30 ವರ್ಷಗಳ ಹಿಂದೆ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ನಾನು ನುಡಿಸಿದ್ದ ಮಹಾಗಣಪತಿಂ ಕೀರ್ತನೆ. ಆರಂಭದಲ್ಲಿ ಆಗ ಮಂಗಳೂರಲ್ಲಿ ಉದ್ಘೋಷಕರಾಗಿದ್ದು ಈಗ ಬೆಂಗಳೂರಲ್ಲಿ ವಾರ್ತಾ ವಾಚಕರಾಗಿರುವ K.T. ಕೃಷ್ಣಕಾಂತ್ ಅವರ ಧ್ವನಿಯನ್ನು ಆಲಿಸಬಹುದು. ಪ್ರಸಿದ್ಧ ಕಲಾವಿದರಾದ ಶ್ರೀ ಶ್ರೀನಾಥ ಮರಾಠೆ ಅವರು ತಂಬೂರ, ಶ್ರೀ ಹರಿಶ್ಚಂದ್ರನ್ ಅವರು ಮೃದಂಗ ಮತ್ತು ಶ್ರೀ A.R.ಕೃಷ್ಣಮೂರ್ತಿ ಅವರು ವಯಲಿನ್ ನುಡಿಸಿ ಪ್ರೋತ್ಸಾಹಿಸಿದ್ದರು. ಈ ಕೀರ್ತನೆಯ ಒಂದು ಸಾಲು ನುಡಿಸಿದಾಕ್ಷಣ ನಿಮ್ಮ ಗುರುಗಳು ಯಾರು ಎಂದು ಯಾರಾದರೂ ಕೇಳುವಷ್ಟು ಛಾಪನ್ನು ನನ್ನಲ್ಲಿ ಮೂಡಿಸುವಲ್ಲಿ ಗುರುಗಳಾದ ಶ್ರೀ ಗೋಪಾಲಕೃಷ್ಣ ಅಯ್ಯರ್ ಅವರು ಸಫಲರಾಗಿದ್ದರು.
ಚಿದಂಬರ ಅವರೇ ನಿಮ್ಮ ಕೊಳಲು ನುಡಿಸುವಿಕೆ ಬಹಳ ಚೆನ್ನಾಗಿದೆ . ನೀವು ಕರ್ನಾಟಕ ಸಂಗೀತ ಕಲಿತಿದ್ದೀರೆಂದು ತಿಳಿದು ಬಹಳ ಸಂತೋಷವಾಯಿತು . ನನಗೂ ಕರ್ನಾಟಕ ಸಂಗೀತವೆಂದರೆ ಬಹಳ ಇಷ್ಟ . ನಮ್ಮ ತಾಯಿಯವರು ವೀಣೆ ನುಡಿಸುತ್ತಿದ್ದರು ಹಾಗು ಹಾಡುತ್ತಿದ್ದರು . ನನಗೆ ಹಳೆಯ ಹಿಂದಿ ಹಾಡುಗಳೆಂದರೆ ಪ್ರಿಯ .ಅದರಲ್ಲೂ ಎಸ್. ಡಿ. ಬರ್ಮನ್ ಅವರ ಸಂಗೀತ ಬಹಳ ಇಷ್ಟ . ಧನ್ಯವಾದಗಳು .
ReplyDeleteಶ್ರೀನಿವಾಸನ್
Very Nice Sir
ReplyDelete