20-10-2024ರಂದು ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಗೀತಸಭಾ ಪುರಂದರ ಭವನದಲ್ಲಿ ನಡೆದ ವಿಜಯಭಾಸ್ಕರ್ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಎನ್.ಎಸ್. ಶ್ರೀಧರ ಮೂರ್ತಿಯವರ ಆಗ್ರಹದಂತೆ ಭಾಗವಹಿಸಿದ್ದೆ. ಅದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಇವು.
***********
1962ರಲ್ಲಿ ನಮ್ಮ ಮನೆಗೆ ರೇಡಿಯೋ ಬಂತು. ಗಾಯಕರು, ಗೀತ ರಚನಕಾರರು, ಸಂಗೀತಕಾರರು ಕುಟುಂಬದ ಸದಸ್ಯರಾದರು.
ಶ್ರೀರಾಮ ಪೂಜಾ - 1955 ಭಾಗ್ಯಚಕ್ರ 1956.
ದೇವ ನಿನ್ನ ರಾಜ್ಯದ ನ್ಯಾಯವಿದೇನಾ - ಘಂಟಸಾಲ - ಆ ಮೇಲೆ ಬಳಸಲಿಲ್ಲ.
ಎ.ಎಮ್. ರಾಜ, ಬಾಲಸರಸ್ವತಿ, ಜಿಕ್ಕಿ , ಸುಶೀಲಾ ಇತ್ಯಾದಿ. ಈ ಹಾಡುಗಳು ರೇಡಿಯೊದಲ್ಲಿ ಬರ್ತಿರ್ಲಿಲ್ಲ.
1960- ರಾಣಿ ಹೊನ್ನಮ್ಮ
ಕೋಲು ಹೆಜ್ಜೆ ಕಾಲು ಗೆಜ್ಜೆ ತಂದನಾನ - ಜಾನಕಿ
ಹಾರುತ ದೂರ ದೂರ - PBS, P. ಸುಶೀಲಾ ಮೊದಲ duet.
ಹಾಡಿನ ಆರ್ಕೆಸ್ಟ್ರೇಶನ್‌ನಲ್ಲಿ ಶಂಕರ್ ಜೈಕಿಶನ್ ಅವರ ಹಲಾಕೂ ಛಾಯೆ. ಪಿಯಾನೋ, Dulcitone, ಚೇಲೊ, ವಯಲಿನ್ಸ್, ತಬ್ಲಾ ತರಂಗ್. Massive orchestra. -
ಜಿ.ಕೆ. ವೆಂಕಟೇಶ್ ಅವರ ತುಂಬಿದ ಕೊಡದ ಪಿಕ್ನಿಕ್ ಹಾಡಲ್ಲಿ ಬಳಕೆ. ಇತ್ತೀಚೆಗೆ ಕೆಲವರು ಈ ಟ್ಯೂನ್ ಜಿ.ಕೆ. ವೆಂಕಟೇಶ್ ಅವರದ್ದೇ ಎಂದು ಹೇಳತೊಡಗಿದರು. ಆದರೆ medleyಗಳಲ್ಲಿ ಇತರ ಸಂಗಿತ ನಿರ್ದೇಶಕರ ಪ್ರಸಿದ್ಧ ಹಾಡುಗಳನ್ನು ಬಳಸುವುದು ಸಾಮಾನ್ಯ.
ಈ ಜೀವನ ಹೂವಿನ ಹಾಸಿಗೆ - ಪಿ.ಬಿ.ಎಸ್, ಎ.ಪಿ. ಕೋಮಲ - ನೌಷಾದ್ ಶೈಲಿ.
ಹಿಂದಿಯಿಂದ ಡಬ್ ಆದ 3 ಚಿತ್ರಗಳಿಗೆ ಸಂಗೀತ.
1961 -
ಜ಼ಿಂಬೊ ನಗರ ಪ್ರವೇಶ -ಚಿತ್ರಗುಪ್ತ
ಸಖ ಕಾಣು ಪ್ರಕಾಶದಲಿಂದೆ - ಸುಶೀಲ - ಇತ್‌ನಾ ತೊ ಬತಾದೇ ಏ ದಿಲ್
ಕಡು ಪ್ರೀತಿಯೆ ಮಾನ್ಯ ಒಂಕಾರ - ಸುಶೀಲ - ಯೆ ತೊ ಪ್ಯಾರ್ ಭರಿ ದುನಿಯಾ ಹೈ
ಕಣ್ಣ ನೋಟ ಭಾಷೆ ಇಂಪಾಗಿದೆ - ಪಿ.ಬಿ.ಎಸ್ - ನಜ಼್‌ರೊನೆ ಮಾರಾ
ವೀರ ಜ಼ಬಕ್ -ಚಿತ್ರಗುಪ್ತ
ಎನ್ನ ಸುಖ ಆಗಿ ಶೂಲ ನಿನ್ನ ಲೋಕ ಪ್ರತಿಕೂಲ ನಮ್ಮ ಹಾದಿ ಕಠಿಣ - ಎ. ಎಮ್ ರಾಜ, ಸುಶೀಲ.
