1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ಅವರು ರಚಿಸಿದ ಈ ಕವನವನ್ನು ಸಿ.ರಾಮಚಂದ್ರ ಅವರ ಸಂಗೀತ ದಿಗ್ದರ್ಶನದಲ್ಲಿ ಲತಾ ಮಂಗೇಷ್ಕರ್ January 27, 1963 ರಂದು ನೇಶನಲ್ ಸ್ಟೇಡಿಯಂನಲ್ಲಿ ಅಂದಿನ ಪ್ರಧಾನಿ ನೆಹರು ಅವರ ಸಮ್ಮುಖದಲ್ಲಿ ಹಾಡಿದ್ದರು. ಇದಕ್ಕಾಗಿ ಯಾರೂ ರಾಯಲ್ಟಿ ಸ್ವೀಕರಿಸಬಾರದು ಮತ್ತು ಇದನ್ನು ಯಾವ ಚಲನ ಚಿತ್ರದಲ್ಲೂ ಬಳಸಿಕೊಳ್ಳಬಾರದು ಎಂಬ ಶರತ್ತುಗಳೊಡನೆ ನಂತರ ಇದರ ಗ್ರಾಮೊಫೋನ್ ರೆಕಾರ್ಡ್ ಕೂಡ ತಯಾರಿಸಲಾಯಿತು. 50ರ ದಶಕದ ಕೊನೆಯಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಉಂಟಾಗಿದ್ದ ವಿರಸದ ಕಾರಣದಿಂದ ಆಗ ಸಿ. ರಾಮಚಂದ್ರ ಅವರ ಹಾಡುಗಳನ್ನು ಲತಾ ಮಂಗೇಷ್ಕರ್ ಹಾಡುತ್ತಿರಲಿಲ್ಲ. ಹೀಗಾಗಿ ಇದನ್ನು ಆಶಾ ಭೋಸ್ಲೆ ಹಾಡುವುದೆಂದು ತೀರ್ಮಾನವಾಗಿ ರಿಹರ್ಸಲ್ ಕೂಡ ನಡೆಸಿ ಆಗಿತ್ತಂತೆ. ಆದರೆ ಪ್ರಧಾನಿ ಎದುರು ಹಾಡುವ ಅವಕಾಶ ಕಳೆದುಕೊಳ್ಳಬಯಸದ ಲತಾ ತಾತ್ಕಾಲಿಕವಾಗಿ ego ಬದಿಗಿಟ್ಟು ತಾನೇ ಹಾಡಲು ಮುಂದಾದುದರಿಂದ ಆಶಾ ಭೋಸ್ಲೆ ಹಿಂದೆ ಸರಿದರಂತೆ. ಈ ಹಾಡಿನ ಧಾಟಿ ಕವಿ ಪ್ರದೀಪ್ ಅವರದ್ದೇ, ವಾದ್ಯ ಸಂಯೋಜನೆ ಮತ್ತು arrangement ಮಾತ್ರ ಸಿ.ರಾಮಚಂದ್ರ ನಿರ್ವಹಿಸಿದ್ದು ಎಂದೂ ಕೆಲವರು ಹೇಳುತ್ತಾರೆ. ಪ್ರದೀಪ್ ಅವರು ಸಂಗೀತ ಜ್ಞಾನ ಕೂಡ ಉಳ್ಳವರಾಗಿದ್ದು ಆವೋ ಬಚ್ಚೊ ತುಮ್ಹೆ ದಿಖಾಯೆಂ, ದೇಖ್ ತೆರೇ ಸಂಸಾರ್ ಕೀ ಹಾಲತ್ ಮುಂತಾದ ಹಾಡುಗಳನ್ನು ಸ್ವತಃ ಹಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಆ ಮೇಲೆ ಲತಾ ಮಂಗೇಷ್ಕರ್ ಅನೇಕ ಸಮಾರಂಭಗಳ ವೇದಿಕೆಗಳಲ್ಲಿ ಇದನ್ನು ಹಾಡಿರುವುದನ್ನು ನೀವು ಕೇಳಿರುತ್ತೀರಿ. ಆದರೆ ಮೂಲ ಗ್ರಾಮೊಫೋನ್ ರೆಕಾರ್ಡ್ ವರ್ಷನ್ ಕೇಳುವಾಗಿನ ಅನುಭವವೇ ಬೇರೆ. ಆ ಕಾಲದಲ್ಲಿ ದಿನನಿತ್ಯವೆಂಬಂತೆ ವಿವಿಧಭಾರತಿಯಲ್ಲಿ ಇದು ಪ್ರಸಾರವಾಗುತ್ತಿತ್ತು. ನನಗಂತೂ ಇದನ್ನು ಕೇಳಿದಾಗ ನಮ್ಮ ಮನೆಗೆ ಆಗತಾನೇ ಕಾಲಿಟ್ಟಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಷ್ ಪರಿಮಳವೇ ಮೂಗಿಗೆ ಅಡರುತ್ತದೆ!
