ಮಾಹಿತಿಯ ಹುಡುಕಾಟ, email, storage, backup ಇತ್ಯಾದಿಗಳಿಗಾಗಿ ಗೂಗಲನ್ನು ಅನೇಕರು ಬಳಸುತ್ತಾರೆ. ಆದರೆ ಉಚಿತವಾಗಿಯೇ ದೊರಕುವ google sheets ಸೌಲಭ್ಯವನ್ನು ಉಪಯೋಗಿಸುವವರು ಕಮ್ಮಿ.
MS Excel ಗೊತ್ತಿದ್ದವರಿಗೆ ಇದರ ಬಳಕೆ ಬಲು ಸುಲಭವಾದರೂ ಇತರರು ಕೂಡ ಹೆಚ್ಚು ಕಷ್ಟವಿಲ್ಲದೆ ಸರಳ ಲೆಕ್ಕಾಚಾರಗಳಿಗೆ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ದಿನಾ ತರುವ ಹಾಲಿನ ಲೆಕ್ಕವನ್ನು ನೋಟ್ ಬುಕ್ಕಲ್ಲಿ ಬರೆದಿಟ್ಟು ತಿಂಗಳಿಗೊಮ್ಮೆ ಚುಕ್ತಾ ಮಾಡುವವರು ಅನೇಕರಿರುತ್ತಾರೆ. ಮೊಬೈಲಲ್ಲಿ google sheets ಇನ್ಸ್ಟಾಲ್ ಮಾಡಿಕೊಂಡು ಇದನ್ನು ಹೇಗೆ ಸುಲಭಗೊಳಿಸಬಹುದೆಂದು ನೋಡೋಣ.
- ಪ್ಲೇ ಸ್ಟೋರಿನಿಂದ google sheets app ಇನ್ಸ್ಟಾಲ್ ಮಾಡಿಕೊಳ್ಳಿ.
- ಮೊಬೈಲಲ್ಲಿ ಕಾಣಿಸುವ sheets ಐಕಾನ್ ಕ್ಲಿಕ್ ಮಾಡಿ.
- ಕೆಳಗೆ ಬಲ ಭಾಗದಲ್ಲಿ ಕಾಣಿಸುವ + ಚಿಹ್ನೆ ಕ್ಲಿಕ್ ಮಾಡಿ.
- New spreadsheet ಕ್ಲಿಕ್ ಮಾಡಿ.
- ಕಾಣಿಸುವ spreadsheetನಲ್ಲಿ ಎಡದಿಂದ ಬಲಕ್ಕೆ A,B,C,D ಇತ್ಯಾದಿ ಕಾಲಂಗಳು ಮತ್ತು ಮೇಲಿನಿಂದ ಕೆಳಕ್ಕೆ 1,2,3,4 ಇತ್ಯಾದಿ ಸಂಖ್ಯೆಗಳಿರುವ rowಗಳು ಕಾಣಿಸುತ್ತವೆ.
- Spreadsheetನಲ್ಲಿ ತುಂಬಿರುವ ಕೋಣೆಗಳಿಗೆ cell ಎಂದು ಹೆಸರು.
- ಕಾಲಂ A ಮತ್ತು row 1 ಸಂಧಿಸುವ ಸೆಲ್ A1, ಕಾಲಂ C ಮತ್ತು row 5 ಸಂಧಿಸುವ ಸೆಲ್ C5 - ಹೀಗೆ ಎಲ್ಲ celllಗಳು ಗುರುತಿಸಲ್ಪಡುತ್ತವೆ.
- ಯಾವುದೇ ಸೆಲ್ಲನ್ನು ಸ್ಪರ್ಶಿಸಿದೊಡನೆ enter text or formula ಎಂದು ಬರೆದಿರುವ ಕೋಣೆಯೊಂದು ಕೆಳಗೆ ಕಾಣಿಸಿಕೊಳ್ಳುತ್ತದೆ.