ಉಲ್ಲಾಸದ ಛಾಯೆ ಕಂಡೆ ಸಖ - ಜಿಕ್ಕಿ
.
1962
ಸಂಪೂರ್ಣ ರಾಮಾಯಣ - ವಸಂತ ದೇಸಾಯಿ.
ಕನ್ನಡದಲ್ಲಿ ಮೊದಲ ಸಂಪೂರ್ಣ ವರ್ಣರಂಜಿತ ಚಿತ್ರ. ತೆರೆಯ ಮೇಲೆ ಬಣ್ಣದಲ್ಲಿ ಕಂಡ ಮೊದಲ ಹೆಸರು ವಿಜಯಭಾಸ್ಕರ್.
ಪ್ರಿಯ ಜೀವನದ ಪರ್ಣಕುಟಿಯೊಳ್ - ಸುಶೀಲ.
ಮಂದ ಮಂದ ಮನದೆ ಮನೋಲ್ಲಾಸ ಮೋಹ - ಈಶ್ವರಿ - - ಬಾರ್ ಬಾರ್ ಬಗಿಯಾ ಮೆಂ. ಶೂರ್ಪನಖಿ(ಹೆಲನ್) ಹಾಡಿದ ಈ ಹಾಡು ಈಗ ಎಲ್ಲೂ ಸಿಗುತ್ತಿಲ್ಲ.
PBS & chorus ತೋರೈ ಸನ್ಮಾರ್ಗ ಶ್ರೀ ರಾಮನೆ - ರಾಮನಾ ಗುಣ ಹಾಡಿ -
ಮನೆಯವರೆಲ್ಲರೂ ವರ್ಣರಂಜಿತ ಸಂಪೂರ್ಣ ರಾಮಾಯಣ ನೋಡಲು ಮಂಗಳೂರಿಗೆ ಹೋದದ್ದು.
1963
ಸಂತ ತುಕಾರಾಂ.
36ರ ಪ್ರತಿಬಿಂಬ 63
1936ರಲ್ಲಿ ಪ್ರಭಾತ್ ಕಂಪನಿ ನಿರ್ಮಿಸಿದ್ದ ಅದೇ ಹೆಸರಿನ ಮರಾಠಿ ಸಿನಿಮಾವನ್ನು ಆಧರಿಸಿ ತಯಾರಾಗಿತ್ತು.ಎಂಥ ಕರುಣಾನಿಧಿಯೋ, ಸದಾ ಕಣ್ಣ ಮುಂದೆ, ಆದಿ ಬೀಜ ಒಂದೆನೇ, ಹೊರಟೆ ಸೇರೆ ನಮ್ಮ ಊರ – ಮರಾಠಿ ಟ್ಯೂನ್.
ಅಮೃತಕ್ಕು ತಾ ರುಚಿ – ಅಮೃತಾಹುನೀ ಗೋಡ ಮರಾಠಿಯ ಪ್ರಸಿದ್ಧ ಗಾಯಕಿ ಮಾಣಿಕ್ ವರ್ಮಾ ಹಾಡಿದ ಸಂತ ನಾಮದೇವರ ಈ ರಚನೆಯನ್ನು ತುಕಾರಾಮರ ಅಭಂಗವಾಗಿ ಕನ್ನಡೀಕರಿಸಲಾಯಿತು.
ಹೇ ಪಂಢರಯ್ಯ - 1942ರ ಕಿಸ್ಮತ್ ಚಿತ್ರದಲ್ಲಿ ಕನ್ನಡದವರೇ ಆದ ಅಮೀರ್ ಬಾಯಿ ಕರ್ನಾಟಕಿ ಧ್ವನಿಯಲ್ಲಿದ್ದ ತೇರೆ ಸಿವಾ ಕೌನ್ ಮೇರಾ ಕೃಷ್ಣ್ ಕನ್ಹಯ್ಯಾ
ಜಯತು ಜಯ -
ಸ್ವಂತ ಕಂಪೋಸಿಶನ್. ಮರಾಠಿಯಲ್ಲಿ ಇಲ್ಲ.
ಪೀಠಾಪುರಂ, ರಾಮದಾಸ್ ಮತ್ತು ಭೋಜ ರಾವ್ ಧ್ವನಿಯಲ್ಲಿರುವ ಕಾಪಿ ರಾಗಾಧಾರಿತ ವರ್ಷನ್.
ಕನ್ನಡದ ಮನ್ನಾಡೆ. ಶಂಕರ್ ಜೈಕಿಶನ್ – ಹಾಸ್ಯಕ್ಕೆ ಶಾಸ್ತ್ರೀಯ. ಅಮರಜೀವಿ(ಹಳ್ಳಿ ಹುಡುಗಿ) ಸುಬ್ಬ ಬಂದ ಹಬ್ಬ ತಂದ.