ಈ ಹಾಡಿನ ಆರಂಭದಲ್ಲಿರುವ ಡೋಲು ತಮ್ಮಟೆಗಳ ಸದ್ದಿಗೂ ವಿಶೇಷ ಅರ್ಥ ಇದೆ. ಅದು ಜನರು ಸ್ವಾತಂತ್ರ್ಯವನ್ನು ಸಂಭ್ರಮಿಸುವುದರ ಸಂಕೇತ. ಅದನ್ನು ಕಂಡು ಕವಿಯು "ನೀವು ಬೇಕಾದಷ್ಟು ಸಂಭ್ರಮಿಸಿ. ಧ್ವಜವನ್ನೂ ಅರಳಿಸಿ. ಆದರೆ ಗಡಿಗಳಲ್ಲಿ ಪ್ರಾಣ ತೆತ್ತ ಯೋಧರನ್ನು ಮರೆಯದಿರಿ" ಎಂದು ಎಚ್ಚರಿಸುತ್ತಾನೆ.
ಗ್ರಾಮೊಫೋನ್ ರೆಕಾರ್ಡ್ ರೂಪದಲ್ಲಿ ಕೇಳಬಯಸುತ್ತೀರಾದರೆ ಇಲ್ಲಿದೆ.
ಏ ಮೇರೆ ವತನ್ ಕೆ ಲೋಗೊ ತುಮ್ ಖೂಬ್ ಲಗಾಲೋ ನಾರಾ
ಯೇ ಶುಭ್ ದಿನ್ ಹೈ ಹಮ್ ಸಬ್ ಕಾ ಲಹರಾಲೊ ತಿರಂಗಾ ಪ್ಯಾರಾ
ಪರ್ ಮತ್ ಭೂಲೋ ಸೀಮಾ ಪರ್ ವೀರೋ ನೆ ಹೈ ಪ್ರಾಣ್ ಗವಾಯೆ
ಕುಛ್ ಯಾದ್ ಉನ್ಹೆ ಭೀ ಕರ್ ಲೋ (2)
ಜೊ ಲೌಟ್ ಕೆ ಘರ್ ನ ಆಯೆ (2)
ಏ ಮೇರೆ ವತನ್ ಕೆ ಲೋಗೊ ಜರಾ ಆಂಖ್ ಮೆ ಭರ್ ಲೊ ಪಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ
ಜಬ್ ಘಾಯಲ್ ಹುವಾ ಹಿಮಾಲಯ್ ಖತರೆ ಮೆಂ ಪಡೀ ಆಜಾದೀ
ಜಬ್ ತಕ್ ಥೀ ಸಾಂಸ್ ಲಡೇ ವೊ(2) ಫಿರ್ ಅಪನೀ ಲಾಶ್ ಬಿಛಾ ದೀ
ಸಂಗೀನ್ ಪೆ ಧರ್ ಕರ್ ಮಾಥಾ ಸೋ ಗಯೇ ಅಮರ್ ಬಲಿದಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ
ಜಬ್ ದೇಶ್ ಮೆಂ ಥೀ ದೀವಾಲೀ ವೊ ಖೆಲ್ ರಹೆ ಥೆ ಹೋಲಿ
ಜಬ್ ಹಮ್ ಬೈಠೆ ಥೆ ಘರೊ ಮೆಂ (2) ವೊ ಝೇಲ್ ರಹೆ ಥೆ ಗೋಲಿ