- ಆ ಕೋಣೆಯನ್ನು ಸ್ಪರ್ಶಿಸಿದೊಡನೆ ತೆರೆದುಕೊಳ್ಳುವ ಕೀ ಬೋರ್ಡಲ್ಲಿ ಟೈಪ್ ಮಾಡಿ ಬಲದಲ್ಲಿರುವ ✓ ಕ್ಲಿಕ್ ಮಾಡಿದರೆ ಅಲ್ಲಿ ಬರೆದಿರುವುದು ಆಯ್ಕೆ ಮಾಡಿದ್ದ ಸೆಲ್ಲಲ್ಲಿ ಮೂಡುತ್ತದೆ. ಮೇಲೆ ಎಡಕ್ಕಿರುವ ✓ ಕ್ಲಿಕ್ ಮಾಡಿದರೆ ಸೇವ್ ಆಗುತ್ತದೆ. ಬೇಕಿದ್ದರೆ ಅದೇ ಸೆಲ್ಲನ್ನು ಸ್ಪರ್ಶಿಸಿ ಬರೆದುದನ್ನು ತಿದ್ದಿಕೊಳ್ಳಬಹುದು.
- ಈ ರೀತಿ ಪ್ರತೀ ದಿನದ ಹಾಲಿನ ಮೊಬಲಗನ್ನು A1,A2, A3 ಇತ್ಯಾದಿ ಸೆಲ್ಲುಗಳಲ್ಲಿ ದಾಖಲಿಸಬಹುದು.
- A1ನಿಂದ A31 ವರೆಗಿನ ಸೆಲ್ಲುಗಳಲ್ಲಿ ತುಂಬಿದ ಮೊಬಲಗಿನ ಮೊತ್ತ C3 ಸೆಲ್ಲಲ್ಲಿ ಕಾಣಿಸಿಕೊಳ್ಳಬೇಕು ಅಂದು ಕೊಳ್ಳೋಣ. ಹಾಗಾಗಬೇಕಿದ್ದರೆ C3 ಸೆಲ್ಲಲ್ಲಿ =sum(a1:a35) ಎಂದು ಟೈಪ್ ಮಾಡಿ ಸೇವ್ ಮಾಡಬೇಕು. ತಿಂಗಳಲ್ಲಿ ಹೆಚ್ಚೆಂದರೆ 31 ಸೆಲ್ಲುಗಳಷ್ಟೇ ಬಳಕೆಯಾಗುವುದಾದರೂ ಕೆಲವು ಸೆಲ್ ಹೆಚ್ಚಿರಲಿ.
- ಅದು ಮೊತ್ತ ಎಂದು ತಿಳಿಯಲು ಅದರ ಎಡದ b3 ಸೆಲ್ಲಲ್ಲಿ Sum ಎಂದು ಟೈಪ್ ಮಾಡಿ.
- ಈಗ a1ನಿಂದ a31 ವರೆಗಿನ ಸೆಲ್ಲುಗಳಲ್ಲಿ ಮೊಬಲಗು ತುಂಬುತ್ತಾ ಹೋದಂತೆ c3 ಸೆಲ್ಲಲ್ಲಿ ಕಾಣಿಸುವ ಮೊತ್ತ automatic ಆಗಿ update ಆಗುತ್ತಾ ಹೋಗುತ್ತದೆ.
- ಈಗ ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ.
- Untitled spredsheet ಎಂದು ಬರೆದಿರುವುದನ್ನು ಅಳಿಸಿ ಇದಕ್ಕೊಂದು ಸೂಕ್ತ ಹೆಸರು ಕೊಡಿ. Milk Account ಎಂದರೆ ಆದೀತು. OK ಕ್ಲಿಕ್ ಮಾಡಿ.
- ಮೇಲ್ಗಡೆ ಎಡಕ್ಕಿರುವ <- ಗುರುತನ್ನು ಕ್ಲಿಕ್ ಮಾಡಿ. ಅಲ್ಲಿ ಮೇಲ್ಗಡೆ Milk Account ಹೆಸರು ಕಾಣಿಸುತ್ತದೆ.
- ಬಲಕ್ಕಿರುವ ಮೂರು ಚುಕ್ಕಿ ಕ್ಲಿಕ್ ಮಾಡಿ.
- ಕೆಳಕ್ಕೆ scroll ಮಾಡಿದಾಗ ಕಾಣಿಸುವ Add to Home screen ಕ್ಲಿಕ್ ಮಾಡಿ. ಈ worksheetನ ಐಕಾನ್ home screenನಲ್ಲಿ ಕಾಣಿಸಿಕೊಳ್ಳುತ್ತದೆ.
- App ಕ್ಲೋಸ್ ಮಾಡಿ.