ಬೇಡ ಕೃಷ್ಣ, ಏಳಯ್ಯ ಮನಮೋಹನ, ಕಣ್ಸನ್ನೆ ಗೈದ, ಪತಿವ್ರತೆ ಕುರುಡಳು (ದಕ್ಷಿಣಾದಿ ಶೈಲಿ - ಆರಭಿ), ಹೇ ಪಾಂಡುರಂಗ ಇವೆಲ್ಲ ಸ್ವಂತ ಧಾಟಿಗಳು.
ಕಣ್ಸನ್ನೆ ಗೈದ – ಢೋಲಕಿ ಬಳಕೆ – ಆ ಮೇಲೆ ದೂರದ ಬೆಟ್ಟ.
ಮನ ಮೆಚ್ಚಿದ ಮಡದಿ -
ತುಟಿಯ ಮೇಲೆ jumping notes - ಸಲಿಲ್ ಚೌಧರಿ, ಹೊ-ಸ-ಬ-ಗೆ. ಎದೆಯ ಬೇಸಗೆ.
ಸಿರಿತನ ಬೇಕೆ – ಚರಣ ಎಲ್ಲಿಂದ ಎತ್ತುಗಡೆ ಎಂದು ತಿಳಿಯುವುದಿಲ್ಲ. ಶ್ರುತಿ ಭೇದ. interludeನಲ್ಲಿ ವಿಶೇಷತೆ.
ಲವ್ ಲವ್ ಎಂದರೇನು – ಬಾಲಣ್ಣ ಮರಸುತ್ತಿ ಹಾಡಿದ ಏಕೈಕ ಡ್ಯುಯಟ್.ಜಮುನಾರಾಣಿಯೊಡನೆ ಚಿತ್ರದಲ್ಲಿ ಪಿ.ಬಿ.ಎಸ್. ರೆಕಾರ್ಡಲ್ಲಿ ರಘುನಾಥ ಪಾಣಿಗ್ರಾಹಿ. ಪದ್ಯಾವಳಿಯಲ್ಲೂ ಪಾಣಿಗ್ರಾಹಿ ಹೆಸರೇ ಇದೆ. ಪೋಸ್ಟ್ ಮಾಸ್ಟರ್ ಚಿತ್ರದಲ್ಲಿ ಎರಡು ರೆಂಬೆಯ ನಡುವೆ ಬೆಳೆದ ಹಾಡಿಸಿದರು.
3 ಚಿತ್ರ 3 ವಿಧ
ಜಾನಪದ, ಭಕ್ತಿಪ್ರಧಾನ, ಸಾಮಾಜಿಕ. ಆದರೆ ಆ ಮೇಲಿನವು ಎಲ್ಲ ಸಾಮಾಜಿಕ.
ರಾಗಗಳು.
ಸಿನಿಮಾ ಸಂಗೀತಕ್ಕೆ ಪುಸ್ತಕವೂ ಇಲ್ಲ, ಶಾಸ್ತ್ರವೂ ಇಲ್ಲ. ಆದರೆ ಮೊದಲು ಅರಿಯಬೇಕು, ನಂತರ ಮುರಿಯಬೇಕು ಎಂದು ವಿಜಯ ಭಾಸ್ಕರ್ ಹೇಳುತ್ತಿದ್ದರಂತೆ. ಒಟ್ಟಿನಲ್ಲಿ ಅಪಸ್ವರ ಬರಬಾರದು.
ಪಾಶ್ಚಾತ್ಯ - ಸ್ವರಮೇಳ.
ಭಾರತೀಯ - ನಾದಮೇಳ. ಎರಡರ ಮೇಳವೇ ಸಿನಿಮಾ ಸಂಗೀತ.
ಸಾಮಾನ್ಯ ಸಿನಿಮಾ ಹಾಡುಗಳು ನಿರ್ದಿಷ್ಟ ರಾಗಕ್ಕೆ ಬದ್ಧ ಆಗಿರುವುದಿಲ್ಲ. ಸಂಗೀತ ನಿರ್ದೇಶಕರು ಹಾಗೆ claim ಮಾಡಿರುವುದೂ ಇಲ್ಲ. ನಾವು ಕೂಡ ಇಂಥ ರಾಗದ ಸ್ವರಗಳು ಬಳಕೆಯಾಗಿವೆ ಅಥವಾ ಇಂಥ ರಾಗದ ಛಾಯೆ ಇದೆ ಎಂದುಕೊಳ್ಳುವುದು ಸೂಕ್ತ.
ಸ್ವರಗಳಿಂದಷ್ಟೇ ರಾಗ ಆಗುವುದಿಲ್ಲ. ಚಲನೆ, ಫ್ರೇಸ್‌ಗಳು ಮುಖ್ಯ ಪಾತ್ರ ವಹಿಸುತ್ತವೆ.
ಭೂಪ್ (ಮೋಹನ) ಮತ್ತು ದೇಶ್‌ಕಾರ್ ಎರಡರಲ್ಲೂ ಸರಿಗಪದಸ. ಕೆಲವೊಮ್ಮೆ ಪಹಾಡಿಯೂ ಆಗಬಹುದು.
