ನಮ್ಮ ಸಿದ್ದಬೈಲು ಪರಾರಿ ಶಾಲೆಯ ಪ್ರತಿಭಾವಂತ ಉಪಾಧ್ಯಾಯರಾಗಿದ್ದ, ನಾವು ಮಹಾದೇವ ಮಾಸ್ಟ್ರು ಎನ್ನುತ್ತಿದ್ದ, ಮಹದೇವ ಚಿಪ್ಳೂಣ್‌ಕರ್ ಅವರು ಈ ಹಾಡಿಗೆ ಸುಂದರ ನೃತ್ಯವನ್ನು ಸಂಯೋಜಿಸಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಸ್ತುತ ಪಡಿಸಿದಾಗ ನಾನು ಮೊದಲು ಈ ಹಾಡು ಕೇಳಿದ್ದು. ಕ್ಯಾಸೆಟ್ಟುಗಳು ಇನ್ನೂ ಬಂದಿರದ ಆ ಕಾಲದಲ್ಲಿ ಗ್ರಾಮೊಫೋನ್ ರೆಕಾರ್ಡ್ ನುಡಿಸಿ ಮಕ್ಕಳಿಂದ ಡ್ಯಾನ್ಸ್ ಮಾಡಿಸುವ ಕ್ರಮ ಇರಲಿಲ್ಲ. ಇದನ್ನು ಸೈಡ್ ವಿಂಗಲ್ಲಿ ಮಿಂತು ಅವರೇ ಹಾಡಿದ್ದರು. ಇದು ಆದರ್ಶ ಸತಿ ಸಿನಿಮಾದ ಹಾಡೆಂದು ನನಗೆ ತಿಳಿದದ್ದು ಎಷ್ಟೋ ವರ್ಷಗಳ ನಂತರ. ರೇಡಿಯೋದಲ್ಲೂ ಇದು ಪ್ರಸಾರವಾದದ್ದು ಇಲ್ಲವೆನ್ನುವಷ್ಟು ಕಮ್ಮಿ. ಎಂದೋ ಒಮ್ಮೆ ರೇಡಿಯೊ ಸಿಲೋನಿನಿಂದ ಇದನ್ನು ಕೇಳಿದ್ದೆ. ಅಂತರ್ಜಾಲ ಯುಗ ತೆರೆದುಕೊಂಡ ಮೇಲೆ ಆದರ್ಶ ಸತಿಯ ತೆಲುಗು ಅವತರಣಿಕೆಯಾದ ನಾಗುಲ ಚವಿತಿಯಲ್ಲಿ ಇದು ನನಗೆ ಸಿಕ್ಕಿತು. ಎಲ್ಲ ಭಾರತೀಯ ಭಾಷೆಗಳ ಮಾತೃ ಸ್ಥಾನದಲ್ಲಿರುವ ಸಂಸ್ಕೃತದ ವಿಶೇಷಣಗಳು ಮಾತ್ರ ಇರುವ ಈ ಹಾಡು ಯಾವ ಭಾಷೆಗೂ ಸಲ್ಲುವಂಥದ್ದು. ಸತ್ಯ ಹರಿಶ್ಚಂದ್ರ ಚಿತ್ರದ ನಮೋ ಭೂತನಾಥ ಕೂಡ ಇದೇ ತರದ ಯಾವ ಭಾಷೆಗೂ ಸಲ್ಲುವ ಹಾಡು.
ತಿಲಂಗ್ ರಾಗವನ್ನು ಆಧರಿಸಿದ ಈ ಹಾಡಿನ 3 ಚರಣಗಳ ಧಾಟಿ ಹಾಗೂ ನಡುವಿನ interlude music ಒಂದರಂತೆ ಇನ್ನೊಂದಿಲ್ಲದಿರುವುದಷ್ಟೇ ಅಲ್ಲದೆ ಚರಣದಿಂದ ಚರಣಕ್ಕೆ ಸ್ಥಾಯಿ ಏರುತ್ತಾ ಹೋಗುವುದು ಗಮನ ಸೆಳೆಯುತ್ತದೆ. ಈ ನೃತ್ಯಗೀತೆಯನ್ನು ಈಗಿನ ಯುವ ಪೀಳಿಗೆಯವರು ಕೇಳಿರುವ ಸಾಧ್ಯತೆ ಕಮ್ಮಿ. ಪಾಪಿಯ ಜೀವನ ಪಾವನಗೊಳಿಸುವ ಮತ್ತು ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ಆದರ್ಶ ಸತಿಯ ಇನ್ನೆರಡು ಜನಪ್ರಿಯ ಹಾಡುಗಳು.

ಪರಶುರಾಮ್ ರಚಿಸಿ ಸುದರ್ಶನಂ-ಗೋವರ್ಧನ್ ಸಂಗೀತ ನಿರ್ದೇಶನದಲ್ಲಿ ಟಿ.ಎಸ್. ಭಗವತಿ ಹಾಡಿರುವ ಇದು ಚಲನಚಿತ್ರ ಗೀತೆಯಾದರೂ ಇದರ ಸಾಹಿತ್ಯ ಯಾವ ದಾಸವರೇಣ್ಯರ ಕೃತಿಗೂ ಕಮ್ಮಿ ಇಲ್ಲ.
ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ ಹಾಡು ಆಲಿಸಿ.
ಓಂ ನಮೋ ನಮೋ ನಟರಾಜ ನಮೋ
ಹರ ಜಟಾಜೂಟಧರ ಶಂಭೊ
ಓಂ ನಮೋ ನಮೋ ನಟರಾಜ
ನಮೋ ನಮೋ ನಟರಾಜ
ಗಂಗಾ ಗೌರಿ ಹೃದಯವಿಹಾರಿ
ಲೀಲಾ ಕಲ್ಪಿತ ಸಂಸಾರಿ
ಭಳಿರೆ ಭಾಸುರ ಬ್ರಹ್ಮಚಾರಿ
ಭಾವಜ ಮದ ಸಂಹಾರಿ
ಓಂ ನಮೋ ನಮೋ ನಟರಾಜ
ಫಣಿ ಭೂಷ ಭಿಕ್ಷುಕ ವೇಷ
ಈಶ ತ್ರಿಭುವನ ಸಂತೋಷ
ಅಖಿಲ ಚರಾಚರ ಅಮೃತಕಾರಿ
ಹಾಲಾಹಲಗಳಧಾರಿ
ಓಂ ನಮೋ ನಮೋ ನಟರಾಜ
ಮಹಾದೇವ ಜಯ
ಜಯ ಶಿವ ಶಂಕರ
ಜಯ ತ್ರಿಶೂಲಧರ
ಜಯ ಡಮರುಗಧರ
ಹೇ ದೇವಾದಿ ದೇವ ಮಹೇಶ
ಜಯ ಜಯ ಗೌರೀಶ
ಓಂ ನಮೋ ನಮೋ ನಟರಾಜ
ಹಾಡಿನ ವಿಡಿಯೊವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.