- ಹೊಸ ಐಕಾನ್ ಬಳಸಿ Milk Account ತೆರೆಯಿರಿ.
- ಬಲ ಭಾಗದ ಮೂರು ಚುಕ್ಕಿ ಒತ್ತಿ available off line ಆಯ್ಕೆ enable ಮಾಡಿ. ಈಗ ಅಂತರ್ಜಾಲ ಇಲ್ಲದಿದ್ದಾಗಲೂ ಇದನ್ನು ಬಳಸಬಹುದು. ಕನೆಕ್ಟ್ ಆದಾಗ ತಾನಾಗಿ ಅಂತರ್ಜಾಲದಲ್ಲಿ save ಆಗುತ್ತದೆ.
ಇದಿಷ್ಟು ಒಂದು ಸಲ ಮಾತ್ರ ಮಾಡಬೇಕಾದ್ದು.
ನಿತ್ಯದ ಬಳಕೆ.
- Icon ಒತ್ತಿ sheet ತೆರೆಯಿರಿ.
- ತಾರೀಕಿಗೆ ಹೊಂದುವ ಸೆಲ್ಲಲ್ಲಿ ಮೊಬಲಗು ತುಂಬಿ, ✓ ಒತ್ತಿ save ಮಾಡಿ, <- ಒತ್ತಿ ಹೊರ ಬನ್ನಿ.
- ಕೆಳಗಡೆ ಕಾಣಿಸುವ Sheet1 ಪಕ್ಕದ arrow ಒತ್ತಿ.
- Rename ಬಳಸಿ ಆ sheetಗೆ ತಿಂಗಳ ಅನುಸಾರ ಹೆಸರು ಕೊಡಿ. ಉದಾ-Jan 2025.
- Duplicate ಒತ್ತಿ ಒಂದು ಪ್ರತಿ ತಯಾರಿಸಿ.
- ಎಡದಿಂದ ಮೊದಲ ಮೂಲ sheetಗೆ ಬನ್ನಿ.
- A1 ಸೆಲ್ಲಿಗೆ ಮುಟ್ಟಿ. ಅಲ್ಲಿ ಮೂಡಿದ ಚೌಕದ ಬಲ ಕೆಳಭಾಗದ dot ಮೇಲೆ ಬೆರಳಿಟ್ಟು A31 ವರೆಗೆ (ಅಥವಾ ಮೊಬಲಗು ಇರುವಲ್ಲಿ ವರೆಗೆ) ಎಳೆಯಿರಿ. ಅಷ್ಟು ಸೆಲ್ಲುಗಳು select ಆಗುತ್ತವೆ.
- ಆ ಭಾಗದ ಮೇಲೆ long press ಮಾಡಿದಾಗ ಕಾಣಿಸುವ clear ಒತ್ತಿದರೆ sheet ಮುಂದಿನ ತಿಂಗಳ ಬಳಕೆಗೆ ಸಿದ್ಧವಾಗುತ್ತದೆ. ಆರಂಭದಲ್ಲಿ ಇದು ಕಷ್ಟ ಎನಿಸಿದರೆ ಒಂದೊಂದೇ ಸೆಲ್ಲನ್ನು long press ಮಾಡಿ clear ಮಾಡಬಹುದು.
ಕಾಲಂ ಅಗಲ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು, ಸೆಲ್ಲುಗಳಿಗೆ ಸೂಕ್ತ ಬಣ್ಣ ತುಂಬಿ ಅಂದಗೊಳಿಸಬಹುದು. ಇದೆಲ್ಲ optional.
ಸಿದ್ಧ ಮಾದರಿಯ templateಗಳ sheetಗಳು ಇವೆಯಾದರೂ ನಮ್ಮ ಸರಳ ಅಗತ್ಯಕ್ಕೆ ತಕ್ಕವುಗಳನ್ನು ನಾವೇ design ಮಾಡಿದರೆ ಅನುಕೂಲವೂ ಹೆಚ್ಚು, ಖುಶಿಯೂ ಹೆಚ್ಚು.
ಒಮ್ಮೆ ಇದರ ರುಚಿ ಹತ್ತಿದರೆ ವಿವಿಧ ಉದ್ದೇಶಗಳಿಗೆ ಬಳಸದೆ ಇರಲಾರಿರಿ.
ಚಿದಂಬರ ಕಾಕತ್ಕರ್.