ಅಭೇರಿ, ದೇವಗಾಂಧಾರಿ, ಧನಾಶ್ರೀ ಅವೇ ಸ್ವರಗಳು.
ಶಂಕರ್ ಜೈಕಿಶನ್ ಅವರ ಹೆಚ್ಚಿನ ಹಾಡುಗಳು ಭೈರವಿ ಸ್ವರಗಳನ್ನು ಹೊಂದಿರುತ್ತಿದ್ದವು. ಆದರೂ ಒಂದರಂತೆ ಇನ್ನೊಂದು ಇರುತ್ತಿರಲಿಲ್ಲ.
ವಿಜಯಭಾಸ್ಕರ್ ಕೂಡ ಇಂಥ ತಂತ್ರಗಳಲ್ಲಿ ನಿಪುಣರಾಗಿದ್ದರು.
ಪಂಚಮ ವೇದ - ಗಗನವು ಎಲ್ಲೋ - ಎರಡರಲ್ಲೂ ಅಭೇರಿ ಸ್ವರಗಳು. ಆದರೂ ಭಿನ್ನ.
ಪಂಚಮ ವೇದದಲ್ಲಿ ಹೆಚ್ಚುವರಿಯಾಗಿ ದ1 ಇದೆ. ಗಗನವು ಎಲ್ಲೋದಲ್ಲಿ ಧೈವತವೇ ಇಲ್ಲ.
ಪಂಚಮ ವೇದ ಪ ಸ್ವರದಿಂದಲೇ ಆರಂಭ. ಸರಿಗಮ ಅಕ್ಷರಗಳ ಸ್ವರಸ್ಥಾನಗಳೂ ಸರಿಗಮವೇ.
ಅಂತರರಾಷ್ಟ್ರೀಯ ಉತ್ಸವಕ್ಕೆ ಕಳಿಸುವಾಗ ಪಿ.ಬಿ.ಎಸ್ ವರ್ಶನ್ ಉಳಿಸಿಕೊಳ್ಳಲಾಗಿತ್ತು.
ಗಗನವು ಎಲ್ಲೋ - ಕಾಂಟೋ ಸೆ ಖೀಂಚ್ ಕೆ ಉಲ್ಲಾಸ ಮತ್ತು ಪಂಖ್ ಹೋತೆ ತೊ ಉಡ್ ಆತೀರೆ ಲಯದ ಸ್ಪೂರ್ತಿ.
ಇದನ್ನು ಯಕ್ಷಗಾನವೊಂದರಲ್ಲಿ ಬಳಸಲಾಗಿದೆ.
ಒಂದು ದಿನ ರಾತ್ರಿಯಲಿ ಹಾಡು ಬಳಸಿಲ್ಲ. ಕಣ್ಣು ಮುಚ್ಚಿದ್ರೆ ದೃಶ್ಯ ಕಾಣಿಸುತ್ತದೆ.
ನಿನಗಿಂತ ನಿನ್ನ ನೆನಪೇ ಚಂದ. ಸೀತಾ – ತಾರೀಫ್ ಕರೂಂ. ಚೆಲುವನು ಕಡೆದ.
ಸ್ವರಗಳ ಹೆಸರಿನ ಬದಲು ಸಂಖ್ಯೆ
ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿಯಲ್ಲಿ ಸ್ವರಗಳ ನಾಮಕರಣ ಭಿನ್ನ.
ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಧೈವತ, ಶುದ್ಧ ನಿಷಾದಗಳು ಎರಡು ಪದ್ಧತಿಗಳಲ್ಲಿ ಬೇರೆ ಬೇರೆ ಸ್ವರಗಳನ್ನು ಸೂಚಿಸುತ್ತವೆ. ಇತರ ಸ್ವರಗಳ ಹೆಸರುಗಳಲ್ಲೂ ವ್ಯತ್ಯಾಸ ಇದೆ.
ಪಂಚಮ ವೇದದಲ್ಲಿ ಹೆಚ್ಚುವರಿಯಾಗಿ ಬಳಕೆಯಾದ ದ1 ಅಂದರೆ ಕರ್ನಾಟಕ ಶೈಲಿಯಲ್ಲಿ ಶುದ್ಧ ಧೈವತ, ಹಿಂದುಸ್ತಾನಿಯಲ್ಲಿ ಕೋಮಲ ಧೈವತ.
ಹೀಗಾಗಿ ಗೊಂದಲ ಆಗದಂತಿರಲು ಸ್ವರದ ಸಂಖ್ಯೆಯನ್ನು ಬಳಸುವುದು ಸುಲಭೋಪಾಯ.
ಇದು ನೆನಪಿಟ್ಟುಕೊಳ್ಳಲೂ ಸುಲಭ.
ಸ ಮತ್ತು ಪ ಸ್ವರಗಳಿಗೆ ಸಂಖ್ಯೆ ಇಲ್ಲ.