ಥೆ ಧನ್ಯ್ ಜವಾನ್ ವೊ ಅಪನೆ ಥೀ ಧನ್ಯ್ ವೊ ಉನ್ ಕೀ ಜವಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ
ಕೋಯಿ ಸಿಖ್ ಕೊಯಿ ಜಾಟ್ ಮರಾಠಾ(2) ಕೋಯಿ ಗುರಖಾ ಕೋಯಿ ಮದರಾಸೀ(2)
ಸರಹದ್ ಪರ್ ಮರನೇವಾಲಾ(2) ಹರ್ ವೀರ್ ಥಾ ಭಾರತ್ ವಾಸೀ
ಜೊ ಖೂನ್ ಗಿರಾ ಪರಬತ್ ಪರ್ ವೊ ಖೂನ್ ಥಾ ಹಿಂದುಸ್ತಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ
ಥೀ ಖೂನ್ ಸೆ ಲತ್ ಪಥ್ ಕಾಯಾ ಫಿರ್ ಭೀ ಬಂದೂಕ್ ಉಠಾಕೆ
ದಸ್ ದಸ್ ಕೊ ಏಕ್ ನೆ ಮಾರಾ ಫಿರ್ ಗಿರ್ ಗಯೆ ಹೋಶ್ ಗವಾ ಕೆ
ಜಬ್ ಅಂತ್ ಸಮಯ್ ಆಯಾ ತೋ(2) ಕಹ್ ಗಯೇ ಕೆ ಅಬ್ ಮರ್ ತೇ ಹೈಂ
ಖುಶ್ ರಹನಾ ದೇಶ್ ಕೆ ಪ್ಯಾರೋ(2) ಅಬ್ ಹಮ್ ತೊ ಸಫರ್ ಕರತೇ ಹೈಂ(2)
ಕ್ಯಾ ಲೋಗ್ ಥೆ ವೊ ದೀವಾನೆ ಕ್ಯಾ ಲೋಗ್ ಥೆ ವೊ ಅಭಿಮಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ
ಜೈ ಹಿಂದ್ ಜೈ ಹಿಂದ್ ಕೀ ಸೇನಾ(2)
ಜೈ ಹಿಂದ್ ಜೈ ಹಿಂದ್ ಜೈ ಹಿಂದ್

ಓ ಎನ್ನ ದೇಶ ಬಾಂಧವರೆ ಎಂಬ ಇದರ ಕನ್ನಡ ಅವತರಣಿಕೆಯೂ ಒಂದಿದೆ. ಮೊತ್ತ ಮೊದಲು ಇದು ಕೇಳಿ ಬಂದದ್ದು ಆಕಾಶವಾಣಿ ಮುಂಬಯಿಯ ಸಾಪ್ತಾಹಿಕ ಕನ್ನಡ ಕಾರ್ಯಕ್ರಮದಲ್ಲಿ. ಯಾರ ಧ್ವನಿಯಲ್ಲೆಂದು ನೆನಪಿಲ್ಲ. ಈಗ ಅದನ್ನು ಅನೇಕರು ಹಾಡಿದ್ದಾರೆ. ಬಿ.ಆರ್.ಛಾಯಾ ಹಾಡಿದ್ದನ್ನು ಇಲ್ಲಿ ಕೇಳಬಹುದು.