ಗ ಮತ್ತು ನಿ (ಗನಿ) ಗಳಲ್ಲಿ 2 ಅಂದರೆ ಕೆಳಗಿನ ಸ್ವರ, 3 ಅಂದರೆ ಮೇಲಿನ ಸ್ವರ.
ಉಳಿದ ರಿ, ಮ, ದ ಸ್ವರಗಳಲ್ಲಿ 1 ಕೆಳಗಿನ ಸ್ವರ, 2 ಮೇಲಿನ ಸ್ವರ.
ಹಿಂದುಸ್ತಾನಿಯಲ್ಲೂ ಸುಲಭವೇ.
ಮ ಮಾತ್ರ ಶುದ್ಧ ಮತ್ತು ತೀವ್ರ. ಉಳಿದವು ಕೋಮಲ ಮತ್ತು ಶುದ್ಧ.
(ಸಪ್ತಸ್ವರಗಳ ಸುತ್ತ ಲೇಖನ ಓದಿ).
ಸಿನಿಮಾ ಹಾಡುಗಳ ರಾಗಗಳ ಬಗೆ ಹೆಚ್ಚು ಯೋಚಿಸದೆ ಆಸ್ವಾದಿಸುವುದು ಹೆಚ್ಚು ಆನಂದದಾಯಕ.
ಪ್ರಥಮಗಳು.
PBS – P. ಸುಶೀಲಾ 1st duet.
PBS – SPB 1st duet – ಹಗಲೇನು ಇರುಳೇನು – ಭಾಗ್ಯದ ಬಾಗಿಲು.
PBS- ಜೇಸುದಾಸ್ – ಏಕೈಕ – ಕಾಣದ ದೇವರು. ಸುವರ್ಣ ಭೂಮಿ. Duet 2 ವರ್ಷನ್. ಜೇಸುದಾಸ್ ಅನೇಕ ವರ್ಷಗಳ ನಂತರ ಮಲಯ ಮಾರುತ.
ಭಾಂಗ್ಡಾ – ಸಿರಿಗನ್ನಡ ನಾಡು.
ಫೈಟಿಂಗ್ ಹಾಡು - ಹಸುವಿನ ವೇಷದ - ಭೂಪತಿ ರಂಗ - ಜೈಸೆ ಕೊ ತೈಸಾ ಮಿಲಾ.
ಬಾಹ್ಯ ಪ್ರೇರಣೆ - ಮಕರಂದದಿಂದ ಜೇನು.
ತೂಗು ದೀಪ ಚಿತ್ರದ ಹಾಡು ಮೌನವೇ ಆಭರಣದ ಮೊದಲ ಸಾಲು ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಆಂಖೊಂ ಸೆ ಜೊ ಉತ್‌ರೀ ಹೈ ದಿಲ್ ಮೆ ಹಾಡಿನ ಆಲಾಪದಿಂದ ಪ್ರೇರಿತ.
ಪಿ.ಬಿ.ಎಸ್ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡ ನಿಮ್ಮ ಮುದ್ದಿನ ಕಂದ ನಾವು - ಬೂಟ್ ಪಾಲಿಶ್ ಚಿತ್ರದ ತುಮ್ಹಾರೆ ಹೈಂ ತುಮ್ ಸೆ ದಯಾ ಮಾಂಗ್‌ತೇ ಹೈಂ ಪ್ರಭಾವ. ಮೀಸೆ ಕಥೆ.
ಭಾಗ್ಯಜ್ಯೋತಿ ಚಿತ್ರದಲ್ಲಿ ಪಿ.ಬಿ.ಎಸ್ , ವಾಣಿ ಜಯರಾಮ್ ಜೊತೆ ವಿಜಯಭಾಸ್ಕರ್ ಕೂಡ ಕಾಣಿಸಿಕೊಂಡಿದ್ದಾರೆ.
ಹೃದಯ ಸಂಗಮ ಚಿತ್ರದ ನಡೆ ನಡೆ ನಡೆ ಮನವೆ ಹಾಡಿನ ಚರಣದಲ್ಲಿ ಪ್ರತಿ ಸಾಲಿನ ನಂತರ ಆರಾಧನಾದ ಮೇರೆ ಸಪ್‌ನೊಂ ಕೀ ರಾನಿಯ ಚರಣದಲ್ಲಿದ್ದಂತೆ ಜಂಜ ಜಂಜಜಂ ಎಂದು ಗಿಟಾರ್ ನುಡಿಯುತ್ತದೆ.
ಬಾರೇ ಬಾರೇ - ಕ್ಲಿಫ್ ರಿಚಾರ್ಡ್ ಅವರ ಎವರ್ ಗ್ರೀನ್ ಟ್ರೀ ಎಂಬ ಪಾಶ್ಚಾತ್ಯ ರಚನೆಯ ಸ್ಪೂರ್ತಿಯಿಂದ ಜನ್ಮ ತಾಳಿದ್ದು. ಅದರ ಸಾ ಪನಿ ಸಾಪಾಸಾ ಸಾ ಪಮ ಪಸಾ ಎಂಬ ಒಂದು ತುಣುಕಿನ ತಳಪಾಯದ ಮೇಲೆ ಸೌಧ. Tissue culture. ಹೆಚ್ಚುವರಿಯಾಗಿ ದ1 ಬಳಸಿದ ಅಭೇರಿ ಸ್ವರಗಳಾದರೂ ಗಮಕ, ಮುರ್ಕಿಗಳಿಲ್ಲದ ನೇರ noteಗಳ ಪಹಾಡಿ ಛಾಯೆ.
ಬೆಟ್ಟಗುಡ್ಡಗಳ ಅನುಭವ ನೀಡುವ ರಷ್ಯಾ ಮೂಲದ Zhaleika ಎಂಬ ವಾದ್ಯ. ತುಮ್ ಅಗರ್ ಸಾಥ್ ದೇನೆ ಕಾ, ಏಕ್ ಥಾ ಗುಲ್. ಆ ಮೇಲೆ ನಾವಾಡುವ ನುಡಿಯೇ. ಯುವವಾಣಿಯ signature tune.
ರಂಗೇನ ಹಳ್ಳಿಯಾಗೆ - ಸಾವನ್ ಕಾ ಮಹೀನಾ - ಶೋರ್ ನಹೀಂ ಸೋರ್.
ಚೆಲುವನು ಕಡೆದ – ತಾರೀಫ್ ಕರೂಂ.
ತನ್ನದೇ ರೀ ಸೈಕ್ಲಿಂಗ್.
ಕಮಲದ ಹೂವಿಂದ - ಬಾಳು ಬೆಳಗಿತು . ಮದುವೆಯ ಈ ಬಂಧ - ಸೀತಾ. ತೂಗುದೀಪವಿದು ಹಾಡಿನ interlude ತುಣುಕು ಹಾವಿನ ದ್ವೇಷದಲ್ಲಿ ಬಳಕೆ.
ಹಿಂದಿ interludeಗಳನ್ನು ತನ್ನ ಹಾಡುಗಳಲ್ಲಿ ಬಳಸುವ ವಿಶಿಷ್ಟ ಹವ್ಯಾಸ ಅವರಿಗಿತ್ತು.
1. ಮನ ಮೆಚ್ಚಿದ ಮಡದಿಯ ಸಿರಿತನ ಬೇಕೆ - ದಿಲ್ ದೇಕೆ ದೇಖೊ ಚಿತ್ರದ ಮೇಘಾರೆ ಬೋಲೆ - ಉಷಾ ಖನ್ನಾ.
2. ಪ್ರೇಮಕ್ಕೂ ಪಮಿಟ್ಟೇ ಚಿತ್ರದ ಕೆಂಪು ರೋಜಾ ಮೊಗದವಳೆ - ಜಾನ್‌ವರ್‌ನ ತುಮ್ ಸೆ ಅಚ್ಛಾ ಕೌನ್ ಹೈ - ಶಂಕರ್ ಜೈಕಿಶನ್.
3. ಸಿಗ್ನಲ್ ಮ್ಯಾನ್ ಸಿದ್ದಪ್ಪದ ಶ್ರೀ ಮಂಜುನಾಥೇಶ್ವರ - ಎಪ್ರಿಲ್ ಫೂಲ್ ಚಿತ್ರದ ಟೈಟಲ್ ಹಾಡು - ಶಂಕರ್ ಜೈಕಿಶನ್.
4. ಸೀತಾ ಚಿತ್ರದ ಬರೆದೆ ನೀನು - ಬ್ರಹ್ಮಚಾರಿಯ ದಿಲ್ ಕೆ ಝರೋಕೆ ಮೆ ಹಾಡಿನ ಕೋರಸ್ - ಶಂಕರ್ ಜೈಕಿಶನ್.
5. ನಮ್ಮ ಮಕ್ಕಳು ಚಿತ್ರದ ತಾರೆಗಳ ತೊಟದಿಂದ - ಸಂಗಂ ಚಿತ್ರದ ಯೆ ಮೇರಾ ಪ್ರೇಮ್ ಪತ್ರ್ - ಶಂಕರ್ ಜೈಕಿಶನ್.
6. ಬೆಳ್ಳಿಮೋಡದ ಒಡೆಯಿತು ಒಲವಿನ ಕನ್ನಡಿ - ತೀಸ್ರೀ ಕಸಂನ ದುನಿಯಾ ಬನಾನೆವಾಲೆ - ಶಂಕರ್ ಜೈಕಿಶನ್.
7. ತುಳಸಿ ಚಿತ್ರದ ಶ್ರೀ ತುಳಸಿ ದಯೆ ತೋರಮ್ಮಾ - ಸಂತ್ ಜ್ಞಾನೇಶ್ವರ್ ಚಿತ್ರದ ಜ್ಯೋತ್ ಸೆ ಜ್ಯೋತ್ - ಲಕ್ಷ್ಮಿ ಪ್ಯಾರೆ.
8. ಲಕ್ಷ್ಮೀ ಸರಸ್ವತಿ ಚಿತ್ರದ ಚಂದಿರ ಭೂಮಿಗೆ - ಸರಸ್ವತಿ ಚಂದ್ರದ ಫೂಲ್ ತುಮ್ಹೆ ಭೇಜಾ - ಕಲ್ಯಾಣಜೀ ಆನಂದಜೀ.
9. ಉಯ್ಯಾಲೆಯ ನಗುತ ಹಾಡಲೆ - ಖಾನ್‌ದಾನ್ ಚಿತ್ರದ ತುಮ್ಹೀ ಮೇರೆ ಮಂದಿರ್ - ರವಿ.
10. ತುಳು ಕೋಟಿ ಚೆನ್ನಯದ ಕೆಮ್ಮಲೆತ ಬ್ರಹ್ಮ - ಮಧುಮತಿಯ ಟೂಟೆ ಹುವೆ ಖ್ವಾಬೋನೆ - ಸಲಿಲ್ ಚೌಧರಿ.
11. ಸುವರ್ಣ ಭೂಮಿ ಚಿತ್ರದ ಭಲೇ ಸಂಚುಗಾರ - ಸಿಳ್ಳೆಯ ಬಳಕೆ - ಬಾತ್ ಏಕ್ ರಾತ್ ಕೀ ಚಿತ್ರದ ನ ತುಮ್ ಹಮೆ ಜಾನೊ -ಎಸ್.ಡಿ. ಬರ್ಮನ್.
ಶಂಕರ್ ಜೈಕಿಶನ್ - 5
ಇದಲ್ಲದೆ ಆಯಿ ಮಿಲನ್ ಕಿ ಬೇಲಾದ ತುಮ್ ಕಮ್ ಸಿನ್ ಹೋ ಮತ್ತು ಪ್ರೊಫೆಸರ್ ಚಿತ್ರದ ಏ ಗುಲ್‌ಬದನ್ ಹಾಡಿನ interludeಗಳನ್ನು ಜೋಡಿಸಿ ಬೆಳ್ಳಿಮೋಡದ ಮೂಡಲ ಮನೆಯ ಹಾಡಿಗಿಂತ ಮೊದಲಿನ ದೃಶ್ಯದಲ್ಲಿ ಹಿನ್ನೆಲೆ ಸಂಗೀತವಾಗಿ ಬಳಸಿದ್ದಾರೆ.
ರೀ ಮೇಕ್ ಚಿತ್ರಗಳಲ್ಲಿ ಸ್ವಂತಿಕೆ.
ಪತಿಯೇ ದೈವ - ಘರಾನಾ, ಬೆರೆತ ಜೀವ - ಪಾಲುಂ ಪಳಮುಂ, ಮಕ್ಕಳ ಭಾಗ್ಯ - ದೋ ಕಲಿಯಾಂ, ದಿಲ್ ಏಕ್ ಮಂದಿರ್ - ಕುಂಕುಮ ರಕ್ಷೆ, ಚಿರಂಜೀವಿ - ಅನುರಾಗ್ ಮುಂತಾದವುಗಳಲ್ಲಿ ‘ನನ್ನ ಧಾಟಿಯ ನೀನರಿಯೆ, ನನ್ನ ಹಾಡೇ ಬೇರೆ’
ಅನ್ನುತ್ತಾ ಮೂಲದ ಘಾಟೂ ಹೊಡೆಯದ ಸ್ವಂತಿಕೆ.
ಪತಿಯೇ ದೈವದ ಕೋಪವೇಕೆ ಅಜ್ಜಿ ಹಾಡಿಗೆ ಧಾಟಿ ಬೇರೆ ಆದರೂ ದಾದಿಯಮ್ಮಾ ಹಾಡಿನದ್ದೇ ಮೀಟರ್.
24 ಟೈಟಲ್ ಸಾಂಗ್ಸ್.
ಮನ ಮೆಚ್ಚಿದ ಮಡದಿ.
ಬೆರೆತ ಜೀವ (2)
ತೂಗುದೀಪ
ಅರಸಿನ ಕುಂಕುಮ
ಬೆಳ್ಳಿಮೋಡ (2)
ಪ್ರೇಮಕ್ಕೂ ಪರ್ಮಿಟ್ಟೇ
ವೃಂದಾವನ
ಉಯ್ಯಾಲೆ
ಅರಿಶಿನ ಕುಂಕುಮ
ಭೂಪತಿ ರಂಗ
ಗೆಜ್ಜೆಪೂಜೆ
ಶರಪಂಜರ
ನಾ ಮೆಚ್ಚಿದ ಹುಡುಗ
ಬಿಳಿ ಹೆಂಡ್ತಿ
ಶುಭಮಂಗಳ
ಬೆಸುಗೆ
ತುಳಸಿ
ಬನಶಂಕರಿ
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
ಪ್ರೀತಿಸಿ ನೋಡು
ಮಾನಸ ಸರೋವರ
ಮಸಣದ ಹೂ
ಮಲಯಮಾರುತ
ಕಥನ ಗೀತೆ
ಗೂಡಲ್ಲಿ ತಾಯ್ ಹಕ್ಕಿ, ಭಲೆ ಖುಶಿ ತಮಾಷೆ ಮಾತಿದು, ಕನ್ನಡ ನಾಡಿನ, ಕಥೆ ಹೇಳುವೆ, ರಂಗೇನ ಹಳ್ಳಿಯಾಗೆ, ಕೋಟಿ ಚೆನ್ನಯ.
1970ರಲ್ಲಿ ಅತೀ ಹೆಚ್ಚು – 9 ಚಿತ್ರ.
ನನ್ನ ಜ್ಞಾನ 1980ರ ದಶಕದ ವರೆಗಿನ ಕಾಲಕ್ಕೆ ಸೀಮಿತ.
ವಿಜಯಭಾಸ್ಕರ್ ಪ್ರಯೋಗಪ್ರಿಯರು.
ಸಾಮಾನ್ಯ ಕೇಳುಗನನ್ನು ಅವರ ಕಾರ್ಯಕ್ರಮದಲ್ಲಿ ತಂದು ನಿಲ್ಲಿಸಿದ್ದು ಶ್ರೀಧರಮೂರ್ತಿಯವರು ಮಾಡಿದ ಪ್ರಯೋಗ.
*********
ಅಲ್ಲಿ ನನ್ನ ವಿಚಾರಗಳನ್ನು ಮಂಡಿಸಲು ಬಹಳ ಸೀಮಿತ ಸಮಯ ಲಭ್ಯವಾದುದರಿಂದ ಕೆಂಪು ನಿಶಾನಿ ವರೆಗಿನ portion ಅಷ್ಟೇ ಕವರ್ ಮಾಡಲು ಸಾಧ್ಯ ಆದದ್ದು. ಆದರೆ ಅಷ್ಟಕ್ಕೇ ಅಲ್ಲಿದ್ದವರೆಲ್ಲ ಮಂತ್ರಮುಗ್ಧರಾಗಿ ಹೋಗಿದ್ದರು. ಮರುದಿನದ ಪ್ರಜಾವಾಣಿ ಪತ್ರಿಕೆಯಲ್ಲಿ ಆ ಸಮಾರಂಭದ ಕೇಂದ್ರಬಿಂದುವೇ ನಾನೇನೋ ಎಂಬಂತೆ ಚಿತ್ರ ಸಹಿತ ವರದಿಯೂ ಪ್ರಕಟವಾಗಿತ್ತು!.
ನಾನು ಅಲ್ಲಿ ಹೇಳದೇ ಉಳಿದದ್ದು ಆಸಕ್ತರ ಗಮನಕ್ಕೆ ಬರಲಿ ಎಂದು ಇಲ್ಲಿ ದಾಖಲಿಸಿದ್ದೇನೆ.
- ಚಿದಂಬರ ಕಾಕತ್ಕರ್.

ನೀವು ಇಷ್ಟು ಅಧ್ಯಯನ ಮಾಡಿದ್ದು ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ನಿಜವಾಗಿ ಇಂಥದೊಂದು ಅಧ್ಯಯನಕ್ಕೆ ಡಾಕ್ಟರೇಟ್ ಪಡೆಯುವ ಎಲ್ಲ ಅರ್ಹತೆಯೂ ಇದೆ.
ReplyDeleteವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಡಾಕ್ಟರೇಟ್ ನೀಡಲು ಮಂಡಿಸುವ ಕೆಲವು ಪ್ರಂಬಂಧಗಳನ್ನು ನಾನು ಕಣ್ಣಾಡಿಸಿರುವೆ. ಅವುಗಳಲ್ಲಿ ಅನೇಕ ಪ್ರಬಂಧಗಳು (ಡಾಕ್ಟರೇಟ್‌ಗೆ ಆಯ್ಕೆಯಾದವು!)ನಿಮ್ಮ ಟಿಪ್ಪಣಿಗಳಿಗಿಂತ ಪೇಲವ ಎನ್ನಿಸುತ್ತದೆ.
ವಿ. ವಿ. ಗಳು ನೀಡುವ ಗೌ. ಡಾಗಳ ಕಥೆಯಂತೂ ನಿಮಗೆ ಗೊತ್ತೇ ಇದೆ ಬಿಡಿ.
ಒಟ್ಟಿನಲ್ಲಿ ಅರ್ಹತೆಗೆ ಬೆಲೆಯಿಲ್ಲ ಎಂಬುದು ಸುಳ್ಳಲ್ಲ. ನಿಮಗೆ ವಿಜಯಭಾಸ್ಕರ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾದದ್ದೇ ಒಂದು ಸುಕೃತ ಎಂದುಕೊಂಡು ನಮ್ಮಂಥವರು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.
Anantharaja Melanta (FB)